ಪತ್ನಿಯ ದುರಂತ ಸಾವು: ಜೀವನ ಸಂಗಾತಿಗೆ ನರಕ ತೋರಿದ ಸಾರಿಗೆ ಅಧಿಕಾರಿಗೆ ಸರ್ಕಾರದ ಶಾಕ್​!

Inspector
Published on

ತಿರುವನಂತಪುರಂ: ಪತ್ನಿ ವಿಸ್ಮಯ ವಿ ನಾಯರ್​ ಸಾವಿನ ಪ್ರಕರಣದಲ್ಲಿ ಬಂಧನವಾಗಿರುವ ಸಹಾಯಕ ಮೋಟಾರು ವಾಹನ ನಿರೀಕ್ಷಕರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

ಕೇರಳ ಸಾರಿಗೆ ಸಚಿವ ಆಂಟೋನಿ ರಾಜು ಈ ಬಗ್ಗೆ ಮಾಹಿತಿ ನೀಡಿದ್ದು, ಕೊಲ್ಲಂ ಮೋಟಾರು ವಾಹನ ಜಾರಿ ಇಲಾಖೆಯಿಂದ ಸಹಾಯಕ ಇನ್ಸ್​ಪೆಕ್ಟರ್ ಕಿರಣ್​ಕುಮಾರ್​ನನ್ನು​ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಿರಣ್​ ಪತ್ನಿ ವಿಸ್ಮಯ ನಿಲಮೇಲ್​ ಮೂಲದವರು. ಸಾಸ್ಥಮಕೋಟದಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವರದಕ್ಷಿಣೆಗಾಗಿ ಕಿರಣ್​ ಮೃಗೀಯವಾಗಿ ಹಿಂಸೆ ನೀಡಿದ್ದನು ಎಂದು ವಿಸ್ಮಯ ಪಾಲಕರು ಆರೋಪಿಸಿದ್ದಾರೆ. ಅಲ್ಲದೆ, ಕಿರಣ್​ ಅಮಾನವೀಯವಾಗಿ ಥಳಿಸಿ, ಗಾಯಗೊಳಿಸಿರುವ ತನ್ನ ಫೋಟೋಗಳನ್ನು ವಿಸ್ಮಯ ತವರು ಮನೆಗೆ ವಾಟ್ಸ್​ಆ್ಯಪ್​ ಮಾಡಿದ್ದಳು.

ಇನ್ನು ಘಟನೆ ನಡೆದ ಬೆನ್ನಲ್ಲೇ ಕಿರಣ್​ ಕುಮಾರ್​ ಪರಾರಿಯಾಗಿದ್ದ. ಆದರೆ, ಸೋಮವಾರ ರಾತ್ರಿ ಕಿರಣ್​ರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅದೇ ದಿನ ರಾತ್ರಿ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪತ್ನಿಗೆ ಚಿತ್ರಹಿಂಸೆ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net