ಯೂಕ್ರೇನ್​-ರಷ್ಯಾ ಕದನ ಕಾರ್ಮೋಡ: ಯೂಕ್ರೇನಲ್ಲಿ ಸಿಲುಕಿರುವ ರಾಯಚೂರಿನ 6 ವಿದ್ಯಾರ್ಥಿಗಳು, ಪಾಲಕರಿಗೆ ಆತಂಕ

Raichuru
Published on

ರಾಯಚೂರು: ಯೂಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಮಾನಯಾನ ಸ್ಥಗಿತವಾಗಿರುವುದರಿಂದ ರಾಯಚೂರಿನ ಆರು ವೈದ್ಯಕೀಯ ವಿದ್ಯಾರ್ಥಿಗಳು ಯೂಕ್ರೇನ್​ನಲ್ಲೇ ಸಿಲುಕಿದ್ದಾರೆ.

ದೇವದುರ್ಗದ ರುಬೀನಾ, ಅಭೀಷೇಕ್​, ಲಿಂಗಸುಗೂರಿನ ಪ್ರಜ್ವಲ್, ರಾಯಚೂರು ತಾಲೂಕಿನ ದೇವಸುಗೂರಿನ ಚನ್ನವೀರೇಶ್, ಮಸ್ಕಿ ತಾಲೂಕಿನ ತುರವಿಹಾಳದ ಸೋಮು ಹಾಗೂ ನಂದೀಶ್ ವಾಪಸ್ ಭಾರತಕ್ಕೆ ಬರಲು ಆಗದೇ ಯೂಕ್ರೇನ್​ನಲ್ಲೇ ಉಳಿದಿದ್ದಾರೆ.

ಯುದ್ಧ ನಡೆಯುತ್ತಿರುವ ಸ್ಥಳದಿಂದ ಈ ವಿದ್ಯಾರ್ಥಿಗಳು ದೂರದಲ್ಲಿ ಇದ್ದರೂ ಸಹ ಆತಂಕದಲ್ಲಿದ್ದಾರೆ. ಇತ್ತ ವಿದ್ಯಾರ್ಥಿಗಳ ಪೋಷಕರು ಸಹ ಭಯದಲ್ಲಿದ್ದಾರೆ. ಆದಷ್ಟು ಶೀಘ್ರವಾಗಿ ತಮ್ಮ ಮಕ್ಕಳನ್ನು ಭಾರತಕ್ಕೆ ಕರೆತರಲು ಸರ್ಕಾರಕ್ಕೆ ಪೋಷಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net