More

    ಬಿಗ್​ ಬಾಸ್​ ಮನೆಯಲ್ಲಿ ಮತ್ತೊಂದು ಗುಟ್ಟು ಬಿಚ್ಚಿಡುತ್ತಲೇ ಹೆಣ್ಮಕ್ಕಳಿಗೆ ಸಂದೇಶ ರವಾನಿಸಿದ ಸೋನು!

    ಬೆಂಗಳೂರು: ಟಿಕ್​ಟಾಕ್​ ಸ್ಟಾರ್​, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್​ ಆಗಿರುವ ಹಾಗೂ ಸದಾ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುವ ಸೋನು ಶ್ರೀನಿವಾಸ ಗೌಡ, ‘ಬಿಗ್​ ಬಾಸ್​’ ಮನೆಯಲ್ಲಿ ಮತ್ತೊಂದು ವಿಷಯ ಬಾಯ್ಬಿಟ್ಟಿದ್ದಾರೆ. ‘ಬಿಗ್​ಬಾಸ್​ ಒಟಿಟಿ ಕನ್ನಡ’ದ ಮೊದಲ ಸೀಸನ್​ನಲ್ಲಿ ಎರಡನೇ ಸ್ಪರ್ಧಿಯಾಗಿ ದೊಡ್ಮನೆಯನ್ನ ಪ್ರವೇಶಿಸಿದ ಮೊದಲ ದಿನವೇ ತನ್ನ ಬದುಕಲ್ಲಾದ ಕಹಿ ಘಟನೆ ಬಗ್ಗೆ ಹೇಳುತ್ತಾ ಕಣ್ಣೀರಿಟ್ಟಿದ್ದಳು. ತನ್ನ ಖಾಸಗಿ ವಿಡಿಯೋ ವೈರಲ್​ ಆಗಿದ್ದು ಹೇಗೆ? ಎಂದು ಎಲ್ಲವನ್ನೂ ಎಳೆಎಳೆಯಾಗಿ ವಿವರಿಸುತ್ತಾ ಬಿಕ್ಕಿಬಿಕ್ಕಿ ಅತ್ತಿದ್ದಳು. ಇದೀಗ ತನ್ನ ಮತ್ತೊಂದು ಖಾಸಗಿ ವಿಡಿಯೋ ಆತನ ಬಳಿ ಇದೆ. ಅದನ್ನು ಆತ ಯಾವಾಗ ಬಿಡುಗಡೆ ಮಾಡುತ್ತಾನೋ ಎಂದು ಆತಂಕ ಹೊರಹಾಕಿದ್ದಾಳೆ.

    ಕೆಲ ತಿಂಗಳ ಹಿಂದೆ ಸೋನು ಅವರ ಖಾಸಗಿ ವಿಡಿಯೋ ವೈರಲ್​ ಆಗಿ ಜಾಲತಾಣದಲ್ಲಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಿತ್ತು. ಇದೇ ವಿಚಾರ ಈಗಲೂ ಚರ್ಚೆಯಾಗುತ್ತಲೇ ಇದೆ. ಇನ್ನು ಬಿಗ್​ಬಾಸ್​ ಮನೆಗೆ ಸೋನು ಆಯ್ಕೆ ನೆಟ್ಟಿಗರು ಗರಂ ಆಗಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ಬಳಿಕ ಟ್ರೋಲಿಗರ ಕುರಿತು ಬಿಗ್​ಬಾಸ್​ ಮನೆಯಲ್ಲೇ ಪ್ರತಿಕ್ರಿಯಿಸಿರುವ ಸೋನು, ‘ಟ್ರೋಲರ್​ಗಳಿಂದ ನಾನು ಬೆಳೆದಿದ್ದೀನಿ ಅಂತ ಜನ ಹೇಳ್ತಾರೆ. ನಿಜಕ್ಕೂ ಅವರಿಂದ ನಾನು ಬೆಳೆದಿಲ್ಲ. ನನ್ನಿಂದಾಗಿ ಲೈಕ್ಸ್​ ಮತ್ತು ಫಾಲೋವರ್ಸ್​ ಅನ್ನು ಅವರು ಪಡೆಯುತ್ತಿದ್ದಾರೆ’ ಎಂದಿದ್ದಾಳೆ. ಇನ್ನು ಮತ್ತೊಂದು ಖಾಸಗಿ ವಿಡಿಯೋ ವೈರಲ್​ ಆಗುವ ಕುರಿತೂ ಆತಂಕ ವ್ಯಕ್ತಪಡಿಸಿದ್ದಾಳೆ.

    ‘ನನಗೆ ಗೊತ್ತಿರುವ ವ್ಯಕ್ತಿ ನನ್ನೊಂದಿಗೆ 3 ವರ್ಷ ಇದ್ದ. ಎಂಎಸ್ಸಿ ಮುಗಿದ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋದ. ಅಲ್ಲಿಂದಲೇ ನನ್ನನ್ನು ಪ್ರೀತಿಸುವುದಾಗಿ ಪ್ರಪೋಸ್​ ಮಾಡದೆ. ನಾನು ಒಪ್ಪಿಕೊಂಡೆ. ಆತ ನಮ್ಮ ಜಾತಿಯವನು. ಮದುವೆ ಆಗಲು ನಿರ್ಧರಿಸಿದ್ದೆವು. ಈ ವಿಚಾರವನ್ನು ನಾನು ನನ್ನ ಅಮ್ಮನಿಗೂ ಹೇಳಿದ್ದೆ. ಒಮ್ಮೆ ನನ್ನ ಮೇಲೆ ನಿಜಕ್ಕೂ ನಿನಗೆ ಪ್ರೀತಿ ಇದ್ದರೆ ವಿಡಿಯೋ ಕಾಲ್​ ಮಾಡು ಅಂದ. ನಾನು ಮಾಡಿದೆ. ಎಲ್ಲರ ಜೀವನದಲ್ಲೂ ಇದು ಕಾಮನ್​, ಆದರೆ ಆತ ಅದನ್ನೆಲ್ಲ ರೆಕಾರ್ಡ್​ ಮಾಡಿಕೊಂಡ. ವಾರದ ಬಳಿಕ ಆತನ ವರ್ತನೆ ಬದಲಾಗಿತ್ತು. ರೂಡ್​ ಆಗಿ ನಡೆದುಕೊಳ್ಳಲು ಶುರು ಮಾಡಿದ್ದ. ನನಗೆ ಆ ವಿಡಿಯೋ ಕಳಿಸಿ, ”ನೀನು ನನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆ ಆಗೋಕೆ ಆಗಲ್ಲ” ಅಂದ. ನನಗೇ ಎಲ್ಲವೂ ಅಲ್ಲೋಲ-ಕಲ್ಲೋಲ ಅನ್ನಿಸಿತು. ಆತನ ಮಾತಿಗೆ ಮರುಳಾಗಿ ವಿಡಿಯೋ ಕಾಲ್​ ಮಾಡಿದ ತಪ್ಪಿಗೆ ನಮ್ಮ ಮನೆಯ ಮಾನ-ಮರ್ಯಾದೆಯೇ ಹೋಯ್ತು. ನಾನು ಹೆಣ್ಣಾಗಿ ಹುಟ್ಟಿದ್ದೇ ತಪ್ಪಾಯ್ತಾ?.. ಎಂದು ಸೋನು ಕಣ್ಣೀರಿಟ್ಟಿದ್ದಾಳೆ.

    ‘ಆತನ ಬಳಿ ನನ್ನ 2 ಖಾಸಗಿ ವಿಡಿಯೋ ಇದೆ. ಅದರಲ್ಲಿ ಒಂದನ್ನು ಲೀಕ್​ ಮಾಡಿದ್ದಾನೆ, ಇನ್ನೊಂದನ್ನು ಯಾವಾಗ ಬಿಡ್ತಾನೋ ಗೊತ್ತಿಲ್ಲ. ನನಗೆ ಆದಂತೆ ಬೇರೆ ಯಾರಿಗೂ ಆಗಬಾರದು… ಹುಡುಗಿಯರು ನನ್ನ ಹಾಗೆ ಸ್ಟ್ರಾಂಗ್​ ಇರಿ. ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ… ವಿಡಿಯೋ ಲೀಕ್​ ಆದ ಮೇಲೆ ನಾನು ನಮ್ಮೂರಿಗೆ ಕಾಲಿಟ್ಟಿಲ್ಲ. ನಾನು ಆತನ ಮೇಲಿಟ್ಟಿದ್ದ ನಂಬಿಕೆಗೆ ಮೋಸ ಆಯ್ತು. ಆತನ ಸಹವಾಸ ಮಾಡಿ ಅಮ್ಮನ ಮಾನ-ಮರ್ಯಾದೆ ತೆಗೆದೆ. ಇಲ್ಲಿ ಯಾರೂ ಸಾಚಾ ಅಲ್ಲ, ಎಲ್ಲರೂ ಇದನ್ನು ಮಾಡಿಕೊಂಡಿರುತ್ತಾರೆ. ಆದರೆ ನನ್ನದು ಹೊರಗೆ ಬಂತು’ ಎಂದು ಸೋನು ಕಣ್ಣೀರು ಹಾಕಿದ್ದಾಳೆ.

    ಚಾಮರಾಜನಗರ ಉಪನ್ಯಾಸಕಿ ದುರಂತ ಅಂತ್ಯ: ಗೊಂದಲದ ಗೂಡಿಗೆ ಸಿಲುಕಿದ ಚಂದನಾ… ಡೆತ್​ನೋಟಲ್ಲಿದೆ ಸಾವಿನ ಕಾರಣ

    ಖಾಸಗಿ ವಿಡಿಯೋ ಲೀಕ್ ಆಗಿದ್ದು ಹೇಗೆ? ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿಡುತ್ತಲೇ ವಿವರಿಸಿದ ಸೋನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts