More

    ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡಿದ್ದ ಮೀಟೂ ಕೇಸ್​ ಮತ್ತೆ ಮುನ್ನೆಲೆಗೆ: ಶ್ರುತಿ ಹರಿಹರನ್​ಗೆ ಪೊಲೀಸರ ಬುಲಾವ್​

    ಬೆಂಗಳೂರು: ದೇಶದ ಸಿನಿ ಇಂಡಸ್ಟ್ರಿಯಲ್ಲಿ ಸದ್ದು ಮಾಡಿದ್ದ ಮೀಟು ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ನಟ ಅರ್ಜುನ್​ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್​ಗೆ ಕಬ್ಬನ್​ ಪಾರ್ಕ್​ ಪೊಲೀಸರು ನೋಟಿಸ್​ ಜಾರಿ ಮಾಡಿದ್ದಾರೆ.

    ನೋಟೀಸ್ ತಲುಪಿದ ಮೂರು ದಿನದೊಳಗೆ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಶ್ರುತಿ ಹರಿಹರನ್​ಗೆ ನೋಟಿಸ್​ನಲ್ಲಿ ತಿಳಿಸಲಾಗಿದೆ. ಸೌತ್ ಸೂಪರ್ ಸ್ಟಾರ್ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಗಂಭೀರ ಆರೋಪ ಮಾಡಿದ್ದರು. ವಿಸ್ಮಯ ಚಿತ್ರದ ಚಿತ್ರೀಕರಣ ವೇಳೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಸರ್ಜಾ ವಿರುದ್ಧ ಶ್ರುತಿ ಆರೋಪಿಸಿದ್ದರು.

    ಈ ಸಂಬಂಧ 2018ರಲ್ಲಿ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಶ್ರುತಿ ದೂರು ದಾಖಲಿಸಿದ್ದರು. ದೂರಿನ್ವಯ ಅರ್ಜುನ್ ಸರ್ಜಾ ವಿರುದ್ಧ ಭಾರತೀಯ ದಂಡ ಸಂಹಿತೆ 354, 354 ಎ ಮತ್ತು 506 ಸೆಕ್ಷನ್​ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಮೂರು ವರ್ಷದ ಬಳಿಕ ಇದೀಗ ಮೀಟೂ ಪ್ರಕರಣ ಮತ್ತೆ ಸದ್ದು ಮಾಡಿದೆ.

    ಇದೀಗ ಪ್ರಕರಣ ತನಿಖೆಯು ಅಂತಿಮ‌ ಹಂತಕ್ಕೆ ತಲುಪಿದೆ. ಮೀಟು ಹೆಸ್ರಲ್ಲಿ ನಟಿ ಶೃತಿಹರಿಹರನ್ ಕತೆ ಕಟ್ಟಿದ್ರಾ ಅನ್ನೋ ಅನುಮಾನ ಕಾಡತೊಡಗಿದೆ. ತನಿಖೆ ವೇಳೆ ಯಾವೂದೇ ಸಾಕ್ಷಿ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ‘ಬಿ’ರಿಪೋರ್ಟ್ ಸಲ್ಲಿಸಿದ್ದಾರೆ. ಶ್ರುತಿ ಮಾಡಿದ್ದ ಆರೋಪಗಳಿಗೆ ಸಾಕ್ಷ ಸಿಗದ ಕಾರಣ ಕೋರ್ಟ್​ನಲ್ಲಿ ‘ಬಿ’ ರಿಪೋರ್ಟ್ ಸಲ್ಲಿಸಲು ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ. ಇದೇ ವಾರ ಕೋರ್ಟ್​ಗೆ ತನಿಖಾಧಿಕಾರಿಯಿಂದ ‘ಬಿ’ರಿಪೋರ್ಟ್ ಸಲ್ಲಿಕೆಯಾಗಲಿದೆ. ಇದಕ್ಕೂ ಮೊದಲು ನಟಿ ಶ್ರುತಿ ಹರಿಹರನ್​ಗೆ ನೋಟಿಸ್ ನೀಡಲಾಗಿದೆ. (ದಿಗ್ವಿಜಯ ನ್ಯೂಸ್​)

    ಹುಟ್ಟುಹಬ್ಬದಂದು ಪ್ರೇಯಸಿ ಸಿಗದ ನೋವಿನಲ್ಲಿ ಎಡವಟ್ಟು ಮಾಡಿಕೊಂಡ ಹಾಸನದ ಯುವಕ: ಪಾಲಕರ ಕಣ್ಣೀರು

    ಬಿಎಸ್​ವೈ ಬಗ್ಗೆ ಒಳ್ಳೆಯ ಮಾತನ್ನಾಡಬಾರದೆ?; ಬಿಜೆಪಿಗೆ ಬೆಂಬಲ ನೀಡುತ್ತೇನೆ ಎಂದು ಹೇಳಿಲ್ಲ: ಎಚ್​.ಡಿ.ಕುಮಾರಸ್ವಾಮಿ

    ಅನ್ಯರೋಗಗಳ ಔಷಧ ಪೂರೈಕೆಗೆ ಕ್ರಮ; ರಾಜ್ಯದಲ್ಲಿ ಒಮಿಕ್ರಾನ್ ಬಗ್ಗೆ ಆತಂಕ ಬೇಡ: ಆರೋಗ್ಯ ಸಚಿವ ಡಾ. ಸುಧಾಕರ್ ಅಭಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts