More

    ಹಾವು ನುಂಗುವ ಸಾಹಸಕ್ಕೆ ಕೈ ಹಾಕಿದ ಕೃಷಿಕ: 2 ಬಾರಿ ಬಚಾವ್​ ಆದವನಿಗೆ 3ನೇ ಬಾರಿ ಅದೃಷ್ಟ ಕೈಕೊಟ್ಟಿತು..!

    ಮಾಸ್ಕೋ: ಹಾವು ನುಂಗುವ ಸಾಹಸಿಗನೊಬ್ಬ ಹಾವಿನಿಂದಲೇ ಪ್ರಾಣ ಕಳೆದುಕೊಂಡಿರುವ ದುರಂತ ರಷ್ಯಾದ ಅಸ್ಟ್ರಖಾನ್​ ವಲಯದಲ್ಲಿ ನಡೆದಿದೆ. ವಿಷಕಾರಿ ಮಂಡಲದ ಹಾವನ್ನು ಬಾಯಿಯೊಳಗೆ ಹಾಕಿದ ವೇಳೆ ಹಾವು ನಾಲಿಗೆ ಕಡಿದಿದ್ದರಿಂದ ಭಯಾನಕ ಅಲರ್ಜಿ ಉಂಟಾಗಿ ಮೃತಪಟ್ಟಿದ್ದಾರೆ.

    ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮೃತ ವ್ಯಕ್ತಿಯ ವಯಸ್ಸು ಅಂದಾಜು 55 ವರ್ಷ. ಕೃಷಿಕನಾಗಿದ್ದು, ಆಗಾಗ ಸಿಗುತ್ತಿದ್ದ ಹಾವುಗಳನ್ನು ನುಂಗುವ ಹವ್ಯಾಸ ಬೆಳೆಸಿಕೊಂಡಿದ್ದ. ಅಸ್ಟ್ರಖಾನ್​ ವಲಯದ ಕಲ್ಲಂಗಡಿ ಜಮೀನಿನಲ್ಲಿ ಇದೇ ಸಾಹಸವನ್ನು ಮಾಡಲು ಹೋಗಿ ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದಾನೆ.

    ವಿಷಕಾರಿ ಮಂಡಲದ ಹಾವನ್ನು ಎರಡು ಬಾರಿ ಬಾಯಿಯೊಳಗೆ ಹಾಕಿ ಹೊರಗಡೆ ತೆಗೆದಿದ್ದ. ಆದರೆ, ಮೂರನೇ ಪ್ರಯತ್ನದಲ್ಲಿ ಗಂಟಲು ಕೆಳಗೆ ಹಾವನ್ನು ನುಂಗುವ ಪ್ರಯತ್ನದಲ್ಲಿ ಹಾವು ಆತನ ನಾಲಿಗೆಯನ್ನು ಕಡಿದಿದೆ. ಮೊದಲೇ ಅಪಾಯಕಾರಿ ಹಾವಾಗಿದ್ದರಿಂದ ಕೆಲವೇ ಕ್ಷಣಗಳಲ್ಲಿ ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹಾವು ಕಡಿದಿದ್ದರಿಂದ ಅಲರ್ಜಿ ಆಗಿ ಆತನ ಗಂಟಲು ನಾಲಿಗೆ ಊದಿಕೊಳ್ಳಲು ಆರಂಭಿಸಿದೆ. ಆತನ ನಾಲಿಗೆ ತುಂಬಾ ಊದಿಕೊಂಡು ಬಾಯಿ ಸಂಪೂರ್ಣ ಮುಚ್ಚಿಕೊಂಡಿತು. ಇದರಿಂದ ಆತನ ಉಸಿರಾಟದ ತೊಂದರೆಯು ಆಯಿತು. ವೈದ್ಯರು ಸಾಕಷ್ಟು ಪ್ರಯತ್ನ ಮಾಡಿದರೂ ಕೃಷಿಕನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

    ಇನ್ನು ಹಾವು ನುಂಗುವುದು ಸ್ಥಳೀಯ ಜನರಲ್ಲಿ ಪ್ರಖ್ಯಾತ ತಂತ್ರಗಳಲ್ಲಿ ಒಂದಾಗಿದೆಯಂತೆ. ಇದೀಗ ಈ ಘಟನೆಯಿಂದ ಸ್ಥಳೀಯ ಜನರು ಕೂಡ ಬೆಚ್ಚಿಬಿದ್ದಿದ್ದಾರೆ. ಇನ್ನು ಮುಂದೆ ಈ ರೀತಿಯ ಹುಚ್ಚು ಪ್ರಯತ್ನಗಳನ್ನು ಮಾಡದಂತೆ ತಜ್ಞರು ಎಚ್ಚರಿಸಿದ್ದಾರೆ. (ಏಜೆನ್ಸೀಸ್​)

    ಬಾ ನಲ್ಲೆ ಮಧುಚಂದ್ರಕೆ ಫಿಲ್ಮ್​ ನೋಡಿ ಪತ್ನಿ ಹತ್ಯೆಗೆ ಸಂಚು: ಪೊಲೀಸರ ಮುಂದೆ ಸ್ಫೋಟಕ ರಹಸ್ಯ ಬಿಚ್ಚಿಟ್ಟ ಗಂಡ!

    ಪ್ರೀತಿಸಿ ಮದ್ವೆ ಆದವಳು ಪಕ್ಕದ ಮನೆಯವನ ಜತೆ ಎಸ್ಕೇಪ್! ಮನನೊಂದು ಗಂಡ ಆತ್ಮಹತ್ಯೆಗೆ ಶರಣು

    ನಿನ್ನ ಜತೆ ಮಾತನಾಡಬೇಕಿದೆ ಬಾ…! ಪ್ರಿಯಕರನನ್ನು ನಂಬಿ ಹೋದ ಪ್ರೇಯಸಿಯ ದುರಂತ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts