ಎಲ್ಲರಿಗೂ ನಾನು ಪ್ರಾಮಾಣಿಕಳಾಗಿರುತ್ತೇನೆ: ಮದ್ವೆ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ನಟಿ ತಾಪ್ಸಿ ಪನ್ನು!

Tapsee Pannu
Published on

ಮುಂಬೈ: ನಟಿಯರ ಕುರಿತು ಆಗಾಗ ಕೇಳುವ ಸಾಮಾನ್ಯ ಪ್ರಶ್ನೆಯೆಂದರೆ ಅದು ಮದುವೆ ಯಾವಾಗ? ಆದರೆ, ಮದುವೆ ಬಗ್ಗೆ ಒಬ್ಬೊಬ್ಬ ನಟಿಯರಲ್ಲೂ ಒಂದೊಂದು ಅಭಿಪ್ರಾಯ ಇದೆ. ಅದೇ ರೀತಿಯಾಗಿ ನಟಿ ತಾಪ್ಸಿ ಪನ್ನು ಮದುವೆ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ತಾಪ್ಸಿ ಅವರು ಸಂದರ್ಶನವೊಂದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಮದುವೆ ಯೋಜನೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸದ್ಯ ತಾಪ್ಸಿ ಅವರು ಮಥಿಯಾಸ್ ಬೋ ಅವರ ಜತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ನಾನು ‘ಎಂದಿಗೂ ಮದುವೆಯಾಗದೆ ಉಳಿಯಬಹುದು’ ಎಂದು ನನ್ನ ಪಾಲಕರು ಚಿಂತಿತರಾಗಿದ್ದಾರೆ ಎಂದು ತಾಪ್ಸಿ ಪನ್ನು ಹೇಳಿಕೊಂಡರು. ಯಾರನ್ನಾದರೂ ಮದುವೆ ಆಗಬೇಕೆಂಬ ನನ್ನ ಪಾಲಕರ ಆಶಯದ ವಿರುದ್ಧವಾಗಿ ಹಾಗೂ ಅವರಿಗೆ ಇಷ್ಟವಿಲ್ಲದ ಯಾರನ್ನೂ ನಾನು ಮದುವೆ ಆಗುವುದಿಲ್ಲ. ನಾನು ಡೇಟಿಂಗ್ ಮಾಡಿದ ಮತ್ತು ಮದುವೆಯಾಗುವ ಬಗ್ಗೆ ಯೋಚಿಸಿದ ಎಲ್ಲರಿಗೂ ನಾನು ಈ ಬಗ್ಗೆ ತುಂಬಾ ಪ್ರಾಮಾಣಿಕನಾಗಿರುತ್ತೇನೆ ಎಂದು ತಾಪ್ಸಿ ಹೇಳಿದ್ದಾರೆ.

ಮದುವೆಯಾಗುವ ಸಾಧ್ಯತೆ ಇದ್ದರೆ ನಾನು ಮಾತ್ರ ಈ ವ್ಯಕ್ತಿಯ ಮೇಲೆ ಸಮಯ ಮತ್ತು ಶಕ್ತಿಯನ್ನು ವ್ಯಯಿಸಬೇಕು. ಟೈಮ್ ಪಾಸ್ ಮಾಡಲು ನನಗೆ ಯಾವುದೇ ಆಸಕ್ತಿ ಇಲ್ಲ ಎಂದಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಹಲವಾರು ಪ್ರಾಜೆಕ್ಟ್​ಗಳನ್ನು ತಾಪ್ಸಿ ಬಿಜಿಯಾಗಿದ್ದಾರೆ. ಅವರು ಮುಂದಿನ ಶಹಾಶ್ ಮಿಥು ಚಿತ್ರದಲ್ಲಿ ಮಹಿಳಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net