ಹಾಟ್​​​ ಡ್ರೆಸ್​ ನೋಡಿ ತಮ್ಮ ಮೇಲೆ ಮುಗಿಬಿದ್ದ ವಿರೋಧಿಗಳಿಗೆ ಸಮಂತಾ ಕೊಟ್ಟ ಮಾತಿನ ಪಂಚ್​ ಹೀಗಿದೆ...

Samantha
Published on

ಹೈದರಾಬಾದ್​: ಟಾಲಿವುಡ್​ ಸ್ಟಾರ್​ ನಾಗಚೈತನ್ಯ ಜತೆ ಡಿವೋರ್ಸ್​ ಪಡೆದಾಗಿನಿಂದ ನಟಿ ಸಮಂತಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅವರ ಪ್ರತಿಯೊಂದು ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಸ್ಯಾಮ್​ ಏನೇ ಮಾಡಿದರೂ ಸುದ್ದಿಯಾಗುತ್ತಿದೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಸ್ಯಾಮ್​ ಭಾಗವಹಿಸಿದ್ದರು. ಈ ವೇಳೆ ಅವರು ಧರಿಸಿದ್ದ ಹಾಟ್​ ಡ್ರೆಸ್​ ಎಲ್ಲರ ಹುಬ್ಬೇರಿಸುವುದರ ಜತೆಗೆ ಕೆಲವೇ ಕ್ಷಣಗಳಲ್ಲಿ ಫೋಟೋ ವೈರಲ್​ ಆಗಿ, ಸಿಕ್ಕಾಪಟ್ಟೆ ಟ್ರೋಲ್​ ಕೂಡ ಆಗಿದೆ.

ಸ್ಯಾಮ್​ ಧರಿಸಿದ್ದ ಬಿಕಿನಿ ಕಟ್​ ಗೌನ್​ ಬಹುತೇಕರಿಗೆ ಕೊಂಚವೂ ಇಷ್ಟ ಆಗಲಿಲ್ಲ. ಹೀಗಾಗಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ಸಮಂತಾ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಅಭಿಪ್ರಾಯವನ್ನು ಶೇರ್​ ಮಾಡಿಕೊಳ್ಳುವ ಮೂಲಕ ಟ್ರೋಲಿಗರಿಗೆ ಸಖತ್​ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಮಹಿಳೆಯರು ಧರಿಸುವ ಉಡುಗೆ, ಅವರ ಜನಾಂಗ, ಶಿಕ್ಷಣ, ಸಾಮಾಜಿಕ ನಿಲುವು, ನೋಟ, ಚರ್ಮದ ಬಣ್ಣ ಸೇರಿದಂತೆ ಮುಂತಾದವುಗಳ ಆಧಾರದ ಮೇಲೆ ಮಹಿಳೆಯರ ವ್ಯಕ್ತಿತ್ವವನ್ನು ಅಳೆಯಬಾರದು. ಧರಿಸುವ ಬಟ್ಟೆಗಳನ್ನು ಆಧರಿಸಿ ಒಬ್ಬ ವ್ಯಕ್ತಿಯ ಬಗ್ಗೆ ತಕ್ಷಣ ತೀರ್ಪುಗಳನ್ನು ನೀಡುವುದು ಒಬ್ಬರು ಮಾಡಬಹುದಾದ ಸುಲಭವಾದ ಕೆಲಸವಾಗಿದೆ. ಇಂತಹ ಕೆಲಸಗಳನ್ನು ಮಾಡುವುದನ್ನು ಬಿಟ್ಟು ನಿಮ್ಮನ್ನು ನೀವು ಇನ್ನಷ್ಟು ಉತ್ತಮಗೊಳಿಸಲು ಹೆಚ್ಚಿನ ಗಮನಹರಿಸಿ. ನಮ್ಮ ಕರಾರುಗಳನ್ನು ಇನ್ನೊಬ್ಬರ ಮೇಲೆ ಪ್ರತಿಬಿಂಬಿಸುವುದು ಯಾರಿಗೂ ಒಳ್ಳೆಯದಲ್ಲ. ನಾವು ಒಬ್ಬ ವ್ಯಕ್ತಿಯನ್ನು ಅಳೆಯುವ ಮತ್ತು ಅರ್ಥಮಾಡಿಕೊಳ್ಳುವ ವಿಧಾನವನ್ನು ನಿಧಾನವಾಗಿ ಮತ್ತೆ ಬರೆಯೋಣ ಎಂದು ಸಮಂತಾ ಹೇಳಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಗುಣಶೇಖರ್​ ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಶಾಕುಂತಲಂ ಚಿತ್ರದಲ್ಲಿ ನಟಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇದರೊಂದಿಗೆ ತಮಿಳು ಮತ್ತು ತೆಲುಗು ದ್ವಿಭಾಷಾ ಸಿನಿಮಾ ಯಶೋಧಾದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಬಾಲಿವುಡ್​ಗೂ ಪದಾರ್ಪಣೆ ಮಾಡಿರುವ ಸಮಂತಾ ಫಿಲಿಪ್​ ಜಾನ್​​ ನಿರ್ದೇಶನದ ಅರೆಂಜ್​ಮೆಂಟ್ಸ್​ ಆಫ್​ ಲವ್​ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net