ಈ ನಟಿಗೆ ಟ್ರೈನ್​ ಅಂದ್ರೆ ಭಯವಂತೆ! ಬಾತ್​ರೂಮ್​ ಬಳಿ ಎದುರಿಸಿದ ಅಶ್ಲೀಲ ಘಟನೆ ಬಿಚ್ಟಿಟ್ಟ ನಟಿ

Ranjitha
Published on

ಹೈದರಾಬಾದ್​: ಹಿರಿಯ ನಟಿ ರಂಜಿತಾ, ತೆಲುಗು ವೀಕ್ಷಕರಿಗೆ ಚೆನ್ನಾಗಿ ಪರಿಚಯ. ಅನೇಕ ಸಿನಿಮಾಗಳಲ್ಲಿ ನಟಿಸಿರುವ ರಂಜಿತಾ ಘಟಾನುಘಟಿ ಕಲಾವಿದರಿಂದಲೇ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಅಮ್ಮ, ಆಂಟಿ ಮತ್ತು ಅಕ್ಕ ಸೇರಿದಂತೆ ಮುಂತಾದ ಪಾತ್ರಗಳಲ್ಲಿ ನಟಿಸಿರುವ ಇವರು ಇತ್ತೀಚೆಗೆ "ಫನ್​ ವಿತ್​ ಅಲಿ" ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಯ ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಜೀವನದಲ್ಲಿ ಎದುರಿಸಿದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ರಂಜಿತಾ ಅವರ ಮೂಲತಾಣ ಕಾಕಿನಾಡ. ಶೂಟಿಂಗ್​ಗೆಂದು ಚೆನ್ನೈಗೆ ಹೋದಾಗಲೆಲ್ಲ ತುಂಬಾ ಎಂಜಾಯ್​ ಮಾಡುತ್ತಿದ್ದರಂತೆ, ಶೂಟಿಂಗ್​ ಸೆಟ್​ ಸಿನಿಮಾ ರೀತಿಯಲ್ಲೇ ಇರುತ್ತಿತ್ತು ಎಂದಿದ್ದಾರೆ. ಎನ್​ಟಿಆರ್​, ಅಕ್ಕಿನೇನಿ ಕುಟುಂಬ ಮತ್ತು ನಾಗೇಶ್ವರ ರಾವ್​ ಸೇರಿದಂತೆ ಮುಂತಾದ ಘಟಾನುಘಟಿ ಕಲಾವಿದರ ಜತೆ ರಂಜಿತಾ ತೆರೆ ಹಂಚಿಕೊಂಡಿದ್ದಾರೆ. ಪ್ರಸ್ತುತ ಇರುವ ಪ್ರಮುಖ ಕಲಾವಿದರ ಚಿತ್ರದಲ್ಲಿ ರಂಜಿತಾ ನಟಿಸಿದ್ದಾರೆ.

ರಂಜಿತಾ ಅವರಿಗೆ ಟ್ರೈನ್​ ಅಂದರೆ ಭಯವಂತೆ. ಅದಕ್ಕೆ ಕಾರಣವಾದ ಘಟನೆಯೊಂದನ್ನು ಅವರು ಮೆಲಕು ಹಾಕಿದ್ದಾರೆ. ಒಮ್ಮೆ ಮದ್ರಾಸ್​ನಿಂದ ಹೈದರಾಬಾದ್​ಗೆ ಫಸ್ಟ್​ ಕ್ಲಾಸ್​ ಬೋಗಿಯಲ್ಲಿ ರಂಜಿತಾ ಮರಳುತ್ತಿದ್ದರಂತೆ. ಈ ವೇಳೆ ವಾಶ್​ರೂಮ್​ಗೆಂದು ತೆರಳಿದ್ದಾರೆ. ಇದೇ ವೇಳೆ ವಾಶ್​ರೂಮ್​ ಬಳಿ ನಿಂತಿದ್ದ ಗುಂಪೊಂದು ನನ್ನನ್ನು ಎಳೆದುಕೊಂಡು ತಬ್ಬಿಕೊಂಡಿತು. ಕೆಲವರು ಮುತ್ತು ನೀಡಲು ಪ್ರಯತ್ನಿಸಿದರು. ಎಲ್ಲೆಲ್ಲೋ ಮುಟ್ಟಿದರು. ಹೇಗೋ ಅವರಿಂದ ಬಿಡಿಸಿಕೊಂಡು ಬಂದು ನನ್ನ ಜತೆಯಲ್ಲಿದ್ದವರಿಗೆ ಹೇಳಿದೆ. ಅಷ್ಟರಲ್ಲಿ ಆ ಕಿರಾತಕರು ಪರಾರಿಯಾದರು ಎಂದು ತಿಳಿಸಿದ್ದಾರೆ.

ಅಂದಿನಿಂದ ನಾನು ಟ್ರೈನ್​ ಭಯದಿಂದ ಬಳಲುತ್ತಿದ್ದೇನೆ. ಏಕಾಂಗಿಯಾಗಿ ರೈಲು ಪ್ರಯಾಣ ಮಾಡಲು ಎದುರುತ್ತೇನೆ. ಒಂದು ವೇಳೆ ಪ್ರಯಾಣ ಮಾಡುವ ಸನ್ನಿವೇಶ ಬಂದರು ಹೆಚ್ಚಿನ ಜನರು ಇರುವ ಮಧ್ಯೆ ಕುಳಿತು ಪ್ರಯಾಣಿಸುತ್ತೇನೆ. ಅಲ್ಲದೆ, ವಾಶ್​ರೂಮ್​ ಕಂಡರೆ ನನಗೆ ಭಯವಾಗುತ್ತದೆ ಎಂದು ರಂಜಿತಾ ಭಯಾನಕ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net