

ವಿಜಯವಾಡ: ಪ್ರೀತಿಗೆ ಯಾವುದೇ ಜಾತಿ, ಧರ್ಮ, ಭಾಷೆ, ಗಡಿ ಹಾಗೂ ವಯಸ್ಸಿನ ಮಿತಿ ಇಲ್ಲ. ಪವಿತ್ರ ಪ್ರೀತಿ ಎಲ್ಲವನ್ನು ಮೀರಿದ್ದು ಎನ್ನುವುದಕ್ಕೆ ಈ ಒಂದು ಲವ್ಸ್ಟೋರಿ ಉತ್ತಮ ಉದಾಹರಣೆ ಆಗಿದೆ. ಆತ ಆಂಧ್ರ ಪ್ರದೇಶ ಒಂದು ಪಟ್ಟಣದ ಯುವಕ. ಆಕೆ ಟರ್ಕಿ ದೇಶದ ಲೇಡಿ. ಇಬ್ಬರಿಗೂ ಎಲ್ಲಿಂದೆಲ್ಲಿ ಸಂಬಂಧ ಅಂದುಕೊಂಡರು ಇಬ್ಬರನ್ನು ಪ್ರೀತಿ ಎಂಬ ಸೇತುವೆ ಬೆಸೆದಿದ್ದು, ಮದುವೆ ಆಗುವ ಮೂಲಕ ಆ ಸಂಬಂಧದ ಸೇತುವೆಯನ್ನು ಮತ್ತಷ್ಟು ಗಟ್ಟಿಯಾಗಿಸಿದ್ದಾರೆ.
ವರ ಸಂಕೀರ್ಥ್ ಆಂಧ್ರದ ಗುಂಟೂರು ಮೂಲದವ. 2016ರಲ್ಲಿ ಟರ್ಕೀಶ್ ಮೂಲಕ ಗಿಜೆಮ್ ಎಂಬಾಕೆಯನ್ನು ಪ್ರಾಜೆಕ್ಟ್ ಕೆಲಸ ಮೇಲೆ ಭೇಟಿಯಾಗಿದ್ದರು. ಈ ವೇಳೆ ಇಬ್ಬರು ಫ್ರೆಂಡ್ಸ್ ಆಗಿದ್ದರು. ತದನಂತರದಲ್ಲಿ ಮಧು, ಕೆಲಸದ ಮೇಲೆ ಟರ್ಕೀಶ್ಗೆ ಹೋದರು.
ಇಬ್ಬರ ನಡುವಿನ ಸ್ನೇಹದ ಬೆಸುಗೆ ದಿನದಿಂದ ದಿನಕ್ಕೆ ಹೆಚ್ಚಾಯಿತು. ತಾವಿಬ್ಬರು ಪ್ರೀತಿಯ ಬಲೆಯಲ್ಲಿ ಸಿಕ್ಕಿರುವ ಸಂಗತಿ ತಿಳಿಯವುದು ತಡವಾಗಲಿಲ್ಲ. ಕೊನೆಗೆ ತಮ್ಮ ತಮ್ಮ ಪ್ರೀತಿಯನ್ನು ಪ್ರಸ್ತಾಪ ಮಾಡಿಕೊಂಡ ಜೋಡಿಗಳು ಅದನ್ನು ಶಾಶ್ವತಗೊಳಿಸುವ ನಿರ್ಧಾರಕ್ಕೆ ಬಂದರು. ಅಂದರೆ, ಮದುವೆಯಾಗುವ ನಿರ್ಧಾರ ಮಾಡಿದರು.
ಆರಂಭದಲ್ಲಿ ಗುಜೆಮ್ ಮತ್ತು ಮಧು ಕುಟಂಬ ಮದುವೆಗೆ ಒಪ್ಪಿರಲಿಲ್ಲ. ಆದರೆ, ಕೊನೆಗೆ ಹೇಗೋ ಒಪ್ಪಿಗೆ ಪಡೆದ ನವಜೋಡಿ 2019ರಲ್ಲಿ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದರು. 2020ರಲ್ಲಿ ಮದುವೆ ಆಗುವ ಬಯಕೆ ಹೊಂದಿದ್ದರು. ಆದರೆ, ಕರೊನಾ ವೈರಸ್ ನಿರ್ಬಂಧದಿಂದಾಗಿ ಮದುವೆಯನ್ನು ಮುಂದೂಡಿದ್ದರು. ಇಬ್ಬರು ಕಳೆದ ಜುಲೈನಲ್ಲಿ ಟರ್ಕಿಯಲ್ಲಿ ಮೊದಲ ಬಾರಿಗೆ ಮದುವೆ ಆಗಿದ್ದಾರೆ. ಇದೀಗ ಹಿಂದು ಸಂಪ್ರದಾಯದಂತೆ ಆಂಧ್ರ ಗುಂಟೂರಿನಲ್ಲಿ ಮತ್ತೊಮ್ಮೆ ಮದುವೆ ಆಗಿದ್ದಾರೆ. ಈ ಮೂಲಕ ಪ್ರೀತಿಗಿರುವ ಎಲ್ಲ ಅಡೆತಡೆಗಳು ಅಳಿಸಿಹಾಕಿದ್ದಾರೆ. (ಏಜೆನ್ಸೀಸ್)