More

    ಕೇಳುವವರು ಕೇಳುತ್ತಾರೆ….ಪಾತ್ರಕ್ಕಾಗಿ ಪಲ್ಲಂಗದ ಬಗ್ಗೆ ಶಾಕಿಂಗ್​ ಕಾಮೆಂಟ್​ ಮಾಡಿದ ನಟಿ ಸ್ನೇಹಾ ಶರ್ಮಾ!

    ಹೈದರಾಬಾದ್​: ಈಗಾಗಲೇ ಸಾಕಷ್ಟು ನಟಿಯರು ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಅವಕಾಶದ ಹೆಸರಿನಲ್ಲಿ ತಮ್ಮ ಬಯಕೆಗಳನ್ನು ಈಡೇರಿಸುವಂತೆ ನಟಿಯರನ್ನು ಕೇಳುವುದು ಸಿನಿ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪವಾಗಿದೆ.

    ಬಾಲಿವುಡ್​, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಮತ್ತು ಮಾಲಿವುಡ್​ನಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ಗೆ ಅನೇಕ ಕಲಾವಿದೆಯರು ಸಂತ್ರಸ್ತೆಯರಾಗಿದ್ದಾರೆ. ಇನ್ನು ಕೆಲವರು ಅದನ್ನು ಎದುರಿಸಿದ್ದಾರೆ. ಸಾಕಷ್ಟು ನಟಿಯರು ತಮ್ಮ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದು, ಇದೀಗ ಆ ಸಾಲಿಗೆ ಮತ್ತೊಬ್ಬ ತೆಲುಗು ನಟಿ ಸ್ನೇಹಾ ಶರ್ಮಾ ಸೇರಿಕೊಂಡಿದ್ದಾರೆ.

    ಇತ್ತೀಚೆಗೆ ತೆಲುಗಿನ “ಐ ವಾಂಟ್​ ಮೈ ಲವ್​” ಚಿತ್ರದ ಪ್ರಚಾರದ ವೇಳೆ ನಟಿ ಸ್ನೇಹಾ ಶರ್ಮಾ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾಡಿರುವ ಕಾಮೆಂಟ್​ ಭಾರೀ ಸಂಚಲನ ಸೃಷ್ಟಿಸಿದೆ. ಮಾಧ್ಯಮ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಸ್ನೇಹಾ, ತಾವು ಎದುರಿಸಿದ ಕಹಿ ಅನುಭವಗಳ ಬಗ್ಗೆ ಹೇಳಿಕೊಂಡರು. ಮಂಚದ ಮೇಲೆ ಮಲಗಲು ನನ್ನನ್ನು ಕೆಲವರು ಕರೆದರು. ನಾನು ಆಗಲ್ಲ ಎಂದಿದ್ದಕ್ಕೆ ಸಿನಿಮಾಗಳಿಂದ ನನ್ನ ಹೆಸರು ಕೈಬಿಟ್ಟರು. ದೊಡ್ಡ ದೊಡ್ಡ ಸಿನಿಮಾಗಳ ಅವಕಾಶವೂ ಕೂಡ ಕಳೆದುಕೊಂಡಿದ್ದೇನೆ ಎಂದರು.

    ಭಿಕ್ಷುಕರು ಕೂಡ ಬದುಕು ನಡೆಸುತ್ತಾರೆ. ನಾನು ಭಿಕ್ಷೆ ಮಾಡಿ ಜೀವನ ನಡೆಸುತ್ತೇನೆ, ಆದರೆ ನನ್ನ ಬದ್ಧತೆ ಮಾತ್ರ ಬಿಡುವುದಿಲ್ಲ ಎಂದು ಹೇಳಿದೆ ಎಂದರು. ಅಲ್ಲದೆ, ಕಾಸ್ಟಿಂಗ್​ ಕೌಚ್​ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ಸ್ನೇಹಾ, ಸಿನಿಮಾ ರಂಗದಲ್ಲಿ ಇವೆಲ್ಲ ಸಾಮಾನ್ಯವಾಗಿವೆ. ಇಲ್ಲಿ ಯಾವುದೇ ಒತ್ತಾಯಗಳು ಇರುವುದಿಲ್ಲ. ಎಲ್ಲವೂ ನಮ್ಮ ಮೇಲೆ ನಿರ್ಧಾರವಾಗಿರುತ್ತದೆ. ಕೇಳುವವರು ಕೇಳುತ್ತಾರೆ, ಆದರೆ ನಿರ್ಧಾರ ನಮ್ಮ ಮೇಲೆ ನಿಂತಿರುತ್ತದೆ. ಫಲಿತಾಂಶವನ್ನು ನಾವೇ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

    ಇಂಡಸ್ಟ್ರಿಯಲ್ಲಿ ಆಮಿಷ ಒಡ್ಡುವವರ ವಿರುದ್ಧ ಚಿತ್ರರಂಗದ ದೊಡ್ಡವರು ಕಠಿಣ ಕ್ರಮ ಕೈಗೊಂಡರೆ ಉತ್ತಮ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ಅನೇಕ ಸ್ಟಾರ್ ಹೀರೋಯಿನ್‌ಗಳು ತಮಗೆ ಇಂಡಸ್ಟ್ರಿಯಲ್ಲಿ ಆದ ಕಾಸ್ಟಿಂಗ್ ಕೌಚ್ ಅನುಭವವನ್ನು ಬಹಿರಂಗಪಡಿಸಿದ್ದಾರೆ. ಕಾಸ್ಟಿಂಗ್ ಕೌಚ್​ನಿಂದಾಗಿ ಸಾಮಾನ್ಯ ಪ್ರೇಕ್ಷಕರಲ್ಲಿಯೂ ಚಿತ್ರರಂಗದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು ಎಂದರು. (ಏಜೆನ್ಸೀಸ್​)

    ಈ ವಿಷಯದಲ್ಲಿ ಟಾಲಿವುಡ್​ ಬೆಸ್ಟ್​ ಅಂತೆ: ಕನ್ನಡ ಸಿನಿ ಇಂಡಸ್ಟ್ರಿ ವಿರುದ್ಧ ಅಪ್ಸರಾ ರಾಣಿ ಗಂಭೀರ ಆರೋಪ

    ನಿಮ್ಮ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಇದ್ದರೆ ಇಲ್ಲಿಗೆ ಕರೆ ಮಾಡಿ ಶೀಘ್ರವೇ ಸಮಸ್ಯೆಗೆ ಪರಿಹಾರ ಸಿಗಲಿದೆ

    ಬೆಂಗಳೂರಿನಲ್ಲಿ ಪಾದಚಾರಿ ಬಲಿ ಪಡೆದ ಟಿಪ್ಪರ್ ಲಾರಿ ಚಾಲಕನಿಗೆ ಕೋರ್ಟ್​ ಕೊಟ್ಟ ಶಿಕ್ಷೆ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts