

ಹೈದರಾಬಾದ್: ಕಾಲಿವುಡ್ ಹಿರಿಯ ನಟ ಶರತ್‌ಕುಮಾರ್ ಅವರ ಹಿರಿಯ ಪುತ್ರಿ 37 ವರ್ಷದ ನಟಿ ವರಲಕ್ಷ್ಮೀ ಶರತ್‌ಕುಮಾರ್ ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಹೆಸರನ್ನು ಮಾಡಿದ್ದಾರೆ. ಆಕೆಯ ಚೊಚ್ಚಲ 'ಪೋಡಾ ಪೋಡಿ'ಯಿಂದ ವಿಜಯ್ ಸೇತುಪತಿಯ 'ವಿಕ್ರಮ್ ವೇದ' ಮತ್ತು ವಿಜಯ್ ಅವರ 'ಸರ್ಕಾರ್' ವರೆಗೂ ಅನೇಕ ಚಿತ್ರಗಳಲ್ಲಿನ ಅವರ ಅಭಿನಯವು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದೆ.
'ಕ್ರ್ಯಾಕ್' ಮತ್ತು 'ನಾಂಧಿ'ಯಂತಹ ತೆಲುಗು ಸಿನಿಮಾಗಳಲ್ಲಿ ನಟಿಸಿ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ವರು ತೆಲುಗು ಚಿತ್ರರಂಗದಲ್ಲಿ ಉತ್ತಮ ಯಶಸ್ಸನ್ನು ಕಂಡಿದ್ದಾರೆ. ಅಲ್ಲದೆ, ಟಾಲಿವುಡ್ನಿಂದ ಸಿಕ್ಕಾಪಟ್ಟೆ ಆಫರ್‌ಗಳು ಬರುತ್ತಿವೆ ಮತ್ತು ಪ್ರಸ್ತುತ ಸಮಂತಾ ನಟನೆಯ 'ಯಶೋಧಾ', ಸಂದೀಪ್ ಕಿಶನ್ ಅವರ 'ಮೈಕೆಲ್', 'ಹನುಮಾನ್' ಮತ್ತು 'ಆದ್ಯ' ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಮಾರ್ಚ್ 5 ರ ವರು ಜನ್ಮದಿನದಂದು ಚಿತ್ರತಂಡಗಳು ವಿಶೇಷ ಪೋಸ್ಟರ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿ ಶುಭಕೋರಿದ್ದಾರೆ.
ಟಾಲಿವುಡ್ನಲ್ಲಿ ಹಿಟ್ ಸಿನಿಮಾಗಳು ಮತ್ತು ಸಿಕ್ಕಾಪಟ್ಟೆ ಆಫರ್‌ಗಳು ಬರುತ್ತಿರುವುದರಿಂದ ಚೆನ್ನೈ ಬಿಟ್ಟು ಹೈದರಾಬಾದ್‌ನಲ್ಲಿ ನೆಲೆಸುತ್ತಿದ್ದೇನೆ ಎಂದು ವರಲಕ್ಷ್ಮಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. "ನಾನು ಅತ್ಯುತ್ತಮ ಜನ್ಮದಿನವನ್ನು ಹೊಂದಿದ್ದೇನೆ. ಎಲ್ಲ ಸಂದರ್ಭದಲ್ಲೂ ನನ್ನ ಜತೆ ನಿಲ್ಲುವ ಈ ಅದ್ಭುತ ಜನರಿಗೆ ಧನ್ಯವಾದಗಳು ಮತ್ತು ನಾನು ನನ್ನ ಕೊನೆಯ ವಾರಾಂತ್ಯವನ್ನು ಚೆನ್ನೈನಲ್ಲಿ ಅವರೊಂದಿಗೆ ಕಳೆದಿದ್ದು ಖುಷಿಯಾಗಿದೆ. ಇದು ನನ್ನ ಜೀವನದಲ್ಲಿ ಹೊಸ ಅಧ್ಯಾಯಾವಾಗಿದೆ. ಹೌದು, ನಾನು ಅಧಿಕೃತವಾಗಿ ಹೈದರಾಬಾದ್ಗೆ ಸ್ಥಳಾಂತರವಾಗುತ್ತಿದ್ದೇನೆ ಎಂದು ಹೇಳಿದ್ದಾರೆ.
ನಾನು ಯಾವಾಗಲೂ ಈ ಜನರು ಹಿಂದೆ ಬೀಳಲು ಬಯಸುತ್ತೇನೆ ಎಂದು ನನಗೆ ಖಚಿತವಾಗಿ ತಿಳಿದಿದೆ. ನಾನು ಹೇಳುವುದಕ್ಕಿಂತ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ನಾನು ನಿಮಗೆ ಸಾಕಷ್ಟು ಧನ್ಯವಾದ ಹೇಳಲಾರೆ. ಏಕೆಂದರೆ ನೀವೆಲ್ಲ ನನ್ನ ಕುಟುಂಬ ಮತ್ತು ನನ್ನ ಜೀವನ. ನಿಮ್ಮೆಲ್ಲರ ಆಶೀರ್ವಾದ, ಪ್ರೀತಿ ಮತ್ತು ಬೆಂಬಲ ಯಾವಾಗಲೂ ಬೇಕು ಎಂದು ಚೆನ್ನೈ ಮಂದಿಯನ್ನು ವರು ಕೇಳಿಕೊಂಡಿದ್ದಾರೆ.
ಅಂದಹಾಗೆ ವರು ನಟ ಸುದೀಪ್ ಅಭಿನಯದ ಮಾಣಿಕ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಮೊನ್ನೆ ಬಿಡುಗಡೆಯಾದ ಹನುಮಾನ್ ಚಿತ್ರದ ವರು ಪೋಸ್ಟರ್ ಅನ್ನು ಸುದೀಪ್ ಅವರೇ ಬಿಡುಗಡೆ ಮಾಡಿದರು. (ಏಜೆನ್ಸೀಸ್)