

ಮುಂಬೈ: ಸಲ್ಮಾನ್ ಖಾನ್ ಅಭಿನಯದ ರಾಧೇ – ಯುವರ್ ಮೋಸ್ಟ್ ವಾಂಟೆಡ್ ಭಾಯ್ ಚಿತ್ರವು ಗುರುವಾರ ಚಿತ್ರಮಂದಿರ ಮತ್ತು ಓಟಿಟಿಗಳಲ್ಲಿ ಬಿಡುಗಡೆಯಾಗಿದೆ. ಮಧ್ಯಾಹ್ನ 12 ಗಂಟೆಗೆ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಮೊದಲೇ ಹೇಳಲಾಗಿತ್ತು. ಅದರಂತೆ, 12 ಗಂಟೆಗೆ 12.5 ಲಕ್ಷ ಒಟ್ಟಿಗೆ ಲಾಗ್ ಆನ್ ಆಗುವುದಕ್ಕೆ ಹೋಗಿ ಸರ್ವರ್ ಕ್ರಾಶ್ ಆದ ಘಟನೆಯೂ ನಡೆಯಿತು.
ಎಲ್ಲ ಸರಿ, ಚಿತ್ರ ಹೇಗಿದೆ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಚಿತ್ರ ನೋಡಿದವರು ಅಷ್ಟೇನೂ ಒಳ್ಳೆಯ ಮಾತುಗಳನ್ನಾಡಿಲ್ಲ. ಸಾರ್ವಜನಿಕರು, ವಿಮರ್ಶಕರು ಚಿತ್ರ ಬಹಳ ಸಾಧಾರಣವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನಿರೀಕ್ಷೆಗಳಿಗೆ ತಕ್ಕ ಹಾಗೆ ಚಿತ್ರ ಮೂಡಿ ಬಂದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ, ಐಎಂಡಿಬಿಯಲ್ಲಿ ಚಿತ್ರಕ್ಕೆ ಕೆಟ್ಟ ರೇಟಿಂಗ್ ಸಿಕ್ಕಿದ್ದು, ಸಲ್ಮಾನ್ ವೃತ್ತಿಜೀವನದಲ್ಲೇ ಅತ್ಯಂತ ಕೆಟ್ಟ ಚಿತ್ರ ಎಂದು ಹೇಳಲಾಗುತ್ತಿದೆ. 10ಕ್ಕೆ ಕೇವಲ 2.5 ರೇಟಿಂಗ್ ಮಾತ್ರ ಸಿಕ್ಕಿರುವುದು ನೋಡಿದರೆ, ಜನ ಈ ಚಿತ್ರವನ್ನು ಹೇಗೆ ಸ್ವೀಕರಿಸಿದ್ದಾರೆ ಎಂಬುದು ಅರ್ಥವಾಗುತ್ತದೆ. ಇದು ಸಲ್ಮಾನ್ ಅವರ ಇದುವರೆಗಿನ ಚಿತ್ರಗಳಲ್ಲೇ ಅತ್ಯಂತ ಕಡಿಮೆ ರೇಟಿಂಗ್ ಎಂದು ಹೇಳಲಾಗುತ್ತಿದೆ. ರಾಧೇ ಚಿತ್ರವು ಔಟ್ಲಾಸ್ ಚಿತ್ರದ ಅಧಿಕೃತ ರೀಮೇಕ್ ಆಗಿದ್ದು, ಆ ಚಿತ್ರಕ್ಕೆ 7.2 ರೇಟಿಂಗ್ ಸಿಕ್ಕಿತ್ತು.
ಇದನ್ನೂ ಓದಿ: ಬಿಗ್ ಸುಂದರಿಯರ ಬಗೆ ಬಗೆ ಮಾತು…: 72 ದಿನಗಳ ಕಿರು ಅನುಭವ
ರಾಧೇ ಚಿತ್ರವನ್ನು ಸಲ್ಮಾನ್ ಖಾನ್ ಅವರೇ ನಿರ್ಮಿಸಿದ್ದು, ಪ್ರಭುದೇವ ನಿರ್ದೇಶನ ಮಾಡಿದ್ದಾರೆ. ಸಲ್ಮಾನ್ಗೆ ನಾಯಕಿಯಾಗಿ ದಿಶಾ ಪಠಾಣಿ ನಟಿಸಿದ್ದು, ಜಾಕಿ ಶ್ರಾಫ್, ರಣದೀಪ್ ಹೂಡಾ ಮುಂತಾದವರಿದ್ದಾರೆ.