ನಾಗಚೈತನ್ಯ ಜತೆ ಡಿವೋರ್ಸ್ ಆದ್ರೆ ಸಮಂತಾಗೆ ಸಿಗಲಿರುವ ಜೀವನಾಂಶದ ಮೊತ್ತ ಇಷ್ಟಂತೆ..!

Nagachaitanya
Published on

ಹೈದರಾಬಾದ್​: ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ಡಿವೋರ್ಸ್​ ಹಂತಕ್ಕೆ ತಲುಪಿದೆ ಎಂಬ ವಿಚಾರ ಬೆಳಕಿಗೆ ಬಂದಾಗಿನಿಂದ ಸಮಂತಾ ಟಾಕ್​ ಆಫ್​ ದಿ ಟೌನ್​ ಆಗಿದ್ದಾರೆ. ಅಕ್ಕಿನೇನಿ ಕುಟುಂಬದಿಂದ ಸಮಂತಾ ಅಂತರ ಕಾಯ್ದುಕೊಂಡಿದ್ದು, ಇಬ್ಬರ ನಡುವೆ ಏನೂ ಸರಿಯಿಲ್ಲ ಎಂಬುದು ಬಹುತೇಕ ಖಚಿವಾದಂತಿದೆ. ಆದರೆ, ಇದುವರೆಗೂ ಯಾರೋಬ್ಬರು ಈ ಬಗ್ಗೆ ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿಲ್ಲ.

ಆದರೆ, ಸಮಂತಾ ನಡೆ ಮಾತ್ರ ಅದಕ್ಕೆ ಪುಷ್ಠಿ ನೀಡುವಂತಿದೆ. ಇತ್ತೀಚೆಗೆ ನಾಗಾರ್ಜುನ ಬರ್ತಡೇ ಪಾರ್ಟಿಯಲ್ಲಿ ಭಾಗವಹಿಸದೇ ಕೇವಲ ಶುಭಕೋರಿದ್ದರು. ಅಲ್ಲದೆ, ಸಂದರ್ಭ ಬಂದಾಗ ಎಲ್ಲವನ್ನು ಹೇಳುತ್ತೇನೆಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಸಂದರ್ಶನವೊಂದರಲ್ಲಿ ಸಮಂತಾ ಹೇಳಿದ್ದರು. ಮದುವೆಯ ಬಳಿಕ ಯಾವುದೇ ಪ್ರವಾಸ ಕೈಗೊಂಡರು ಸಮಂತಾ ಮತ್ತು ನಾಗಚೈತನ್ಯ ಒಟ್ಟಿಗೆ ಹೋಗುತ್ತಿದ್ದರು. ಆದರೆ, ಎಲ್ಲಿಗೆ ಹೋದರು ಸಮಂತಾ ಒಂಟಿಯಾಗೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಬ್ಬರ ನಡುವೆ ಯಾವುದು ಸರಿಯಿಲ್ಲ ಎಂಬ ಚರ್ಚೆಗೆ ಪುಷ್ಠಿ ನೀಡಿದೆ.

ಈಗಾಗಲೇ ಸಮಂತಾ ಮತ್ತು ನಾಗಚೈತನ್ಯ ಕೌಟುಂಬಿಕ ನ್ಯಾಯಾಲಯ ಮೆಟ್ಟಿಲೇರಿದ್ದು, ಆಪ್ತ ಸಮಾಲೋಚನೆ ನಡೆದಿದೆ. ಆದರೂ ಇಬ್ಬರ ಮನಸ್ಸು ಬದಲಾಗಿಲ್ಲ ಮತ್ತು ತಮ್ಮ ತಮ್ಮ ದಾರಿಯನ್ನು ನೋಡಿಕೊಳ್ಳಲು ಬಯಸಿರುವುದಾಗಿ ತಿಳಿದುಬಂದಿದೆ. ಡಿವೋರ್ಸ್​ ಪಡೆಯಲೇಬೇಕೆಂದು ಇಬ್ಬರು ಈಗಾಗಲೇ ದೃಢ ನಿರ್ಧಾರ ಮಾಡಿದ್ದು, ಇನ್ನು ಎರಡ್ಮೂರು ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ತಾರಾದಂಪತಿ ಬೇರೆ-ಬೇರೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಆಪ್ತ ಮೂಲಗಳಿಗೆ ಮಾಹಿತಿ ಬಂದಿದೆ.

50 ಕೋಟಿ ರೂ. ಜೀವನಾಂಶ
ಒಂದು ವೇಳೆ ಸಮಂತಾ-ನಾಗಚೈತನ್ಯ ಡಿವೋರ್ಸ್​ ಪಡೆದರೆ, ಸಮಂತಾ ಅವರಿಗೆ ಅಕ್ಕಿನೇನಿ ಕುಟುಂಬದಿಂದ 50 ಕೋಟಿ ರೂಪಾಯಿ ಜೀವನಾಂಶ ದೊರೆಯಲಿದೆ ಎಂಬ ಮಾಹಿತಿ ಇದೆ. ತಾರಾ ದಂಪತಿ ಡಿವೋರ್ಸ್​ ಆಗುವುದು ಖಚಿತ ಎಂದು ಯೂಟ್ಯೂಬರ್​ ಒಬ್ಬ ವಿಡಿಯೋ ಬಿಡುಗಡೆ ಮಾಡಿದ್ದು, ಆ ವಿಡಿಯೋ ಜಾಲತಾಣದಲ್ಲಿ ವೈರಲ್​​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net