ತುಮಕೂರು ಹೆದ್ದಾರಿಯಲ್ಲಿ ರಾಶಿ ರಾಶಿ ಕಾಂಡೋಮ್​ ಪತ್ತೆ ಕೇಸ್​​: ಪೊಲೀಸ್​ ತನಿಖೆಯಲ್ಲಿ ಅಸಲಿಯತ್ತು ಬಯಲು..!

ಕಾಂಡೋಮ್ ತನಿಖೆ ವೇಳೆ ಪತ್ತೆಯಾಯ್ತು ಹೈಟೆಕ್ ವೇಶ್ಯಾವಾಟಿಕೆ ಸುರಂಗ ಮಾರ್ಗ..#SandalsStand #Prostitution #Lodge - youtube
Published on

ತುಮಕೂರು: ಕೆಲವು ದಿನಗಳ ಹಿಂದೆ ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೆ ಕಾಂಡೋಮ್‌ಗಳು ಪತ್ತೆಯಾಗಿದ್ದವು. ರಾಶಿ ರಾಶಿ ಕಾಂಡೋಮ್​ಗಳನ್ನು ನೋಡಿ ತುಮಕೂರಿನ ಜನತೆ ಬೆಚ್ಚಿಬಿದ್ದಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ತುಮಕೂರು ಪೊಲೀಸರಿಗೆ ತನಿಖೆ ವೇಳೆ ಸ್ಫೋಟಕ ವಿಚಾರವೊಂದು ಬೆಳಕಿಗೆ ಬಂದಿದೆ.

ತುಮಕೂರಿನ ರಿಂಗ್ ರಸ್ತೆಯ ಲಾಡ್ಜ್​ವೊಂದರ ಮೇಲೆ ದಾಳಿ ಮಾಡಿರುವ ಪೊಲೀಸರು ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಯನ್ನು ಬಯಲಿಗೆ ಎಳೆದಿದ್ದಾರೆ. ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ತುಮಕೂರು ಪೊಲೀಸರ ನೇತೃತ್ವದಲ್ಲಿ ದಾಳಿ ನಡೆದಿದೆ.

ದಾಳಿ ವೇಳೆ ಲಾಡ್ಜ್​ನಲ್ಲಿ ರೂಂ ಒಂದರಲ್ಲಿ ಸುರಂಗ ಕೂಡ ಪತ್ತೆಯಾಗಿದ್ದು, ಅದರೊಳಗೆ ಅಡಗಿಕೊಂಡಿದ್ದ ಇಬ್ಬರು ಮಹಿಳೆ ಹಾಗೂ ಓರ್ವ ಪಿಂಪ್ ಅನ್ನು ಬಂಧಿಸಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಈ ಲಾಡ್ಜ್ ಸನಿಹ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಶಿ ರಾಶಿ ಕಾಡೋಂಮ್‌ಗಳು ಕಂಡು ಬಂದಿದ್ದವು.

ಕಾಡೋಂಮ್ ಪತ್ತೆಯಾದ ವಿಷಯ ತಿಳಿದು ತನಿಖೆ ಆರಂಭಿಸಿದ್ದ ಒಡನಾಡಿ ಸಂಸ್ಥೆ ನಿಖರ ಮಾಹಿತಿ ಪಡೆದು ತಡರಾತ್ರಿ ಪೊಲೀಸರೊಂದಿಗೆ ದಾಳಿ ನಡೆಸಿದಾಗ ಹೈಟೆಕ್​ ವೇಶ್ಯಾವಾಟಿಕೆ ಜಾಲ ಪತ್ತೆಯಾಗಿದೆ. ಒಟ್ಟು ಐವರನ್ನು ಬಂಧಿಸಲಾಗಿದ್ದು, ಲಾಡ್ಜ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಮಕೂರು ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net