ಚೆನ್ನೈ: ಕಾಲಿವುಡ್ನ “ಇರುಟ್ಟು ಅರಯಿಲ್ ಮುರಟ್ಟು ಕುತ್ತು” ಹೆಸರಿನ ವಯಸ್ಕರ ಕಾಮಿಡಿ ಚಿತ್ರ ಹಾಗೂ ಬಿಗ್ಬಾಸ್ ಶೋ ಮೂಲಕ ಖ್ಯಾತಿ ಪಡೆದಿರುವ ನಟಿ ಯಶಿಕಾ ಆನಂದ್ ಅವರು ಕಳೆದ ವರ್ಷ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚೇತರಿಸಿಕೊಂಡಿದ್ದು, ಸಂಪೂರ್ಣ ಸಹಜ ಜೀವನಕ್ಕೆ ಮರಳಿದ್ದಾರೆ. ಸಾವಿನ ಹೊಸ್ತಿಲಿಗೆ ಹೋಗಿ ಅದೃಷ್ಟವಶಾತ್ ಬದುಕಿ ಬಂದಿರುವ ಯಶಿಕಾ, ಹಿಂದಿನ ನೋವೆಲ್ಲ ಮರೆತು ಮತ್ತೆ ಗ್ಲಾಮರ್ ಲೋಕದ ಕ್ಷಣಗಳನ್ನು ಸವಿಯುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಿದ್ದ ಯಶಿಕಾ, ಅಪಘಾತದ ನಂತರ ಸಾಕಷ್ಟು ದಿನಗಳ ಕಾಲ ಜಾಲತಾಣದಿಂದ ದೂರ ಉಳಿದಿದ್ದರು. ಇದೀಗ ಸಂಪೂರ್ಣ ಗುಣಮುಖರಾಗಿ ಸಹಜ ಜೀವನಕ್ಕೆ ಮರಳಿರುವ ಯಶಿಕಾ ಮತ್ತೆ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿದ್ದು, ಗ್ಲಾಮರಸ್ ಫೋಟೋಗಳನ್ನು ಹರಿಬಿಡುವ ಸಂಚಲನ ಸೃಷ್ಟಿಸುತ್ತಿದ್ದಾರೆ. ಆಗಾಗಾ ಅಭಿಮಾನಿಗಳ ಜತೆ ಸಂವಹನವನ್ನು ನಡೆಸುತ್ತಿರುತ್ತಾರೆ.
ಇದೀಗ ಯಶಿಕಾ ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟಿರುವ ಹಾಟ್ ಫೋಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಬೀಚ್ ಬೇಬಿ ಎಂಬ ಅಡಿಬರಹದೊಂದಿಗೆ ಕಪ್ಪು ಬಣ್ಣದ ಬಿಕಿನಿ ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಫೋಟೋಗಳು ವೈರಲ್ ಆಗಿದ್ದು, 1.6 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಯಶಿಕಾ ಹಾಟ್ನೆಸ್ ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಬಿಕಿನಿ ಮಾತ್ರವಲ್ಲದೆ, ಎದೆ ಸೀಳು ಕಾಣುವಂತಹ ಬಿಳಿ ಮತ್ತು ಕಪ್ಪು ಬಣ್ಣದ ಕ್ರಾಪ್ ಟಾಪ್ ಧರಿಸಿರುವ ಬೋಲ್ಡ್ ಫೋಟೋಗಳನ್ನೂ ಪೋಸ್ಟ್ ಮಾಡಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ಮಧ್ಯರಾತ್ರಿ ಪಾರ್ಟಿ ಮುಗಿಸಿಕೊಂಡು ಬರುವಾಗ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯಶಿಕಾ ಆನಂದ್ ದೀರ್ಘ ಕಾಲ ಆಸ್ಪತ್ರೆಯಲ್ಲೇ ಉಳಿದು ಚಿಕಿತ್ಸೆ ಪಡೆಯಬೇಕಾಯಿತು. ಎದ್ದು ನಡೆದಾಡಲು ಸಹ ಅವರಿಗೆ ಆಗುತ್ತಿರಲಿಲ್ಲ. ಅಪಘಾತದಲ್ಲಿ ಯಶಿಕಾ ಅವರ ಆಪ್ತ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, 22 ವರ್ಷದ ಯಶಿಕಾ, ಎಸ್.ಜೆ. ಸೂರ್ಯ ಅಭಿನಯದ “ಕಡಮೈಯೆ ಸೈ” ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್)
ಬಂಧನ ಭಯ…ಪರಾರಿಯಾದ ಗೋತಬಯ! ಇಂದು ಬೆಳಗ್ಗೆಯೇ ವಿಮಾನದಲ್ಲಿ ಲಂಕಾ ಅಧ್ಯಕ್ಷರು ಹಾರಿದ್ದೆಲ್ಲಿಗೆ?
ಪಿಂಚಣಿ ಆಸೆಗೆ ವಯೋವೃದ್ಧಿ: ವಯಸ್ಸು ತಿದ್ದುಪಡಿಗೆ ಆಧಾರ್ ಗೋಲ್ಮಾಲ್; ಸುಳ್ಳು ಪ್ರಮಾಣಪತ್ರ ದಂಧೆ..
ಷಷ್ಠಿಪೂರ್ತಿ, ಹೊಸ ಕೀರ್ತಿ: ಪ್ಯಾನ್ ಇಂಡಿಯಾದತ್ತ ಶಿವರಾಜಕುಮಾರ್ ಪ್ರಯಾಣ