ಯಾರನ್ನೂ ಬಿಟ್ಟಿಲ್ಲ: ಸಹೋದರನ ಖಾಸಗಿ ಜೀವನದ ಸ್ಫೋಟಕ ರಹಸ್ಯ ಬಯಲು ಮಾಡಿದ ಸೋನಮ್​ ಕಪೂರ್​!

Sonam Kapoor
Published on

ಮುಂಬೈ: ಬಾಲಿವುಡ್​ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್​ ಜೋಹರ್​ ನಡೆಸಿಕೊಡುವ ಕಾಫಿ ವಿತ್​ ಕರಣ್​ ಕಾರ್ಯಕ್ರಮದ 7ನೇ ಸೀಸನ್​ನ 6ನೇ ಎಪಿಸೋಡ್​ನ ಮುಖ್ಯ ಅತಿಥಿಗಳಾಗಿ ನಟಿ ಸೋನಮ್​ ಕಪೂರ್​ ಮತ್ತು ಆಕೆಯ ಸೋದರಸಂಬಂಧಿ ಅರ್ಜುನ್​ ಕಪೂರ್​ ಭಾಗವಹಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೊಮೋ ಬಿಡುಗಡೆಯಾಗಿದ್ದು, ಅರ್ಜುನ್​ ಬಗ್ಗೆ ಸೋನಮ್​ ಹೇಳಿರುವ ಮಾತು ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಗರ್ಭಿಣಿ ಸೋನಮ್​ ಕಪ್ಪು ಬಣ್ಣದ ಗೌನ್​ ಧರಿಸಿ, ಮಿಂಚಿದರೆ, ಅವರ ಸಹೋದರ ಅರ್ಜುನ್​ ಸ್ಪೋರ್ಟ್ಸ್​ ಟ್ಯಾನ್​ ಜಾಕೆಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾಫಿ ವಿತ್​ ಕರಣ್​ ಕಾರ್ಯಕ್ರಮ ಅಂದಮೇಲೆ ಕೇಳಬೇಕಾ, ಅಲ್ಲಿ ಸಿನಿಮಾ ಸಂಬಂಧ ಪ್ರಶ್ನೆಗಳಿಗಿಂತ ವೈಯಕ್ತಿಕ ಪ್ರಶ್ನೆಗಳನ್ನೇ ಹೆಚ್ಚು ಕೇಳಲಾಗುತ್ತದೆ. ಅದರಲ್ಲೂ ಸೆಲೆಬ್ರಿಟಿಗಳ ಸೆಕ್ಸ್​ ಲೈಫ್​ ಬಗ್ಗೆಯೇ ನಿರೂಪಕ ಕರಣ್​ ಜೋಹರ್ ಹೆಚ್ಚೆಚ್ಚು ಕೆದಕುತ್ತಾರೆ. ಈ ಕಾರಣದಿಂದಲೇ ಈ ಕಾರ್ಯಕ್ರಮ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತದೆ.

ಇನ್ನು ಸೋನಮ್​ ಮತ್ತು ಅರ್ಜುನ್​ ಎಪಿಸೋಡ್​ ವಿಚಾರಕ್ಕೆ ಬರುವುದಾದರೆ, ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಅರ್ಜುನ್​ ಬಗ್ಗೆ ಸೋನಮ್​ ಸ್ಫೋಟಕ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ನಿಮ್ಮ ಎಷ್ಟು ಫ್ರೆಂಡ್ಸ್​ಗಳ ಜೊತೆ ಅರ್ಜುನ್​ ಮಲಗಿದ್ದಾರೆ ಎಂದು ಕರಣ್​ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರಿಸುವ ಸೋನಮ್​, ನನ್ನ ಎಲ್ಲ ಫ್ರೆಂಡ್ಸ್​ ಜೊತೆಯು ಮಲಗಿದ್ದಾನೆ. ಯಾರೊಬ್ಬರನ್ನು ಬಿಟ್ಟಿಲ್ಲ ಎಂದು ಹೇಳುತ್ತಾಳೆ. ತಕ್ಷಣ ಸೋನಮ್​ ಕಡೆ ನೋಡುವ ಅರ್ಜುನ್​, ನೀನೆಂಥಾ ಸಹೋದರಿ? ನಮ್ಮ ಬಗ್ಗೆ ಏನು ಹೇಳುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿ ನಗುತ್ತಾರೆ.

ಶೋನ ಇತಿಹಾಸದಲ್ಲೇ ಸೋನಮ್ ಅತ್ಯಂತ ವಿವಾದಾತ್ಮಕ ಅತಿಥಿಗಳಲ್ಲಿ ಒಬ್ಬರು ಎಂಬುದು ಗಮನಾರ್ಹವಾಗಿದೆ. ಈ ಹಿಂದೆ, ಸೋನಂ ಅವರು ರಣಬೀರ್ ಕಪೂರ್ ಉತ್ತಮ ಬಾಯ್‌ಫ್ರೆಂಡ್ ಮೆಟೀರಿಯಲ್ ಅಲ್ಲ ಎಂದಿದ್ದರು. ಅಲ್ಲದೆ, ಸರಳವಾಗಿ ಕಾಣುವ ನಟಿಯರೆಲ್ಲರೂ ಪ್ರತಿಭಾವಂತರು ಎಂಬ ಊಹೆಯ ಬಗ್ಗೆ ತಮ್ಮದೇ ಕಾಮೆಂಟ್‌ ಮಾಡುವ ಮೂಲಕ ಬಾಲಿವುಡ್​ನಲ್ಲಿ ಕೋಲಾಹಲವನ್ನೇ ಉಂಟು ಮಾಡಿದ್ದರು.

ಕಾಫಿ ವಿತ್​ ಕರಣ್​ ಕಾರ್ಯಕ್ರಮಕ್ಕೆ ಈಗಾಗಲೇ ಆಲಿಯಾ ಭಟ್​-ರಣವೀರ್​ ಸಿಂಗ್​, ಜಾಹ್ನವಿ ಕಪೂರ್​-ಸಾರಾ ಅಲಿ ಖಾನ್​, ಸಮಂತಾ ರುತು ಪ್ರಭು-ಅಕ್ಷಯ್​ ಕುಮಾರ್​, ಅನನ್ಯ ಪಾಂಡೆ-ವಿಜಯ ದೇವರಕೊಂಡ ಮತ್ತು ಕರೀನಾ ಕಪೂರ್​-ಆಮೀರ್​ ಖಾನ್​ ಅತಿಥಿಗಳಾಗಿ ಭಾಗವಹಿಸಿದ್ದಾರೆ. ಇದೀಗ ಸೋನಮ್​ ಮತ್ತು ಅರ್ಜುನ್​ ಭಾಗವಹಿಸಿದ್ದು, ಇದೇ ಆಗಸ್ಟ್​ 11ರಂದು ಡಿಸ್ನಿ ಪ್ಲಸ್ ಹಾಟ್​ಸ್ಟಾರ್​ನಲ್ಲಿ ಕ್ರಾರ್ಯಕ್ರಮ ಪ್ರಸಾರವಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net