ಪಿಯುಸಿ ಮರು ಪರೀಕ್ಷೆಯಲ್ಲೂ ಫೇಲ್​ ಆಗಿದ್ದಕ್ಕೆ ಮನನೊಂದು ಸಾವಿನ ಹಾದಿ ಹಿಡಿದ ವಿದ್ಯಾರ್ಥಿನಿ

Udupi Girl
Published on

ಉಡುಪಿ: ಪಿಯುಸಿ ಮರು ಪರೀಕ್ಷೆಯಲ್ಲೂ ಅನುತ್ತೀರ್ಣಗೊಂಡಿದ್ದಕ್ಕೆ ಮನನೊಂದ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಂಕರನಾರಾಯಣ ಗ್ರಾಮದ ಕುಳ್ಳಂಜೆ ಎಂಬಲ್ಲಿ ನಡೆದಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಾನಸ ಕುಲಾಲ್ ನೇಣಿಗೆ ಶರಣಾಗಿದ್ದಾಳೆ. ಮಾನಸ, ಶಂಕರನಾರಾಯಣದ ಸರಕಾರಿ ಕಾಲೇಜಿನಲ್ಲಿ ಓದುತ್ತಿದ್ದಳು. ಪಿಯುಸಿ ಪರೀಕ್ಷೆಯಲ್ಲಿ ಫೇಲ್​ ಆಗಿ, ಮರು ಪರೀಕ್ಷೆ ಬರೆದಿದ್ದಳು. ಅದರಲ್ಲೂ ಫೇಲ್​ ಆಗಿದ್ದರಿಂದ ಮನನೊಂದು, ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಾನಸ ಕುಲಾಲ್ ಕುಟುಂಬ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದೆ. ಕೆಲವು ವರ್ಷದ ಹಿಂದೆ ಮಾನಸ, ಸಹೋದರ ಮಿದುಳು ಜ್ವರದಿಂದ ಮೃತಪಟ್ಟಿದ್ದಾನೆ. ಮಾನಸ ತಂದೆ ಬಾಬಣ್ಣ ಕುಲಾಲ ಅವರಿಗೆ ಅಪಘಾತವಾಗಿ ದುಡಿಯಲು ಆಗುತ್ತಿಲ್ಲ. ತಾಯಿಯೇ ಅಕ್ಷರ ದಾಸೋಹ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ದಾನಿಗಳು ನೀಡಿದ ಹಣದಲ್ಲಿ ಮಾನಸ ಓದುತ್ತಿದ್ದಳು. ಇದೀಗ ಮಗಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆ ಸಂಬಂಧ ಶಂಕರ್ ನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net