ಒಂದು ಸಿನಿಮಾ ಸೂಪರ್ ಹಿಟ್ ಆಗಲು ಕಾರಣ ಅಂದರೆ ಅದು ಹೀರೋ ಮತ್ತು ಹೀರೋಯಿನ್ ಅಂತ ಹೇಳುವುದರಲ್ಲಿ ತಪ್ಪಿಲ್ಲ. ಇದೇ ಕಾರಣಕ್ಕೆ, ಪ್ಯಾನ್ ಇಂಡಿಯನ್ ಸಿನಿಮಾ 'ರಾಧೆ ಶ್ಯಾಮ್' ಎಲ್ಲರ ಗಮನ ಸೆಳೆದಿದೆ. ಹೌದು, ಸೌತ್ನ ಡಾರ್ಲಿಂಗ್ ಪ್ರಭಾಸ್ ಮತ್ತು ಬುಟ್ಟ ಬೊಮ್ಮ ನಟಿ ಪೂಜಾ ಹೆಗ್ಡೆ ಮೊದಲ ಬಾರಿ ಒಟ್ಟಿಗೆ ತೆರೆ ಹಂಚಿಕೊಳ್ಳಲಿರುವ ಸಿನಿಮಾ 'ರಾಧೆ ಶ್ಯಾಮ್'. ಈ ಚಿತ್ರದ ಟ್ರೈಲರ್ ಡಿ.23 ರಂದು ಬಿಡುಗಡೆಯಾಗಿದ್ದು, ರೊಮ್ಯಾಂಟಿಕ್ ಸಿನಿಮಾ ಲವರ್ಸ್ ನಿದ್ದೆ ಗೆಡಿಸಿದೆ ಎಂದು ಹೇಳವುದರಲ್ಲಿ ಅತಿಶಯೋಕ್ತಿ ಇಲ್ಲ. ಸದ್ಯ, 'ರಾಧೆ ಶ್ಯಾಮ್' ಟ್ರೈಲರ್ನ ಹೈಲೈಟ್ಗಳ ಬಗ್ಗೆಯೇ ಚರ್ಚೆ ಜೋರಾಗಿದೆ. ಹಾಗಾದರೆ, ಸಿನಿ ಪ್ರೇಕ್ಷಕರಿಗೆ ಟ್ರೈಲರ್ನಲ್ಲಿ ಇಷ್ಟವಾದ ಅಂಶಗಳು ಯಾವವು ಅಂತೀರಾ...?