ಈ ವರ್ಷವೇ ಮದುವೆ ಆಗಲಿದ್ದಾರಂತೆ ರಶ್ಮಿಕಾ! ಬಾಲಿವುಡ್​ ಗಲ್ಲಿಯಲ್ಲಿ ಹರಿದಾಡುತ್ತಿದೆ ಬಿಸಿ ಬಿಸಿ ಸುದ್ದಿ

Rashmika
Published on

ಹೈದರಾಬಾದ್​: "ಗೀತಾ ಗೋವಿಂದಂ" ಮತ್ತು "ಡಿಯರ್​ ಕಾಮ್ರೆಡ್​" ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ ಬಳಿಕ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಟಾಲಿವುಡ್​ನ ಕ್ಯೂಟೆಸ್ಟ್​ ಜೋಡಿ ಎನಿಸಿಕೊಂಡಿದ್ದಾರೆ. ಇಬ್ಬರ ನಡುವೆ ಪ್ರೀತಿ ಚಿಗುರಿದ್ದು, ಮದುವೆಗೂ ನಿರ್ಧಾರ ಮಾಡಿದ್ದಾರೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಇಬ್ಬರು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಹೊಸ ವರ್ಷದ ಸಂದರ್ಭದಲ್ಲಿಯೂ ಈ ಜೋಡಿ ಗೋವಾದಲ್ಲಿ ಬೀಡುಬಿಟ್ಟಿತ್ತು.

ತಾಜಾ ಬೆಳವಣಿಗೆಯೆಂದರೆ ವಿಜಯ್​ ಮತ್ತು ರಶ್ಮಿಕಾ ಇದೇ ವರ್ಷ ಸಪ್ತಪದಿ ತುಳಿಯುವ ಮನಸ್ಸು ಮಾಡಿದ್ದಾರೆ ಎಂಬ ಮಾತುಗಳು ಬಾಲಿವುಡ್ ಗಲ್ಲಿಯಲ್ಲಿ ಕೇಳಿಬರುತ್ತಿವೆ. ಇತ್ತೀಚೆಗೆ ಇಬ್ಬರು ಹೆಚ್ಚಾಗಿ ಒಟ್ಟಿಗೆ ಕಾಣಿಸುತ್ತಿದ್ದು, ಮದುವೆ ಬಗ್ಗೆ ಇಬ್ಬರು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಲೈಗರ್​ ಸಿನಿಮಾ ಶೂಟಿಂಗ್​ ಸಂದರ್ಭದಲ್ಲಿ ವಿಜಯ್​ರನ್ನು ಭೇಟಿ ಮಾಡಲು ರಶ್ಮಿಕಾ ವಿದೇಶಕ್ಕೆ ತೆರಳಿದ್ದರು ಎಂಬ ವಿಚಾರ ಭಾರೀ ಸುದ್ದಿಯಾಗಿತ್ತು. ಈ ಎಲ್ಲ ಕಾರಣಗಳಿಂದ ಇಬ್ಬರು ಮದುವೆ ನಿಜವೆಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ತಾರಾ ಜೋಡಿ ಮಾತ್ರ ಅಧಿಕೃತಗೊಳಿಸಬೇಕಿದೆ.

ಇನ್ನು ರಶ್ಮಿಕಾ ಪ್ರೀತಿ ವಿಚಾರ ಬಂದಾಗಲೆಲ್ಲ ಅದು ಪ್ರೀತಿಯಲ್ಲ ನಮ್ಮಿಬ್ಬರ ನಡುವೆ ಉತ್ತಮ ಸ್ನೇಹ ಮಾತ್ರ ಇದೆ ಎಂದು ಹೇಳುವ ಮೂಲಕ ಜಾರಿಕೊಳ್ಳುತ್ತಿದ್ದಾರೆ. ಆದರೂ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಸಿನಿ ಗಲ್ಲಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಇಂಡಿಯಾ ಟುಡೆ ನಡೆಸಿದ ಸಂದರ್ಶನದಲ್ಲಿ ರಶ್ಮಿಕಾ ತಮ್ಮ ಮದುವೆ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದಾಗ ಮದುವೆ ಆಗಲು ನಾನಿನ್ನೂ ಚಿಕ್ಕವಳು ಎಂದಿದ್ದಾರೆ. ಮದುವೆ ಬಗ್ಗೆ ಏನು ಯೋಚಿಸಬೇಕೆಂದು ನನಗೆ ತಿಳಿದಿಲ್ಲ, ಏಕೆಂದರೆ ನಾನಿನ್ನೂ ಚಿಕ್ಕವಳಾಗಿದ್ದೇನೆ. ನಾನು ಅದರ ಬಗ್ಗೆ ಯೋಚಿಸಿಯು ಇಲ್ಲ ಎಂದಿದ್ದರು.

ಇದೇ ಸಂದರ್ಭದಲ್ಲಿ ಪ್ರೀತಿಯ ಬಗ್ಗೆ ಮಾತನಾಡಿದ ರಶ್ಮಿಕಾ, ಒಬ್ಬರಿಗೊಬ್ಬರು ಗೌರವ ಕೊಡುವಾಗ, ಸಮಯವನ್ನು ನೀಡಿದಾಗ ಮತ್ತು ನೀವು ಸುರಕ್ಷಿತ ಭಾವನೆ ಬಂದಾಗ ಅದು ನನಗೆ ಪ್ರೀತಿ ಅನಿಸುತ್ತದೆ. ಪ್ರೀತಿಯನ್ನು ವಿವರಿಸುವುದು ಕಷ್ಟ. ಏಕೆಂದರೆ ಎಲ್ಲವೂ ಭಾವನೆಗಳ ಮೇಲೆ ನಿಂತಿದೆ. ಪ್ರೀತಿ ಎಂಬುದು ಒಂದೇ ಮಾರ್ಗವಲ್ಲ, ಅದು ಎರಡು ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದ್ದರು.

ಸಿನಿಮಾ ವಿಚಾರಕ್ಕೆ ಬಂದರೆ, ಪುಷ್ಪ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ರಶ್ಮಿಕಾ, ಮಿಷನ್​ ಮಜ್ನು ಚಿತ್ರದ ಮೂಲಕ ಬಾಲಿವುಡ್​ನಲ್ಲಿ ಅದೃಷ್ಟ ಪರೀಕ್ಷೆಗೆ ರಶ್ಮಿಕಾ ಇಳಿದಿದ್ದಾರೆ. ಇತ್ತ ವಿಜಯ್​ ದೇವರಕೊಂಡ ನಟನೆ ಲೈಗರ್​ ಚಿತ್ರ ಬಿಡಗಡೆಗೆ ಸಿದ್ಧವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net