ಬೆಳಗ್ಗೆ ಸಹೋದ್ಯೋಗಿಗೆ ಕರೆ ಮಾಡಿದ ಬೆನ್ನಲ್ಲೇ ಸಾವಿನ ಹಾದಿ ಹಿಡಿದ ಮಹಿಳಾ ಟೆಕ್ಕಿ..!

Techi
Published on

ರಾಯದುರ್ಗ: ಮಹಿಳಾ ಟೆಕ್ಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​ನ ಗಾಚಿಬೌಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತಳನ್ನು ಸ್ಮೃತಿಖಾ ಫರೀದಾ (26) ಎಂದು ಗುರುತಿಸಲಾಗಿದೆ. ಈಕೆ ಒಡಿಶಾದ ಭುವನೇಶ್ವರ ಮೂಲದವಳು. ಸಾಫ್ಟ್​ವೇರ್​ ಇಂಜಿನಿಯರ್ ಆಗಿ ಹೈದರಾಬಾದ್​ನಲ್ಲಿ ಕೆಲಸ ಮಾಡುತ್ತಿದ್ದ ಫರೀದಾ ಗೌಲಿದೊಡ್ಡಿಯಲ್ಲಿ ಮಹಿಳಾ ಪಿಜಿಯಲ್ಲಿ ಉಳಿದುಕೊಂಡಿದ್ದಳು.

ಸೋಮವಾರ ಬೆಳಗ್ಗೆ ತನ್ನ ಸಹೋದ್ಯೋಗಿ ಜಾನ್​ಗೆ ಕರೆ ಮಾಡಿದ್ದಳು. ಇದಾದ ಬಳಿಕ ಆಕೆ ಹಾಸ್ಟೆಲ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಹಾಸ್ಟೆಲ್​ ಮ್ಯಾನೇಜರ್​ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಒಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net