More

    ಗುಪ್ತಾಂಗದ ಫೋಟೋ ಕಳುಹಿಸಿ ಎಂದವನಿಗೆ ಫೋಟೋವೊಂದನ್ನು ಸೆಂಡ್​ ಮಾಡಿ ಶಾಕ್​ ಕೊಟ್ಟ ಯಶಿಕಾ!

    ಚೆನ್ನೈ: ಕಾಲಿವುಡ್​ನ ವಯಸ್ಕರ ಕಾಮಿಡಿ ಚಿತ್ರ “ಇರುಟ್ಟು ಅರಯಿಲ್ ಮುರಟ್ಟು ಕುತ್ತು” ಚಿತ್ರ ಹಾಗೂ ಬಿಗ್​ಬಾಸ್​ ಶೋ ಮೂಲಕ ಖ್ಯಾತಿ ಪಡೆದಿರುವ ನಟಿ ಯಶಿಕಾ ಆನಂದ್ ಅವರು ಕಳೆದ ವರ್ಷ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚೇತರಿಸಿಕೊಂಡಿದ್ದು, ಈಗಷ್ಟೇ ತಾನೇ ಸಹಜ ಜೀವನಕ್ಕೆ ಮರಳಿದ್ದಾರೆ.

    ಅಪಘಾತದ ಬಳಿಕ ಯಶಿಕಾ ಅವರು ಅನೇಕ ಸರ್ಜರಿಗೆ ಒಳಗಾಗಬೇಕಾಯಿತು. ಸದ್ಯ ಗುಣಮುಖರಾಗಿರುವ ಅವರು ಮತ್ತೆ ಸಾಮಾಜಿಕ ಜಾಲತಾಣದತ್ತ ಮುಖ ಮಾಡಿದ್ದಾರೆ. ಜಾಲತಾಣದಲ್ಲಿ ಸಕ್ರೀಯರಾಗಿದ್ದು, ಇತ್ತೀಚೆಗಷ್ಟೇ ಇನ್​ಸ್ಟಾಗ್ರಾಂನಲ್ಲಿ ಆಸ್ಕ್​ ಮಿ ಎನಿಥಿಂಗ್ ಸೆಷನ್ಸ್​ ನಡೆಸಿದ್ದು. ಈ ವೇಳೆ​ ನೆಟ್ಟಿಗರು ಕೇಳಿದ ಮುಜುಗರ ಉಂಟು ಮಾಡುವ ಪ್ರಶ್ನೆಗಳಿಗೆ ಯಶಿಕಾ ಸಖತ್​ ಆಗಿಯೇ ತಿರುಗೇಟು ನೀಡಿದ್ದಾರೆ.

    ಇದೀಗ ಸೂಕ್ಷ್ಮತೆ ಅರಿಯದ ನೆಟ್ಟಿಗನೊಬ್ಬ ಇನ್​ಸ್ಟಾಗ್ರಾಂನಲ್ಲಿ ಲೈವ್​ ವೇಳೆ ನಿಮ್ಮ ಎದೆಯ ಸೈಜ್​ ಎಷ್ಟು ಎಂದು ಕೇಳಿದ್ದಾನೆ. ಇದಕ್ಕೆ ಮುಟ್ಟಿನೋಡಿಕೊಳ್ಳುವ ಹಾಗೇ ಉತ್ತರ ನೀಡಿರುವ ಯಶಿಕಾ, ಖಂಡಿತವಾಗಿ ನಿನ್ನ ಬಾಲ್​ಗಳಿಗಿಂತಲೂ ದೊಡ್ಡದು ಎಂದಿದ್ದಾರೆ. ಇನ್ನೊಬ್ಬ ನಿಮ್ಮ ದೇಹದ ಅಳತೆ ಎಷ್ಟು ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರ ನೀಡಿರುವ ಯಶಿಕಾ, ಯಾಕೆ? ನನಗೆ ಬಟ್ಟೆ ಹೊಲಿಸಲು ಪ್ಲಾನ್​ ಏನಾದರೂ ಮಾಡಿದ್ದೀರಾ? ಓ ತುಂಬಾ ಧನ್ಯವಾದಗಳು ಎಂದಿದ್ದಾರೆ.

    ಇನ್ನೊಬ್ಬ ನೆಟ್ಟಿಗ ತೀವ್ರ ಅತಿರೇಕಕ್ಕೆ ಹೋಗಿದ್ದು, ನಿಮ್ಮ ಪುಸ್ಸಿ ಫೋಟೋ ಅಂದರೆ ಗುಪ್ತಾಂಗದ ಫೋಟೋ ಇದ್ರೆ ಕಳುಹಿಸಿ ಎಂದಿದ್ದಾನೆ. ಇದಕ್ಕೆ ಖಡಕ್​ ತಿರುಗೇಟು ನೀಡಿರುವ ಯಶಿಕಾ, ಮಹಿಳೆಯ ದೇಹಕ್ಕೆ ಬೆಕ್ಕಿನ ಮುಖ ಎಡಿಟ್​ ಮಾಡಿರುವ ಫೋಟೋ ಪೋಸ್ಟ್​ ಮಾಡಿ ತಗೋ ಪುಸ್ಸಿ ಫೋಟೋ ಎಂದು ಕಳುಹಿಸಿದ್ದಾರೆ.

    ಕಳೆದ ವರ್ಷ ಜುಲೈನಲ್ಲಿ ಮಧ್ಯರಾತ್ರಿ ಪಾರ್ಟಿ ಮುಗಿಸಿಕೊಂಡು ಬರುವಾಗ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯಶಿಕಾ ಆನಂದ್ ದೀರ್ಘ ಕಾಲ ಆಸ್ಪತ್ರೆಯಲ್ಲೇ ಉಳಿದು ಚಿಕಿತ್ಸೆ ಪಡೆಯಬೇಕಾಯಿತು. ಎದ್ದು ನಡೆದಾಡಲು ಸಹ ಅವರಿಗೆ ಆಗುತ್ತಿರಲಿಲ್ಲ. ಅಪಘಾತದಲ್ಲಿ ಯಶಿಕಾ ಅವರ ಆಪ್ತ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಅವರು ಸ್ಥಳದಲ್ಲೇ ಸಾವಿಗೀಡದ್ದಾರೆ. (ಏಜೆನ್ಸೀಸ್​)

    ಏ.8ಕ್ಕೆ ಡೇಂಜರಸ್ ಬಿಡುಗಡೆ; ಕೋರ್ಟ್ ನೀಡಿದ ಆದೇಶವೇ ಸ್ಫೂರ್ತಿ

    ಕಾಳಜಿಯೇ ಈ ಮಿನಿಸ್ಟರ್​ನ ಆಸ್ತಿ; ವಿಜಯವಾಣಿ ಸಿನಿಮಾ ವಿಮರ್ಶೆ

    300 ಎಪಿಸೋಡ್ ಮುಗಿಸಿದ ‘ಗೀತಾ’ ಧಾರಾವಾಹಿ ನಟಿ ಭವ್ಯ ಗೌಡ ಬಳಿ ಎಷ್ಟು ಸಾವಿರ ಬಟ್ಟೆಗಳಿವೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts