More

    ಖ್ಯಾತ ನಟಿ ಮೀನಾ ಬಾಳಲ್ಲಿ ಬಡಿದ ಬರಸಿಡಿಲು: ಚೆನ್ನೈನಲ್ಲಿ ಕೊನೆಯುಸಿರೆಳೆದ ಪತಿ ವಿದ್ಯಾಸಾಗರ್​

    ಚೆನ್ನೈ: ಖ್ಯಾತ ಹಿರಿಯ ನಟಿ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿ ರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ಮೀನಾ ಅವರ ಜೀವನದಲ್ಲಿ ಬರಸಿಡಿಲು ಬಡಿದಿದೆ. ಮೀನಾ ಅವರ ಪತಿ ವಿದ್ಯಾಸಾಗರ್ ಮಂಗಳವಾರ (ಜೂನ್​ 28) ಕೊನೆಯುಸಿರೆಳೆದಿದ್ದಾರೆ.

    ಬೆಂಗಳೂರು ಮೂಲದ ಉದ್ಯಮಿಯಾಗಿದ್ದ ವಿದ್ಯಾಸಾಗರ್​ ಅವರನ್ನು ಮೀನಾ ಅವರು 2009ರಲ್ಲಿ ಮದುವೆ ಆಗಿದ್ದರು. ದಂಪತಿಗೆ ನೈನಿಕಾ ಹೆಸರಿನ ಮುದ್ದಾಗ ಮಗಳಿದ್ದಾಳೆ. ನೈನಿಕಾ ವಿಜಯ್​ ನಟನೆಯ ಥೇರಿ ಸಿನಿಮಾದಲ್ಲಿ ವಿಜಯ್​ ಮಗಳಾಗಿ ನಟಿಸಿದ್ದಾಳೆ.

    ಖ್ಯಾತ ನಟಿ ಮೀನಾ ಬಾಳಲ್ಲಿ ಬಡಿದ ಬರಸಿಡಿಲು: ಚೆನ್ನೈನಲ್ಲಿ ಕೊನೆಯುಸಿರೆಳೆದ ಪತಿ ವಿದ್ಯಾಸಾಗರ್​

    ತೀವ್ರ ಶ್ವಾಸಕೋಶದ ಸೋಂಕಿನ ಸಮಸ್ಯೆಯಿಂದ ಚೆನ್ನೈನ ಖಾಸಗಿ ಆಸ್ಪತ್ರೆಗೆ ವಿದ್ಯಾ ಸಾಗರ್​ ಅವರು ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ನಿನ್ನೆ (ಜೂನ್​ 28) ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಆಸ್ಪತ್ರೆಯ ಮೂಲಗಳ ಪ್ರಕಾರ ವಿದ್ಯಾಸಾಗರ್​ ಅವರು ಕಳೆದ ಕೆಲವು ವರ್ಷಗಳಿಂದ ಶ್ವಾಸಕೋಸ ಸಮಸ್ಯೆಯಿಂದ ಬಳಲುತ್ತಿದ್ದರು. ಪಾರಿವಾಳದ ಹಿಕ್ಕೆಗಳಲ್ಲಿರುವ ಸೋಂಕಿತ ಗಾಳಿಯನ್ನು ಉಸಿರಾಡುವ ಮೂಲಕ ಉಂಟಾಗುವ ಅಲರ್ಜಿಯಾಗಿದೆ. ಈ ವರ್ಷದ ಜನವರಿಯಲ್ಲಿ ಮೀನಾ ಅವರ ಇಡೀ ಕುಟುಂಬ ಕೋವಿಡ್​ 19 ಸೋಂಕಿಗೆ ಒಳಗಾದಾಗ ವಿದ್ಯಾಸಾಗರ್​ ಅವರಿಗೆ ಶ್ವಾಸಕೋಸದ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ.

    ವಿದ್ಯಾಸಾಗರ್ ಅವರು ಕರೊನಾ ಸ್ಥಿತಿಯಿಂದ ಚೇತರಿಸಿಕೊಂಡಿದ್ದರೂ, ನಂತರ ಶ್ವಾಸಕೋಸದ ಸಮಸ್ಯೆ ಇನ್ನಷ್ಟು ಹದಗೆಟ್ಟಿತು ಎಂದು ಹೇಳಲಾಗುತ್ತದೆ. ಕೆಲವು ವಾರಗಳ ಹಿಂದೆ ವೈದ್ಯರು, ವಿದ್ಯಾಸಾಗರ್ ಅವರ ಶ್ವಾಸಕೋಶವನ್ನು ಕಸಿ ಮಾಡಲು ನಿರ್ಧರಿಸಿದ್ದರು. ಆದರೆ, ದಾನಿಯನ್ನು ಪಡೆಯುವಲ್ಲಿ ತೊಂದರೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಏಕೆಂದರೆ ಮಿದುಳು ಸತ್ತ ರೋಗಿಗಳಿಂದ ಮಾತ್ರ ಶ್ವಾಸಕೋಸ ಕಸಿ ಬೇಕಾದನ್ನು ಪಡೆಯಲು ಸಾಧ್ಯ. ಆದರೆ, ಅದಕ್ಕೆ ಕಾಯುತ್ತಿರುವವರ ಪಟ್ಟಿಯೂ ಕೂಡ ದೊಡ್ಡದಾಗಿದೆ.

    ಖ್ಯಾತ ನಟಿ ಮೀನಾ ಬಾಳಲ್ಲಿ ಬಡಿದ ಬರಸಿಡಿಲು: ಚೆನ್ನೈನಲ್ಲಿ ಕೊನೆಯುಸಿರೆಳೆದ ಪತಿ ವಿದ್ಯಾಸಾಗರ್​

    ದಕ್ಷಿಣ ಭಾರತದ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಮೀನಾ ಮತ್ತು ಅವರ ಮಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದ್ದಾರೆ. ಅಂತಿಮ ವಿಧಿವಿಧಾನಗಳು ಬುಧವಾರ (ಜೂನ್ 29) ನಡೆಯಲಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

    ಜಾಕ್​ಲೀನ್​ಗೆ ಇಡಿ ಇಕ್ಕಟ್ಟು!; ‘ವಿಕ್ರಾಂತ್ ರೋಣ’ ಪ್ರಚಾರಕ್ಕೆ ಎಫೆಕ್ಟ್?

    ಶುಗರ್ ಬಗ್ಗೆ ಭಯ ಬೇಡ; ಹಿಂದಿಗೆ ‘ಶುಗರ್​ಲೆಸ್’ ರಿಮೇಕ್ ಹಕ್ಕುಗಳ ಮಾರಾಟ

    ಜುಲೈ 1ರಿಂದ ಹೊಸ ವೇತನ ಸಂಹಿತೆ ಜಾರಿ?; ಪ್ರಮುಖ ಐದು ಬದಲಾವಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts