More

    ಸಮಂತಾ ಯಾಕೆ ಈ ರೀತಿ ಟ್ವೀಟ್​ ಮಾಡಿದ್ರು? ನೆಟ್ಟಿಗರ ತಲೆಗೆ ಹುಳ ಬಿಟ್ಟ ಸೌತ್​ ಬ್ಯೂಟಿಯ ಈ ಒಂದು ಟ್ವೀಟ್!​

    ಹೈದರಾಬಾದ್​: ನಟ ನಾಗಚೈತನ್ಯ ಜತೆ ಡಿವೋರ್ಸ್​ ಪಡೆದುಕೊಂಡಾಗಿನಿಂದ ಸೌತ್​ ಬ್ಯೂಟಿ ಸಮಂತಾ ಭಾರೀ ಸುದ್ದಿಯಲ್ಲಿದ್ದಾರೆ. ಅವರ ಪ್ರತಿಯೊಂದು ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಸ್ಯಾಮ್​ ಏನೇ ಮಾಡಿದರೂ ಅದು ತಕ್ಷವೇ ಸುದ್ದಿಯಾಗುತ್ತಿದೆ.

    ಡಿವೋರ್ಸ್​ ಬಳಿಕ ಸಂಪೂರ್ಣ ಸಿನಿಮಾ ಕಡೆ ಸಮಂತಾ ದೃಷ್ಟಿ ನೆಟ್ಟಿದ್ದು, ಸಿಕ್ಕಾಪಟ್ಟೆ ಬೋಲ್ಡ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರಣದಿಂದಲೇ ಸಾಕಷ್ಟು ಬಾರಿ ಟ್ರೋಲ್​ ಆಗಿದ್ದಾರೆ. ಆದರೆ, ಇದೀಗ ಸಮಂತಾ ಮಾಡಿರುವ ಟ್ವೀಟ್​ ಒಂದು ನೆಟ್ಟಿಗರ ಜತೆಗೆ ಸಿನಿ ಮಂದಿಯ ತಲೆಗೂ ಹುಳ ಬಿಟ್ಟಿದೆ. ಸಮಂತಾ ಸದ್ಯ ಟ್ರೋಲ್​ ಸಹ ಆಗಿಲ್ಲ ಮತ್ತು ಯಾವುದೇ ವಿವಾದವೂ ಆಗಿಲ್ಲ. ಆದರೂ, ಸಮಂತಾ ಈ ರೀತಿ ಟ್ವೀಟ್​ ಯಾಕೆ ಮಾಡಿದ್ರೂ ಅಂತಾ ನೆಟ್ಟಿಗರು ಗೊಂದಲಕ್ಕೀಡಾಗಿದ್ದಾರೆ. ‘

    ನನ್ನ ಮೌನವೇ ನನ್ನ ಅಜ್ಞಾನ ಎಂದು ಭಾವಿಸಬೇಡಿ. ನಾನು ಮೌನವಾಗಿದ್ದರೆ ಎಲ್ಲವನ್ನು ಸ್ವೀಕರಿಸುತ್ತೇನೆಂಬ ಅರ್ಥವಲ್ಲ ಮತ್ತು ನನ್ನ ದಯಯೇ ನನ್ನ ದುರ್ಬಲವಲ್ಲ. ಕರುಣೆಗೆ ಒಂದು ಕೊನೆ ಇರುತ್ತದೆ. ಇದನಷ್ಟೇ ಹೇಳಲು ಬಯಸುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.

    ಇದೀಗ ಸಮಂತಾ ಅವರ ಟ್ವೀಟ್​ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಯಾರನ್ನು ಉದ್ದೇಶಿಸಿ ಈ ಟ್ವೀಟ್​ ಮಾಡಿದ್ದಾರೆ ಎಂದು ಚರ್ಚಿಸುತ್ತಿದ್ದಾರೆ. ಯಾರಾದರೂ ಸಮಂತಾರನ್ನು ಮತ್ತೆ ಟ್ರೋಲ್​ ಮಾಡಿದ್ದಾರಾ? ಯಾರಾದರೂ ಸಮಂತಾಗೆ ಏನಾದರೂ ಹೇಳಿದರಾ? ಎಂದು ಸಮಂತಾ ಟ್ವೀಟ್​ ಅನ್ನು ಶೇರ್​ ಮಾಡುವ ಮೂಲಕ ಭಾರೀ ಚರ್ಚೆಯನ್ನು ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ಕ್ರೆಡಿಟ್​-ಡೆಬಿಟ್ ಕಾರ್ಡ್ ಕ್ಲೋಸ್ ಇನ್ನು ಸರಳ; ಜುಲೈ 1ರಿಂದ ಹೊಸ ನಿಯಮ

    ಆರ್‌ಸಿಬಿಗೆ ಇಂದು ಸನ್‌ರೈಸರ್ಸ್‌ ಸವಾಲು; ಯಾರ ಗೆಲುವಿನ ಓಟಕ್ಕೆ ಬೀಳುತ್ತೇ ಬ್ರೇಕ್?

    ಶಂಕಿತ ಮಾಸ್ಟರ್ ಮೈಂಡ್ ವಸೀಂ, ತುಫೆಲ್ ಪೊಲೀಸ್ ಕಸ್ಟಡಿಗೆ: ಹಳೇಹುಬ್ಬಳ್ಳಿ ದಾಂಧಲೆ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts