

ಬೆಂಗಳೂರು: 2003ರಲ್ಲಿ ತೆರೆಕಂಡ ಅಭಿ ಸಿನಿಮಾದಲ್ಲಿ ದಿವಂಗತ ನಟ ಪುನೀತ್ ಎದುರು ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ದಿವ್ಯ ಸ್ಪಂದನಾ ಅಲಿಯಾಸ್ ರಮ್ಯಾ, ಕನ್ನಡ ಮಾತ್ರವಲ್ಲದೇ ಕೆಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ನಂತರ ಕಾಂಗ್ರೆಸ್‌ನಿಂದ ರಾಜಕೀಯಕ್ಕೆ ಪ್ರವೇಶಿಸಿ ಸಂಸದೆಯೂ ಆದರು. ಆದರೆ ರಾಜಕೀಯದಲ್ಲಿ ವಿಫಲರಾಗಿ ಸಂಸದೆ ಪಟ್ಟವೂ ಹೋಗಿ ಕೊನೆಗೆ ಸಿನಿಮಾ, ರಾಜಕೀಯ ಎಲ್ಲದ್ದರಿಂದಲೂ ದೂರ ಆಗಿರುವ ರಮ್ಯಾ, ಇದೀಗ ನಿರ್ಮಾಪಕಿಯಾಗಿ ಮತ್ತೆ ಸಿನಿಮಾಗೆ ಮರು ಪ್ರವೇಶ ನೀಡಿದ್ದಾರೆ.
ರಮ್ಯಾ ಅವರು ಗಣೇಶ ಹಬ್ಬದ ದಿನ ತಾವು ಹೇಳಿದಂತೆ ಬೆಳಗ್ಗೆ 11.15ಕ್ಕೆ ಟ್ವೀಟ್ ಮಾಡಿ ಅಭಿಮಾನಿಗಳಿಗೆ ನೀಡಿದ ಸಿಹಿ ಸುದ್ದಿ ಈ ಕಳೆಕಂಡಂತಿದೆ...
ನಿನ್ನೆ ಟ್ವೀಟ್ ಮಾಡಿದ್ದ ಫೋಟೋ ಒಂದನ್ನು ಶೇರ್ ಮಾಡಿ, ನಾಳೆ ಬೆಳಗ್ಗೆ 11:15ರ ಸುಮಾರಿಗೆ ನಾನು ಕೆಲವು ಸಿಹಿ ಸುದ್ದಿಯನ್ನು ಶೇರ್ ಮಾಡುತ್ತೇನೆ ಎಂದು ಹೇಳಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ಭಾರಿ ಚರ್ಚೆಯಾಗಿತ್ತು. ರಮ್ಯಾ ಅವರು ಕೊಡುವ ಸಿಹಿ ಸುದ್ದಿ ಏನಿರಬಹುದು ಎಂಬ ಊಹೆ ಜೋರಾಗಿ ನಡೆದಿತ್ತು.
ರಮ್ಯಾ ಅವರು ಮತ್ತೆ ಸಿನಿಮಾ ಕ್ಷೇತ್ರಕ್ಕೆ ಬರಬಹುದು ಮತ್ತು ಮತ್ತೆ ಬಣ್ಣ ಹಚ್ಚಬಹುದು ಎಂದು ಅಂದಾಜಿಸಿದ್ದರು. ನಾಳೆ ಹೊಸ ಸಿನಿಮಾ ಘೋಷಣೆ ಮಾಡಬಹುದು ಅಂದುಕೊಂಡಿದ್ದರು. ಆದರೆ, ಟ್ವಿಸ್ಟ್ ಮೂಲಕ ರಮ್ಯಾ ಟ್ವಿಸ್ಟ್ ಕೊಟ್ಟಿದ್ದಾರೆ. ಅವರು ಮತ್ತೆ ಸಿನಿಮಾಗೆ ಮರಳುತ್ತಿದ್ದಾರೆ. ಆದರೆ, ಈ ಬಾರಿ ನಾಯಕಿಯಾಗಿಯಲ್ಲ, ಬದಲಾಗಿ ನಿರ್ಮಾಪಕಿಯಾಗಿ. ಮುಂದಿನ ದಿನಗಳಲ್ಲಿ ತಮ್ಮ ನಿರ್ಮಾಣದ ಸಿನಿಮಾದಲ್ಲಿ ನಟಿಸಿದರು ಸಂಶಯವಿಲ್ಲ. ಒಟ್ಟಿನಲ್ಲಿ ರಮ್ಯಾ ನೀಡಿರುವ ಸಿಹಿ ಸುದ್ದಿ ಅಭಿಮಾನಿಗಳಿ ಖಷಿ ತರಿಸಿದೆ.