More

    ಪ್ರೀತಿಯ ನೆನಪೇ ಸ್ಟಾರ್​ ಜೋಡಿಗೆ ಮುಳುವಾಯ್ತು: ವಿಘ್ನೇಶ್​ ಶಿವನ್​-ನಯನತಾರಾ ವಿರುದ್ಧ ದೂರು ದಾಖಲು!

    ಚೆನ್ನೈ: ಸ್ಟಾರ್​ ಜೋಡಿ ಎನಿಸಿಕೊಂಡಿರುವ ಕಾಲಿವುಡ್​ ನಿರ್ದೇಶಕ ವಿಘ್ನೇಶ್​ ಶಿವನ್​ ಮತ್ತು ಲೇಡಿ ಸೂಪರ್​ಸ್ಟಾರ್​ ನಯನತಾರಾ ವಿರುದ್ಧ ದೂರು ದಾಖಲಾಗಿದೆ. ಇದಕ್ಕೆ ಕಾರಣ ಇಬ್ಬರ ಒಡೆತನದಲ್ಲಿರುವ ಪ್ರೊಡಕ್ಷನ್​ ಹೌಸ್​ “ರೌಡಿ ಪಿಕ್ಚರ್ಸ್​” ಹೆಸರು.

    ರೌಡಿ ಪಿಕ್ಚರ್ಸ್​ ಹೆಸರಿನ ಮೂಲಕ ರೌಡಿಗಳು ಮತ್ತು ರೌಡಿಸಂಗೆ ಉತ್ತೇಜನ ನೀಡುತ್ತಿದ್ದಾರೆಂದು ದೂರುದಾರ ಆರೋಪ ಮಾಡಿದ್ದಾರೆ.

    ವಿಘ್ನೇಶ್​ ಶಿವನ್​ ಮತ್ತು ನಯನತಾರಾ ರೌಡಿ ಪಿಕ್ಚರ್ಸ್​ ಹೆಸರಿನಲ್ಲಿ ಪ್ರೊಡಕ್ಷನ್​ ಹೌಸ್​ ತೆರೆದಿದ್ದಾರೆ. 2021ರಲ್ಲಿ ತೆರೆಕಂಡ ಪೀಬಲ್ಸ್​ ಮತ್ತು ರಾಕಿ ಚಿತ್ರವನ್ನು ತಮ್ಮ ಪ್ರೊಡಕ್ಷನ್​ನಲ್ಲಿ ನಿರ್ಮಿಸಿದರು. ಸುಮಾರು ಒಂದು ವರ್ಷದ ಹಳೆಯ ಪ್ರೊಡಕ್ಷನ್​ ಕಂಪನಿಯಾಗಿದ್ದು, ಇದರ ಮೂಲಕ ರೌಡಿಸಂಗೆ ಸ್ಟಾರ್​ ಜೋಡಿ ಉತ್ತೇಜನ ನೀಡುತ್ತಿದ್ದಾರೆ ಎಂದು ದೂರುದಾರ ದೂರು ನೀಡಿದ್ದಾರೆ.

    ವಿಜಯ್​ ಸೇತುಪತಿ ಮತ್ತು ವಿಘ್ನೇಶ್​ ಶಿವನ್​ ಅಭಿನಯದ ನಾನು ರೌಡಿಧಂ ಹೆಸರಿನ ಚಿತ್ರವು ಭರ್ಜರಿ ಯಶಸ್ಸು ಗಳಿಸಿತು. ಇದೇ ಚಿತ್ರದಲ್ಲಿ ವಿಘ್ನೇಶ್​ ಮತ್ತು ನಯನಾ ನಡುವೆ ಪ್ರೇಮಾಂಕುರವು ಆಯಿತು. ಇದರ ನೆನಪಿಗೆ ತಮ್ಮ ಪ್ರೊಡಕ್ಷನ್​ ಕಂಪನಿಗೆ ಸ್ಟಾರ್​ ಜೋಡಿ ರೌಡಿ ಪಿಕ್ಚರ್ಸ್​ ಹೆಸರನ್ನು ಇಟ್ಟಿದ್ದಾರೆ. ಆದರೆ, ಅದೇ ಹೆಸರು ಇದೀಗ ಇಬ್ಬರ ಮೇಲೆ ಪ್ರಕರಣ ದಾಖಲಾಗಲು ಕಾರಣವಾಗಿದೆ. (ಏಜೆನ್ಸೀಸ್​)

    ಆರ್​ಟಿ ನಗರದ ಬ್ರೋಕರ್​ ಮೋಹನ್ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತು ಪತ್ತೆ

    ಉ.ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು: ಪತ್ನಿಯನ್ನು ಥಳಿಸಿ ಹೊರಹಾಕಿದ ಪತಿ- ಎತ್ತಣೆತ್ತಣ ಸಂಬಂಧ ಅಂತೀರಾ?

    ಪಿಯುಸಿ ನಂತ್ರ ತೆಗೆದಿದ್ದು ಜೆರಾಕ್ಸ್ ಅಂಗಡಿ​: ಬ್ರೋಕರ್​ ಆದ ಬಳಿಕ ಮಾಜಿ ಮಂತ್ರಿಯ ಲಕ್ಷುರಿ ಬಂಗಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts