More

    ಕೇವಲ 87 ರೂಪಾಯಿಗೆ ಮನೆ ಮಾರಾಟ! ಆದರೆ ಷರತ್ತು ಅನ್ವಯ, ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ

    ರೋಮ್​: ನೀವೇನಾದರೂ ಮನೆ ಕೊಳ್ಳುವ ಯೋಜನೆ ಹಾಕಿಕೊಂಡಿದ್ದೀರಾ? ಕಡಿಮೆ ಅಂದ್ರೆ ಅತಿ ಕಡಿಮೆ ಬೆಲೆಗೆ ಮನೆಗಳಲ್ಲಿ ಇಲ್ಲಿ ಲಭ್ಯವಿದೆ. ಹೌದು, ನೀವು ಕೇವಲ 87 ರೂಪಾಯಿಗೆ ಮನೆಯನ್ನು ಖರೀದಿಸಬಹುದು. ಎಲ್ಲ ಸೌಕರ್ಯಗಳು ಇರುವ ಮನೆಯನ್ನು ಇಷ್ಟು ಕಡಿಮೆ ಬೆಲೆಗೆ ಇಡೀ ಜಗತ್ತಿನಲ್ಲಿ ಎಲ್ಲಾದರೂ ಮಾರಾಟ ಮಾಡ್ತಾರಾ? ಸಾಧ್ಯವೇ ಇಲ್ಲ. ಆದ್ರೆ, ಇಲ್ಲಿ ಸಾಧ್ಯವಿದೆ. ಅದ್ಹೇಗೆ ಎಂದು ತಿಳಿಯಲು ಈ ಸ್ಟೋರಿ ಓದಿ…

    ಬಿಸಾಕಿಯಾ ಎಂಬುದು ಇಟಲಿಯ ಒಂದು ಸುಂದರ ನಗರ. ಇದು ಇಟಲಿ ರಾಜಧಾನಿ ರೋಮ್‌ನ ಆಗ್ನೇಯ ಭಾಗದಲ್ಲಿ ಸುಮಾರು 70 ಕಿ.ಮೀ ದೂರದಲ್ಲಿದೆ. ಈ ಪಟ್ಟಣದಲ್ಲಿ ಒಂದು ಯೂರೋ (ಇಟಲಿ ಕರೆನ್ಸಿ)ಗಿಂತಲೂ ಕಡಿಮೆ ಬೆಲೆಗೆ ಮನೆ ಲಭ್ಯವಿದೆ. ಅಷ್ಟೊಂದು ಕಡಿಮೆ ಬೆಲೆಗೆ ಮನೆಗಳನ್ನು ಯಾಕೆ ಮಾರಾಟ ಮಾಡ್ತಿದ್ದಾರೆ? ಏಕಂದ್ರೆ, ಇಲ್ಲಿನ 90ರವರೆಗಿನ ಬಹುತೇಕ ಮನೆಗಳು ಶಿಥಿಲಾವಸ್ಥೆಯಲ್ಲಿವೆ. ಹೀಗಾಗಿ ಈ ಸುಂದರ ನಗರದಲ್ಲಿ ಸದ್ಯ ಯಾರು ವಾಸವಿಲ್ಲ. ಇದರಿಂದ ಆ ನಗರವೇ ತುಂಬಾ ಬೇಸರಗೊಂಡಿದೆ. ಆದ್ದರಿಂದ ಅತಿ ಕಡಿಮೆ ಬೆಲೆಗೆ ಇಲ್ಲಿನ ಮನೆಗಳನ್ನು ಮಾರಾಟ ಮಾಡಲಾಗುತ್ತಿದೆ. ಹೆಚ್ಚು ಜನರು ಈ ನಗರಕ್ಕೆ ಬಂದು ವಾಸಿಸಲು ಉತ್ತೇಜನ ನೀಡಲು ಅಲ್ಲಿನ ಸ್ಥಳಿಯ ಆಡಳಿತ ಈ ಕ್ರಮ ತೆಗೆದುಕೊಂಡಿದೆ.

    ಈ ಬಗ್ಗೆ ಮಾತನಾಡಿರುವ ಬಿಸಾಕಿಯಾ ಪಟ್ಟಣದ ಡೆಪ್ಯೂಟಿ ಮೇಯರ್ ಫ್ರಾನ್ಸಿಸ್ಕೋ ಟಾರ್ಟಾಗ್ಲಿಯಾ, ನಗರವಾಗಿ ಅಭಿವೃದ್ಧಿಪಡಿಸಲು ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಬಿಸಾಕಿಯಾ ಅಂತ್ಯಂತ ಹಳೆಯದಾದ ನಗರವಾಗಿದೆ. ಇಲ್ಲಿನ ಮನೆಗಳು ರಸ್ತೆಯ ಎರಡೂ ಬದಿಗಳಲ್ಲಿ ಒಂದರ ಪಕ್ಕ ಒಂದರಂತೆ ಅಂಟಿಕೊಂಡಿವೆ. ಅಕ್ಕಪಕ್ಕದಲ್ಲಿ ಉಳಿಯಲು ಬಯಸುವ ಕುಟುಂಬಗಳಿಗೆ ಉತ್ತಮವಾದ ಮನೆಗಳನ್ನು ಖರೀದಿಸಲು ಪ್ರೋತ್ಸಾಹಿಸಲಾಗುತ್ತದೆ ಎಂದು ಫ್ರಾನ್ಸಿಸ್ಕೋ ಟಾರ್ಟಾಗ್ಲಿಯಾ ಹೇಳಿದರು.

    ಜನರಿಲ್ಲದೇ ಬೇಸರಗೊಂಡಿದ್ದ ಈ ಪಟ್ಟಣವೂ ಮತ್ತೆ ಹೆಚ್ಚಿನ ಜನಸಂಖ್ಯೆಯೊಂದಿಗೆ ಉತ್ತಮ ಸಂವಹನ ನಡೆಸಲು ಬಯಸುತ್ತಿದೆ. ಆದರೆ, ಇಲ್ಲಿ ಮನೆಗಳನ್ನು ಕೊಳ್ಳುವ ಮುನ್ನ ಒಂದು ಒಪ್ಪಂದಕ್ಕೆ ಮಾಡಿಕೊಳ್ಳಬೇಕು. ಮನೆ ಖರಿದೀಸಿದವರು ತಾವೇ ದುರಸ್ಥಿ ಮಾಡಿಸಿಕೊಳ್ಳಬೇಕು. ಪುನರ್ನಿರ್ಮಾಣ ಮಾಡಬೇಕಾಗಿದ್ದು, ಎಲ್ಲಾ ಹೊಸ ಮನೆಗಳನ್ನು ಮರುರೂಪಿಸಬೇಕಿದೆ. ಹಣದ ಹೂಡಿಕೆಯ ಮಟ್ಟವನ್ನು ಅವಲಂಬಿಸಿ ಮನೆಗಳನ್ನು ಮರುರೂಪಿಸಬೇಕಿದೆ. ಮನೆ ಖರೀದಿಸಿದ ಮೂರು ವರ್ಷಗಳವರೆಗೆ ಮನೆಯನ್ನು ತಪ್ಪದೇ ನವೀಕರಣ ಮಾಡಲೇಬೇಕು. ಈ ಒಪ್ಪಂದದಲ್ಲಿ 5 ಸಾವಿರ ಯುರೋಗಳನ್ನು ಠೇವಣಿ ಇಡಬೇಕು. ಮನೆಗಳು ನವೀಕರಣಗೊಂಡ ಬಳಿಕ ಆ ಹಣ ಮರುಪಾವತಿ ಮಾಡಲಾಗುವುದು ಎಂದು ಫ್ರಾನ್ಸಿಸ್ಕೋ ಟಾರ್ಟಾಗ್ಲಿಯಾ ತಿಳಿಸಿದರು.

    20ನೇ ಶತಮಾನದ 1980ರಲ್ಲಿ ವಿಪತ್ತುಗಳು ಮತ್ತು ಭೂಕಂಪನಗಳಿಂದಾಗಿ ಈ ಪಟ್ಟಣ ಸಂಪೂರ್ಣ ಅಳಿಸಿ ಹೋಗಿದೆ. ವಿಪತ್ತಿನ ಭಯದಲ್ಲೇ ಇಲ್ಲಿನ ಜನರು ಅಂದಿನ ದಿನಗಳಲ್ಲಿ ವಾರಾಂತ್ಯದಲ್ಲಿ ಸುರಕ್ಷಿತ ಪ್ರದೇಶಗಳಿಗೆ ಬೃಹತ್​ ಮಟ್ಟದಲ್ಲಿ ವಲಸೆ ಹೋದರು. ಅಂದಿನಿಂದ ಇಂದಿನವರೆಗೂ ಆ ಪಟ್ಟಣ ಖಾಲಿ ಬಿದ್ದಿದೆ. ಯಾವೊಂದು ಮನೆಗಳು ಕೂಡ ರಿಪೇರಿ ಆಗಿಲ್ಲ. ಒಂದು ಕಾಲದಲ್ಲಿ ಸುಂದರ ನಗರವಾಗಿದ್ದ ಇದರಲ್ಲಿ ಹತ್ತಾರು ಕೈಬಿಟ್ಟ ಅಥವಾ ಖಾಲಿ ಇರುವ ಗುಡಿಸಲುಗಳು ಸಹ ಮಾರಾಟದಲ್ಲಿವೆ ಎಂದು ಫ್ರಾನ್ಸಿಸ್ಕೋ ಟಾರ್ಟಾಗ್ಲಿಯಾ ಹೇಳಿದರು.

    ಮನೆ ಖರೀದಿಸುವ ಆಸಕ್ತಿ ಇದ್ದರೆ, ಆಗಸ್ಟ್​ 28ರ ಒಳಗೆ ಅರ್ಜಿ ಸಲ್ಲಿಸಬೇಕು. ಖರೀದಿದಾರರಿಗೆ ಹೆಚ್ಚಿನ ಮನೆಗಳು ಲಭ್ಯವಿರುತ್ತವೆ ಎಂದು ಟಾರ್ಟಾಗ್ಲಿಯಾ ಹೇಳಿದರು. ಜನಸಂಖ್ಯೆ ಕಡಿಮೆಯಾದಂತೆ ಇಟಲಿಯಲ್ಲಿ ನೆಲೆಸಲು ಪ್ರೋತ್ಸಾಹಿಸಲು ಯುರೋ ಹೌಸಿಂಗ್ ಯೋಜನೆಯನ್ನು ಕಳೆದ ವರ್ಷ ಇಟಲಿ ಆರಂಭಿಸಿದೆ. (ಏಜೆನ್ಸೀಸ್​)

    ಮೇಡಂ ನಿಮ್ಮನ್ನು ಮದುವೆ ಆಗಲು ಬಯಸಿದ್ದೇನೆ! ನೆಟ್ಟಿಗನ ಪ್ರಪೋಸ್​ಗೆ ನಟಿ ಖುಷ್ಬೂ ಕೊಟ್ಟ ಉತ್ತರ ಹೀಗಿತ್ತು…

    ಮಕ್ಕಳಿಗೆ ಮೂರನೇ ಅಲೆ ಅಪಾಯ ಆತಂಕ; ಎನ್​ಐಡಿಎಂ ವರದಿ, ಎಚ್ಚರಿಕೆ ಅಕ್ಟೋಬರ್​ನಲ್ಲಿ ಉತ್ತುಂಗದ ಸಾಧ್ಯತೆ

    ರಾಜ್ಯದಲ್ಲಿ ಸೌಲಭ್ಯ ವಂಚಿತ ಮಾಹೇಶ್ವರಿ ಸಮುದಾಯ; ಜಾತಿ ಪಟ್ಟಿಗೆ ಸೇರಿಸಿ, ಭಾಷಾ ಅಲ್ಪಸಂಖ್ಯಾತ ಸಮುದಾಯವೆಂದು ಗುರುತಿಸಲು ಸರ್ಕಾರಕ್ಕೆ ಮೊರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts