More

    ಡಿವೋರ್ಸ್​ ಬಳಿಕ ನಟಿ ಅಮಲಾ ಪೌಲ್​ ಹಾದಿಯನ್ನೇ ಅನುಸರಿಸಿದ ನಟಿ ಸಮಂತಾ..!

    ಹೈದರಾಬಾದ್​: ನಟಿ ಸಮಂತಾ ಅವರು ಡಿವೋರ್ಸ್​ ನಂತರ ನಟಿ ಅಮಲಾ ಪೌಲ್​ ಅವರ ಹಾದಿಯನ್ನೇ ಹಿಡಿದಿದ್ದಾರೆ. ಅಮಲಾ ಅವರು ನಿರ್ದೇಶಕ ಎ.ಎಲ್​. ವಿಜಯ್ ಜತೆ ಸಪ್ತಪದಿ ತುಳಿದು ಕೆಲವೇ ವರ್ಷಗಳಲ್ಲಿ ವಿಚ್ಛೇದನ ಪಡೆದುಕೊಂಡರು. ಅದಾದ ಬಳಿಕ ಸಿನಿಮಾ ರಂಗಕ್ಕೆ ಮರು ಪ್ರವೇಶ ಪಡೆದ ಅಮಲಾ, ತಮ್ಮ ಮೇಲಿನ ಗಮನ ಸೆಳೆಯಲು ಹಾಟ್​ ಫೋಟೋಶೂಟ್​ ಮೊರೆ ಹೋದರು. ಅಲ್ಲದೆ, ಸಿನಿಮಾಗಳಲ್ಲಿ ಬೋಲ್ಡ್​ ಸೀನ್​ಗಳಲ್ಲಿ ಕಾಣಿಸಿಕೊಂಡರು. ಈಗಲೂ ಸಹ ಗ್ಲಾಮರಸ್​ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ.

    ಇದೀಗ ಸಮಂತಾ ಕೂಡ ಅದೇ ಹಾದಿಯನ್ನೇ ಹಿಡಿದಿದ್ದಾರೆ. ಇತ್ತೀಚೆಗಷ್ಟೇ ಸಮಂತಾ ಅವರು ನಟ ನಾಗಚೈತನ್ಯರೊಂದಿಗೆ ಡಿವೋರ್ಸ್​​ ಪಡೆದಿದ್ದಾರೆ. ಅದರ ಬೆನ್ನಲ್ಲೇ ಗ್ಲಾಮರಸ್​ ಫೋಟೋಶೂಟ್​ ಕಡೆಗೆ ಸಮಂತಾ ಗಮನಹರಿಸಿದ್ದಾರೆ. ಅದರಲ್ಲೂ ಅಚ್ಚರಿಯ ವಿಷಯವೆಂದರೆ, ಅಲ್ಲು ಅರ್ಜುನ್​ ಅವರ ಬಹುನಿರೀಕ್ಷಿತ ಸಿನಿಮಾ “ಪುಷ್ಪಾ”ದಲ್ಲಿ ಐಟಂ ಸಾಂಗ್​ಗೆ ಸಹಿ ಹಾಕುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಐಟಂ ಸಾಂಗ್​ ಮೂಲಕ ಸಿನಿ ರಸಿಕರ ಮೈ ಬಿಸಿಯೇರಿಸಲು ಸಮಂತಾ ತಯಾರಾಗಿದ್ದಾರೆ.

    ಇನ್ನು ಈಗಾಗಲೇ ಬೋಲ್ಡ್​ ಫೋಟೋಗಳ ಮೂಲಕ ಸಮಂತಾ, ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಇದೀಗ ಬಂದಿರುವ ಮಾಹಿತಿ ಪ್ರಕಾರ ಮುಂದಿನ ಸಿನಿಮಾಗಳಲ್ಲಿ ಸಮಂತಾ ಮತ್ತಷ್ಟು ಬೋಲ್ಡ್​ ದೃಶ್ಯಗಳಲ್ಲಿ ನಟಿಸಲು ಮುಂದಾಗಿದ್ದಾರಂತೆ. ಅಲ್ಲದೆ, ಈಗಾಗಲೇ ಸಮಂತಾ ತಮ್ಮ ಸಂಭಾವನೆಯನ್ನು ಸಹ ಏರಿಸಿಕೊಂಡಿದ್ದಾರಂತೆ.

    ಅಮಲಾ ಪೌಲ್​ ಕೂಡ ಡಿವೋರ್ಸ್​ ನಂತರ ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಇಬ್ಬರು ಕೂಡ ಸ್ವತಂತ್ರ ಹಾಗೂ ಪ್ರಬಲ ಮಹಿಳೆಯರು. ಮದುವೆಗೂ ಮುನ್ನ ಇಬ್ಬರು ಕೂಡ ಸಿನಿಮಾ ಕ್ಷೇತ್ರದಲ್ಲಿ ಭಾರೀ ಸದ್ದು ಮಾಡಿದ್ದಾರೆ. ಹಾಗೇ ಡಿವೋರ್ಸ್​ ವಿಚಾರದಲ್ಲಿಯೂ ಹೆಚ್ಚು ಚರ್ಚೆಗೆ ಗ್ರಾಸವಾದರೂ. ಇದೀಗ ತಮ್ಮ ಬೋಲ್ಡ್​ ದೃಶ್ಯಗಳ ಮೂಲಕವೂ ಮತ್ತೆ ಸಿನಿರಸಿಕರ ಕಣ್ಣುಗಳು ತಮ್ಮ ಮೇಲೆ ಹರಿಯುವಂತೆ ಮಾಡುತ್ತಿದ್ದಾರೆ.

    ಏನೇ ಆದರೂ ಅವರಿಬ್ಬರ ಧೈರ್ಯ, ಕಠಿಣ ಪರಿಶ್ರಮ ಮತ್ತು ಅವರ ವೈಯಕ್ತಿಕ ಜೀವನದಲ್ಲಿ ಸಂಭವಿಸಿದ ಬಿರುಗಾಳಿಗಳಿಗೆ ಸಿಲುಕದೆ ಎಲ್ಲವನ್ನು ನಿಭಾಯಿಸಿದ ರೀತಿಯನ್ನು ಪ್ರಶಂಸಿಸಬೇಕು. ಆ ವೈಯಕ್ತಿಕ ಸಮಸ್ಯೆಗಳು ತಮ್ಮ ವೃತ್ತಿಜೀವನದ ಮೇಲೆ ಪರಿಣಾಮ ಬೀರಲು ಅವರು ಬಿಡುತ್ತಿಲ್ಲ ಎಂಬುದೇ ಗಮನಾರ್ಹವಾಗಿದೆ. (ಏಜೆನ್ಸೀಸ್​)

    ‘20 ವರ್ಷದಲ್ಲಿ ರಾಜ್‌ ಕುಟುಂಬದಲ್ಲೇ ಪುನೀತ್‌ ಹುಟ್ತಾನೆ… ನಾನು ಇರ್ತೇನೋ ಗೊತ್ತಿಲ್ಲ.. ಆದ್ರೆ ಈ ಮಾತು ಬರೆದಿಟ್ಟುಕೊಳ್ಳಿ…’

    ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್​ ಪೊಲೀಸ್​ ವಶಕ್ಕೆ; ಬಂಧಿಸಲು ಹೋದ ಇನ್​​ಸ್ಪೆಕ್ಟರ್​ ಮೇಲೆ ಹಲ್ಲೆ

    ಇಂಜಿನಿಯರಿಂಗ್‌ ಪದವೀಧರರಿಗೆ ಕೇಂದ್ರ ಸರ್ಕಾರದಲ್ಲಿ ಭರ್ಜರಿ ಅವಕಾಶ: ವಿವಿಧ ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts