More

    ಪಿಂಚಣಿ ಆಸೆಗೆ ವಯೋವೃದ್ಧಿ: ವಯಸ್ಸು ತಿದ್ದುಪಡಿಗೆ ಆಧಾರ್ ಗೋಲ್ಮಾಲ್; ಸುಳ್ಳು ಪ್ರಮಾಣಪತ್ರ ದಂಧೆ..

    | ಶಿವಾನಂದ ತಗಡೂರು ಬೆಂಗಳೂರು

    ಯಾವುದೇ ಸರ್ಕಾರಿ ಸೌಲಭ್ಯ ಪಡೆದುಕೊಳ್ಳುವುದಕ್ಕೆ ಆಧಾರ್ ಕಾರ್ಡ್ ಅಗತ್ಯ. ವಯಸ್ಸಿನ ದಾಖಲೆಗೂ ಇದೇ ಕಾರ್ಡ್ ಅನ್ನು ಪರಿಗಣಿಸಲಾಗುತ್ತಿದೆ. ಹೀಗಾಗಿ ಆಧಾರ್ ಸಂಖ್ಯೆಯೊಂದಿದ್ದರೆ ಎಲ್ಲವೂ ಸರಾಗ. ಇದನ್ನೇ ಬಂಡವಾಳವಾಗಿಸಿಕೊಂಡು ಭಾರಿ ಅಕ್ರಮ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

    ನಿಜ ವಯಸ್ಸು ಮುಚ್ಚಿಟ್ಟು ಆಧಾರ್ ಕಾರ್ಡ್​ನಲ್ಲಿ 60 ವರ್ಷ ಎಂದು ದಾಖಲು ಮಾಡಿಸಿಕೊಂಡು ಪಿಂಚಣಿ ಸೇರಿ ವಿವಿಧ ಸೌಲಭ್ಯಗಳನ್ನು ಕಬಳಿಸಲಾಗುತ್ತಿದೆ. ಈ ದಂಧೆ ಬೆಂಗಳೂರಿಗೆ ಮಾತ್ರವಲ್ಲದೆ, ಜಿಲ್ಲಾ ಕೇಂದ್ರಗಳು, ಆ ಮೂಲಕ ಗ್ರಾಮೀಣ ಪ್ರದೇಶಗಳಿಗೂ ಚಾಚಿಕೊಂಡಿದೆ. ದುರಂತವೆಂದರೆ ಈ ಬಗ್ಗೆ ಮಾಹಿತಿ ಇದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.

    9,700 ಕೋಟಿ ರೂ. ವೆಚ್ಚ: ವೃದ್ಧಾಪ್ಯ, ವಿಧವಾ, ಅಂಗವಿಕಲ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಪಿಂಚಣಿ ಪಡೆಯುವ ಅಂದಾಜು 74 ಲಕ್ಷ ಜನರು ರಾಜ್ಯದಲ್ಲಿದ್ದಾರೆ. ಪಿಂಚಣಿಗಾಗಿಯೇ ರಾಜ್ಯ ಸರ್ಕಾರದ ಖಜಾನೆಯಿಂದ ಪ್ರತಿವರ್ಷ ಅಂದಾಜು 9,700 ಕೋಟಿ ರೂಪಾಯಿ ವ್ಯಯವಾಗುತ್ತಿದೆ. ಪಿಂಚಣಿ ಖಾತೆಗೆ ಆಧಾರ್ ಜೋಡಣೆ ಮಾಡುವ ಮೂಲಕ ಮೃತಪಟ್ಟವರ ಹೆಸರಲ್ಲೂ ಪಿಂಚಣಿ ಹಣ ಪಡೆಯುತ್ತಿದ್ದ ಪ್ರಕರಣಗಳನ್ನು ಪತ್ತೆ ಹಚ್ಚಿ ಸೌಲಭ್ಯ ರದ್ದುಪಡಿಸಲಾಗಿದೆ. ಆದರೆ, ಸುಳ್ಳು ವಯಸ್ಸು ದಾಖಲು ಮಾಡಿ ಆಧಾರ್ ಪಡೆದುಕೊಂಡು ಪಿಂಚಣಿ ಪಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟುವುದು ಸರ್ಕಾರಕ್ಕೀಗ ಸವಾಲಾಗಿದೆ.

    ಸಿಎಂ ಬೊಮ್ಮಾಯಿ ಸೂಚನೆ ಮೇರೆಗೆ 52 ನಿಗಮ-ಮಂಡಳಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷ- ಉಪಾಧ್ಯಕ್ಷರ ನೇಮಕ ರದ್ದು ಮಾಡಲಾಗಿದ್ದು, ಮಂಗಳವಾರ ಅಧಿಕೃತ ಆದೇಶ ಹೊರಬಿದ್ದಿದೆ. ಮಳೆ ಹಾಗೂ ನೆರೆ ಹಾನಿ ಪ್ರದೇಶದ ವೀಕ್ಷಣಾ ಪ್ರವಾಸ ಕೈಗೊಂಡಿರುವ ಸಿಎಂ ಬೊಮ್ಮಾಯಿ ಬುಧವಾರ ಹಿಂತಿರುಗಲಿದ್ದು, ಇಂದು ಇಲ್ಲವೇ ಗುರುವಾರ ಹೊಸ ಪಟ್ಟಿಗೆ ಅಂಕಿತ ಹಾಕುವ ನಿರೀಕ್ಷೆಯಿದೆ.

    14ಕ್ಕೂ ಹೆಚ್ಚು ಜನರ ಬದಲಾವಣೆಯಿಲ್ಲ: ಯಡಿಯೂರಪ್ಪ ಆಪ್ತರು ಸೇರಿ ನಿಗಮ-ಮಂಡಳಿಗೆ ಅಧ್ಯಕ್ಷರಾಗಿರುವ ಶಾಸಕರು ಹಾಗೂ ಮಾಜಿ ಶಾಸಕರಾದ ತಾರಾ ಅನುರಾಧ, ನಂದೀಶ್​ರೆಡ್ಡಿ, ಚಿಕ್ಕನಗೌಡ್ರ, ಮಾರುತಿರಾವ್ ಮುಳೆ, ನಿವೃತ್ತ ಐಎಎಸ್ ಅಧಿಕಾರಿ ಸಿ. ಸೋಮಶೇಖರ್ ಸೇರಿ 14ಕ್ಕೂ ಹೆಚ್ಚು ಜನರ ಸ್ಥಾನ ಅಬಾಧಿತವಾಗಿದೆ. ಹಿರಿಯರು, ಪ್ರಭಾವಿಗಳು ಎಂಬ ಕಾರಣಕ್ಕೆ ಮಾತ್ರವಲ್ಲ ಜಾತಿ-ವರ್ಗ, ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷದ ಹಿಡಿತ, ಹೊಸದಾಗಿ ನೇಮಕ ಆಧಾರದಲ್ಲಿ ಕೆಲವರನ್ನು ಮುಂದುವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಧ್ಯಕ್ಷ ಅಥವಾ ಉಪಾಧ್ಯಕ್ಷ ಪದವಿ ಉಳಿಸಿಕೊಂಡವರ ಪೈಕಿ ಬಹುತೇಕರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿಕಟವರ್ತಿಗಳು ಎಂಬ ಅಂಶವು ಪಕ್ಷದೊಳಗೆ ಬಿಸಿ ಚರ್ಚೆ ಹುಟ್ಟಿಹಾಕಿದೆ.

    ಬಿಎಸ್​ವೈ ಸಮ್ಮತಿ: ಬಿಎಸ್​ವೈ ಸಹಮತಿ ಮೇರೆಗೆ ನಿಗಮ-ಮಂಡಳಿಗಳ ಹಾಲಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ರದ್ದು ಮಾಡಿ, ಹೊಸದಾಗಿ ನೇಮಕ ಮಾಡಲಾಗುತ್ತಿದೆ. ವಿದೇಶ ಪ್ರವಾಸದಿಂದ ಹಿಂತಿರುಗಿದ ಬಿಎಸ್​ವೈ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಭೇಟಿಯಾದ ವೇಳೆ ರಾಜ್ಯದ ರಾಜಕೀಯ ಹಾಗೂ ಸಂಘನಾತ್ಮಕ ಚರ್ಚೆಗಳಾಗಿದ್ದವು ಹೇಳಲಾಗಿತ್ತು.

    ಆದರೆ, ಈ ಮಾತುಕತೆಯಾದ ಎರಡು ದಿನಗಳ ಅಂತರದಲ್ಲಿ ಸಚಿವ ಆರ್. ಅಶೋಕ್ ನೇತೃತ್ವದ ಸಮಿತಿ ಸಭೆ ನಡೆದಿರುವುದು ಉಲ್ಲೇಖನೀಯ. ಸಮಿತಿ ಸದಸ್ಯರಾದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಈ ಸಭೆಯಲ್ಲಿ ಭಾಗವಹಿಸಿದ್ದರು. ಎರಡು ಅಥವಾ ಒಂದೂವರೆ ವರ್ಷ ಪೂರೈಸಿದವರನ್ನು ಕೈಬಿಡಲು ತೀರ್ವನಿಸಲಾಗಿದೆ. ಅಂತೆಯೇ, ಈ ಹಿಂದಿನ ಪಟ್ಟಿ ಪರಿಷ್ಕರಿಸಿ ಹೊಸದಾಗಿ ನೇಮಕವಾಗುವವರ ಯಾದಿ ಸಿದ್ಧಪಡಿಸಲಾಗಿದ್ದು, ಬಿಎಸ್​ವೈ, ಸಿಎಂ ಬೊಮ್ಮಾಯಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಗ್ರೀನ್ ಸಿಗ್ನಲ್ ನೀಡಿದ್ದಾರೆ. ವರಿಷ್ಠರ ಸೂಚನೆಯಂತೆ ಮೊದಲಿಗೆ ರದ್ದು ಆದೇಶ ಹೊರಡಿಸಿ, ತೆರವಾದ ಸ್ಥಾನಕ್ಕೆ ಒಂದೆರಡು ದಿನಗಳ ನಂತರ ನೇಮಕ ಆದೇಶ ಹೊರಡಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಚುನಾವಣೆ ಉದ್ದೇಶ: ಬಹುತೇಕ ಹಿರಿಯ ಕಾರ್ಯಕರ್ತರು ರಾಜಕೀಯ ಅಧಿಕಾರ ಸಿಕ್ಕಿಲ್ಲವೆಂದು ಪಕ್ಷದ ಸಂಘಟನೆಯ ಬಗ್ಗೆ ಅಸಮಾಧಾನಗೊಂಡು ದೂರ ಉಳಿದಿದ್ದರು. ಚುನಾವಣೆ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತರನ್ನು ಸಮಾಧಾನ ಮಾಡುವ ಉದ್ದೇಶದಿಂದ ರಾಜಕೀಯ ಅಧಿಕಾರ ನೀಡಲು ನಿರ್ಧರಿಸಲಾಗಿದೆ. ಆರು ತಿಂಗಳ ಹಿಂದೆಯೇ ನಿರ್ಧಾರ ಮಾಡಲಾಗಿತ್ತು. ಆದರೆ, ಯಡಿಯೂರಪ್ಪನವರ ಸಲುವಾಗಿ ತಡವಾಯಿತು ಎಂದು ವಿಶ್ಲೇಷಿಸಲಾಗಿದೆ.

    ಹೊಸಬರಿಗೆ ಎಷ್ಟು ದಿನ ಅಧಿಕಾರ?: ನಿಗಮ ಮತ್ತು ಮಂಡಳಿಗಳಿಗೆ ಹೊಸಬರನ್ನು ನೇಮಕ ಮಾಡಿದರೂ ಸಹ ಅವರಿಗೆ ಹೆಚ್ಚು ದಿನ ಅಧಿಕಾರ ಸಿಗುವುದಿಲ್ಲ. ಎಂಟು ತಿಂಗಳು ಮಾತ್ರ ಅಧಿಕಾರ ಸಿಗಲಿದೆ. ಅದರ ನಡುವೆ ಬಿಬಿಎಂಪಿ ಮತ್ತು ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಬಂದರೆ ಎರಡು ಮೂರು ತಿಂಗಳು ಓಡಾಡಲು ನಿಗಮದ ಕಾರು ಇರುವುದಿಲ್ಲ. ನೀತಿಸಂಹಿತೆ ಕಾರಣಕ್ಕಾಗಿ ಕಾರನ್ನು ಹಿಂದಕ್ಕೆ ಪಡೆಯಲಾಗುತ್ತದೆ. ಮುಂದಿನ ಮಾರ್ಚ್​ತನಕ ಅಷ್ಟೇ ಈ ಅಧಿಕಾರ ಇರಲಿದೆ.

    ನಿಗಮ-ಮಂಡಳಿ ಅಧ್ಯಕ್ಷರಾಗಿ ಒಂದೂವರೆ ವರ್ಷ ಮೇಲ್ಪಟ್ಟವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು ಎಂದು ಕೋರ್ ಕಮಿಟಿ ಸಭೆಯಲ್ಲಿ ತೀರ್ವನಿಸಲಾಗಿದೆ. ಈ ಬಗ್ಗೆ ಆರು ತಿಂಗಳ ಹಿಂದೆಯೇ ಚರ್ಚೆಯಾಗಿದೆ. ಶೀಘ್ರವೇ ಹೊಸ ನೇಮಕ ಆದೇಶ ಪ್ರಕಟವಾಗಲಿದೆ.

    | ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

    ಆಧಾರ್ ಲಿಂಕ್ ಕಡ್ಡಾಯ ಮಾಡಿದ ಮೇಲೆ 4.26 ಲಕ್ಷ ನಕಲಿ ಅಕೌಂಟ್ ಬಂದ್ ಮಾಡಲಾಗಿದ್ದು, ಇದರಿಂದ ಸರ್ಕಾರಕ್ಕೆ 450 ಕೋಟಿ ರೂ. ಉಳಿತಾಯವಾಗುತ್ತಿದೆ. ಸುಳ್ಳು ಮಾಹಿತಿ ನೀಡಿ ಆಧಾರ್​ನಲ್ಲಿ ವಯಸ್ಸು ಹೆಚ್ಚು ಮಾಡಿಕೊಂಡು ವೃದ್ದಾಪ್ಯ ವೇತನ ಪಡೆಯುತ್ತಿರುವ ಪ್ರಕರಣಗಳ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.

    | ಸತೀಶ್ ಸಾಮಾಜಿಕ ಭದ್ರತಾ ಮತ್ತು ಪಿಂಚಣಿಗಳ ನಿರ್ದೇಶನಾಲಯ ನಿರ್ದೇಶಕ

    ಸರ್ಟಿಫಿಕೇಟ್ ಪಡೆಯುವುದು ಸುಲಭ: ತಾವು ಶಾಲೆಗೆ ಹೋಗಿಯೇ ಇಲ್ಲ, ಅನಕ್ಷರಸ್ಥರು. ಹುಟ್ಟಿದ ನಿಖರ ದಿನಾಂಕ ಗೊತ್ತಿಲ್ಲ. ಅಂದಾಜು ಇಷ್ಟನೇ ಇಸವಿಯಲ್ಲಿ ಹುಟ್ಟಿರಬಹುದು. ಹೀಗಾಗಿ 60 ವರ್ಷ ದಾಟಿದೆ ಎಂದೆಲ್ಲ ಕತೆ ಕಟ್ಟಿ, ವೈದ್ಯರಿಂದ ನಕಲಿ ಪ್ರಮಾಣಪತ್ರ ಪಡೆಯುವುದು ದೊಡ್ಡ ದಂಧೆಯಾಗಿದೆ. ಅಷ್ಟೇ ಅಲ್ಲ, ಮಧ್ಯವರ್ತಿಗಳಿಗೆ 5 ಸಾವಿರ ರೂ. ಕೊಟ್ಟರೆ ಅವರೇ ಎಲ್ಲವನ್ನೂ ನಿಭಾಯಿಸಿ ನಕಲಿ ವಯೋ ಸರ್ಟಿಫಿಕೇಟ್ ಸಿದ್ಧಪಡಿಸಿ ನೀಡುತ್ತಾರೆ. ಸರ್ಕಾರ ಮನಸ್ಸು ಮಾಡಿದರೆ, ಇಂಥ ನಕಲಿ ಫಲಾನುಭವಿಗಳನ್ನು ಪತ್ತೆ ಹಚ್ಚುವುದು ಕಷ್ಟವೇನಲ್ಲ. ಅನುಮಾನಾಸ್ಪದ ಆಧಾರ್ ಕಾರ್ಡ್​ದಾರರ ಪೂರ್ವಾಪರ ಕೆದಕಿ, ಅವರ ಶಾಲಾ ದಾಖಲೆಗಳನ್ನು ಹುಡುಕಿತೆಗೆದರೆ, ಎಲ್ಲ ಮಾಹಿತಿಯೂ ಲಭ್ಯವಾಗಿಬಿಡುತ್ತದೆ. ಆದರೆ, ಅಂಥ ಪ್ರಯತ್ನ ನಡೆಯುತ್ತಿಲ್ಲ.

    ಮೃತಪಟ್ಟರೂ ಹಣ ಪಾವತಿ: ಸತ್ತಿದ್ದರೂ ಮಾಹಿತಿಯನ್ನು ಮುಚ್ಚಿಟ್ಟು ಪಿಂಚಣಿ ಪಡೆಯುವ ಮೂಲಕ ಸರ್ಕಾರಿ ಖಜಾನೆಗೆ ಕನ್ನ ಹಾಕುತ್ತಿದ್ದ ಏಜೆಂಟರ ಜಾಲ ಹೆಡೆಮುರಿ ಕಟ್ಟುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಕಂದಾಯ ಇಲಾಖೆಯ ಸಾಮಾಜಿಕ ಭದ್ರತಾ ಮತ್ತು ಪಿಂಚಣಿಗಳ ನಿರ್ದೇಶನಾಲಯ ಹೊಸದಾಗಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಎಲ್ಲ ಅಕೌಂಟ್​ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ ಮೇಲೆ 4.26 ಲಕ್ಷ ಅಕ್ರಮ ಅಕೌಂಟ್​ಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ ಪ್ರತಿ ತಿಂಗಳ 450 ಕೋಟಿ ರೂ. ಉಳಿತಾಯವಾಗುತ್ತಿದೆ.

    ಫಲಾನುಭವಿಗಳ ಖಾತೆಗೆ ಹಣ: ಹಳೆಯ ಪಿಂಚಣಿ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದ್ದು, ಪ್ರಸ್ತುತ ನೇರ ಫಲಾನುಭವಿಗಳ ಅಕೌಂಟ್​ಗೆ ನೇರವಾಗಿ ಹಣ ಬಿಡುಗಡೆ ಮಾಡುವ ವ್ಯವಸ್ಥೆ ಜಾರಿ ಮಾಡಲಾಗಿದೆ. ಇದರಿಂದ ಅಕ್ರಮಕ್ಕೆ ಕಡಿವಾಣ ಬಿದ್ದಿದೆ.

    ಒಂದೇ ಬ್ಯಾಂಕ್​ನಲ್ಲಿ 165 ನಕಲಿ ಖಾತೆ: ಹಾಸನ ಜಿಲ್ಲೆಯ ಬ್ಯಾಂಕೊಂದಕ್ಕೆ ಸುತ್ತಮುತ್ತಲ ಗ್ರಾಮಗಳ 900 ಜನರ ಪಿಂಚಣಿ ಹಣ ಪ್ರತಿತಿಂಗಳು ತಪ್ಪದೆ ಬರುತ್ತಿದೆ. ಅದರಲ್ಲಿ ಹಣ ಪಡೆಯಲು ಬರುವ ಅನೇಕರು 45-55 ವಯಸ್ಸಿನ ಆಜುಬಾಜಿನಲ್ಲಿದ್ದಾರೆ. ಆದರೆ, ದಾಖಲಾತಿಗಳಲ್ಲಿ 60-70 ವರ್ಷ ಎಂದು ನಮೂದಿಸಿಕೊಂಡು ಪಿಂಚಣಿ ಜೇಬಿಗಿಳಿಸುತ್ತಿದ್ದಾರೆ. ಈ ಬಗ್ಗೆ ಅನುಮಾನ ಬಂದ ಅಧಿಕಾರಿಯೊಬ್ಬರು ಪರಿಶೀಲನೆ ಮಾಡಿದಾಗ 165 ಪ್ರಕರಣ ಬೆಳಕಿಗೆ ಬಂದಿದೆ. ಇಂಥ ಅಕ್ರಮದ ವಿರುದ್ಧ ಕ್ರಮ ಜರುಗಿಸುವ ಬದಲು ಪ್ರಕರಣವನ್ನೇ ಮುಚ್ಚಿಹಾಕಲು ಪ್ರಭಾವಿ ರಾಜಕಾರಣಿಯೊಬ್ಬರು ಭಾರಿ ಕಸರತ್ತು ನಡೆಸಿದ್ದಾರೆ. ಇದು ಹಾಸನ ಜಿಲ್ಲೆಯ ಉದಾಹರಣೆ ಮಾತ್ರ. ರಾಜ್ಯಾದ್ಯಂತ ತನಿಖೆ ಮಾಡಿದರೆ, ಸಾವಿರಾರು ಇಂಥ ಅಕ್ರಮ ಪ್ರಕರಣಗಳು ಬೆಳಕಿಗೆ ಬರುತ್ತವೆ.

    ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ: ಮನೆ ಬಾಗಿಲಿಗೆ ವೃದ್ದಾಪ್ಯ ವೇತನ ನೀಡುವ ಯೋಜನೆಯನ್ನು ಕಂದಾಯ ಇಲಾಖೆ ಜಾರಿಗೊಳಿಸಿದೆ. ಫಲಾನು ಭವಿಯ ಆರ್​ಟಿಸಿ, ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಹಿತಿ ಸರ್ಕಾರದ ಬಳಿ ಲಭ್ಯವಿರುವ ಕಾರಣ ಫಲಾನುಭವಿಗಳ ಆದಾಯ? ಪಿಂಚಣಿಗೆ ಅರ್ಹರೇ? ಎನ್ನುವ ಮಾಹಿತಿ ಸಿಗಲಿದೆ. ಅದರ ಪ್ರಕಾರ ಆಯಾ ಗ್ರಾ.ಪಂ.ಗಳಲ್ಲಿ ಅಲ್ಲಿನ ಗ್ರಾಮ ಲೆಕ್ಕಾಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಅರ್ಜಿ ಭರ್ತಿ ಮಾಡಿಸಿಕೊಂಡು, ಬ್ಯಾಂಕ್ ಅಕೌಂಟ್ ತೆರೆದು, ಉಪ ತಹಸೀಲ್ದಾರ್ ಹಂತದಲ್ಲಿಯೇ ಮಂಜೂರಾತಿ ಮಾಡುವ ಕ್ರಮವಹಿಸಲಾಗುತ್ತಿದೆ.

    ಬಿಟ್ಟಿ ಊಟ, ಬಿಟ್ಟಿ ಟಿಕೆಟ್.. ಡೆಲಿವರಿ ಬಾಯ್ಸ್​ಗೆ ಭಾರಿ ಆಫರ್!; ಅನಾವರಣ ಆಯ್ತು ಸಂಕಷ್ಟಗಳ ಸರಮಾಲೆ..

    ಸುಟ್ಟು ಕರಕಲಾದ ಶವ: ಸತ್ತ ಪತ್ನಿಯ ಗುರುತು, ಕೊಂದ ಪತಿಯ ಪತ್ತೆಯೇ ಇಂಟರೆಸ್ಟಿಂಗ್​!

    ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts