ನಿಮ್ಮ ಮದ್ವೆ ಯಾವಾಗ? ನಟಿ ಸೋನಾಕ್ಷಿ ಸಿನ್ಹಾ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಗರಂ

Sonakshin Sinha
Published on

ಮುಂಬೈ: ಮದುವೆಯಾಗದೇ ಉಳಿದ ಬಹುತೇಕ ಸೆಲೆಬ್ರಿಟಿಗಳಿಗೆ ಆಗಾಗ ಎದುರಾಗುವ ಸಾಮಾನ್ಯ ಪ್ರಶ್ನೆಯೆಂದರೆ ನಿಮ್ಮ ಮದುವೆ ಯಾವಾಗ ಎಂಬುದು. ಇದೀಗ ಇದೇ ಪ್ರಶ್ನೆ ಬಾಲಿವುಡ್​ ಬ್ಯೂಟಿ ಸೋನಾಕ್ಷಿ ಸಿನ್ಹಾಗೆ ಎದುರಾಗಿದ್ದು, ಅವರು ಕೊಟ್ಟ ಉತ್ತರ ನೋಡಿ ನೆಟ್ಟಿಗರು ಕೆಂಡಾಮಂಡಲರಾಗಿದ್ದಾರೆ.

ನಟಿ ಸೋನಾಕ್ಷಿ ಅವರು ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಪ್ರಶ್ನೋತ್ತರ ಸೆಷೆನ್​ ನಡೆಸಿದ್ದರು. ಈ ವೇಳೆ ನೆಟ್ಟಿಗೊಬ್ಬ ಮೇಡಂ ಎಲ್ಲರೂ ಮದುವೆ ಆಗುತ್ತಿದ್ದಾರೆ ನೀವು ಯಾವಾಗ ಮದುವೆ ಆಗುತ್ತೀರಾ? ಎಂದು ಪ್ರಶ್ನೆ ಮಾಡಿದ್ದ.

ಇದಕ್ಕೆ ವ್ಯಂಗ್ಯವಾಗಿ ಉತ್ತರಿಸಿದ ಸೋನಾಕ್ಷಿ, ಎಲ್ಲರಿಗೆ ಕೋವಿಡ್​ ಸೋಂಕು ತಗುಲುತ್ತಿದೆ. ಹಾಗಂತ ನಾನೂ ಕೋವಿಡ್​ ಸೋಂಕಿಗೆ ಒಳಗಾಗಲೇ? ಎಂದು ಮರು ಪ್ರಶ್ನಿಸಿದ್ದಾರೆ. ಸಾಕಷ್ಟು ಪ್ರಶ್ನೆಗಳಿಗೆ ಬಾಲಿವುಡ್​ ಬ್ಯೂಟಿ ಉತ್ತರಿಸಿದರೂ ಕೂಡ ನಟಿಯ ಮದುವೆ ಕುರಿತಾದ ಪ್ರಶ್ನೋತ್ತರ ಇದೀಗ ವೈರಲ್​ ಆಗಿದೆ.

ಇನ್ನು ನಟಿ ಸೋನಾಕ್ಷಿ ನೀಡಿದ ಉತ್ತರ ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಉತ್ತರ ನೀಡುವ ರೀತಿ ಇದೆನಾ ಎಂದಿದ್ದಾರೆ. ನಾವು ಕೇಳಿದ್ದೇ ಒಂದು ಇವರು ಹೇಳುತ್ತಿರುವುದೇ ಒಂದು. ಮದುವೆ ಆಗುವುದಕ್ಕೂ ಕೋವಿಡ್​ ಸೋಂಕು ತಗಲುವುದಕ್ಕೂ ಎಲ್ಲಿಯ ಸಂಬಂಧ. ಕೋವಿಡ್​ ಸೋಂಕನ್ನು ಎಲ್ಲರು ಬೇಕು ಅಂತಾ ತಗಲಿಸಿಕೊಳ್ಳುತ್ತಿದ್ದಾರಾ? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸೋನಾಕ್ಷಿ ಅವರು ಹುಮಾ ಖುರೇಶಿ ಅವರ ಡಬಲ್​ ಎಕ್ಷ್​ಎಲ್​ ಮತ್ತು ರಿತೇಶ್​ ದೇಶ್​ಮುಖ್​ ಅಭಿನಯದ ಕಕುಡಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net