More

    ಧನುಷ್ ಜತೆ ಮಗಳ ಡಿವೋರ್ಸ್​: ಆಪ್ತರ ಬಳಿ ತಲೈವಾ ರಜನಿಕಾಂತ್ ಹೇಳಿಕೊಂಡ ನೋವಿನ ಮಾತಿದು​!

    ಚೆನ್ನೈ: ಕಾಲಿವುಡ್​ನ ಸ್ಟಾರ್​ ದಂಪತಿಗಳೆಂದೇ ಖ್ಯಾತರಾಗಿರುವ ನಟ ಧನುಷ್​ ಮತ್ತು ಸೂಪರ್​ಸ್ಟಾರ್​ ರಜನಿಕಾಂತ್​ ಹಿರಿಯ ಪುತ್ರಿ ಐಶ್ವರ್ಯಾ 18 ವರ್ಷಗಳ ದಾಂಪತ್ಯ ಜೀವನಕ್ಕೆ ಜ.17ರಂದು ಏಕಾಏಕಿ ಗುಡ್​ ಬೈ ಹೇಳುವ ಮೂಲಕ ಚಿತ್ರರಂಗಕ್ಕೆ ಮಾತ್ರವಲ್ಲದೇ ಅಸಂಖ್ಯಾತ ಅಭಿಮಾನಿಗಳಿಗೂ ಶಾಕ್​ ನೀಡಿರುವುದು ಎಲ್ಲರಿಗೂಮ ತಿಳಿದಿರುವ ಸಂಗತಿ.

    ಅನೋನ್ಯವಾಗಿದ್ದ ಸ್ಟಾರ್​ ಜೋಡಿಯ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣ ಏನಿರಬಹುದೆಂಬ ಪ್ರಶ್ನೆಯೇ ಈಗ ಎಲ್ಲೆಡೆ ಕೇಳಿಬರುತ್ತಿದೆ. ಇದರ ನಡುವೆ ಧನುಷ್​ ತಂದೆ ಕಸ್ತೂರಿ ರಾಜ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಗನ ಡಿವೋರ್ಸ್ ವಿಚಾರದ ಬಗ್ಗೆ ಮಾತನಾಡಿದ್ದರು. ಐಶ್ವರ್ಯಾ ಮತ್ತು ಧನುಷ್​ ನಡುವಿನ ಭಿನ್ನಾಭಿಪ್ರಾಯದಿಂದ ಪ್ರತ್ಯೇಕವಾಗುವ ಮಾತುಗಳನ್ನು ಆಡಿದ್ದಾರೆ. ಆದರೆ, ಇದು ಸಾಮಾನ್ಯವಾಗಿ ಎಲ್ಲ ಕುಟುಂಬಗಳಲ್ಲಿಯು ನಡೆಯುವ ಪತಿ-ಪತ್ನಿ ಜಗಳವಷ್ಟೇ. ಮಗನಿಗೆ ಕೆಲವು ಸಲಹೆಗಳನ್ನು ನೀಡಿದ್ದೇನೆ ಎಂದು ಹೇಳಿದ್ದರು.

    ಆದರೆ, ಐಶ್ವರ್ಯಾ ತಂದೆ ಹಾಗೂ ಭಾರತೀಯ ಚಿತ್ರರಂಗದ ಸೂಪರ್​ ಸ್ಟಾರ್​ ರಜನಿಕಾಂತ್​ ಪ್ರತಿಕ್ರಿಯೆ ಮೇಲೆ ಎಲ್ಲರು ಗಮನಹರಿಸಿದ್ದರು. ಮಗಳ ಡಿವೋರ್ಸ್​ ಬಗ್ಗೆ ರಜಿನಿ ಏನು ಹೇಳುತ್ತಾರೋ ಎಂಬ ಕುತೂಹಲವಿತ್ತು. ಇದೀಗ ಅವರ ಆಪ್ತ ಮೂಲಗಳ ಪ್ರಕಾರ ಮಗಳ ಡಿವೋರ್ಸ್​ ರಜಿನಿ ಅವರಿಗೆ ಕೆಟ್ಟ ಪ್ರಭಾವ ಬೀರಿದೆಯಂತೆ.

    ರಜನಿ ಅವರು ತಮ್ಮ ಮಗಳ ಡಿವೋರ್ಸ್​ನಿಂದ ತುಂಬಾ ಬೇಸರವಾಗಿದ್ದಾರೆ. ಈ ಪ್ರತ್ಯೇಕತೆಯನ್ನು ತಾತ್ಕಾಲಿಕವಾಗಿ ಇಡುವಂತೆ ಮಗಳನ್ನು ಒತ್ತಾಯಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಐಶ್ವರ್ಯಾ ಮತ್ತು ಧನುಷ್​ ನಡುವಿನ ಜಗಳ ಸಾಮಾನ್ಯವಲ್ಲ. ಇಬ್ಬರ ನಡುವೆ ಭಿನ್ನಾಭಿಪ್ರಾಯವಿತ್ತು. ಆದರೆ, ರಜನಿಕಾಂತ್ ಯಾವಾಗಲೂ ಅವರನ್ನು ಒಟ್ಟಿಗೆ ಇರುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಿದ್ದರು ಎಂದು ತಿಳಿಸಿದ್ದಾರೆ.

    ಜ. 17 ರಂದು ಟ್ವೀಟ್​ ಮೂಲಕ ಡಿವೋರ್ಸ್​ ಖಚಿತಪಡಿಸಿರುವ ಧನುಷ್​, ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ ಈ 18 ವರ್ಷಗಳು ಒಟ್ಟಿಗೆ ಕಳೆದೆವು. ಈ ಸುದೀರ್ಘ ಪ್ರಯಾಣವು ಬೆಳವಣಿಗೆ, ತಿಳುವಳಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಆದರೆ, ಇಂದು ನಾವು ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ ಎಂದು ಧನುಷ್​ ಟ್ವೀಟ್​ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಜನರಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ನಮ್ಮ ನಿರ್ಧಾರವನ್ನು ಗೌರವಿಸಿ, ನಮಗೆ ಬೇಕಾಗಿರುವ ಖಾಸಗಿತನವನ್ನು ನೀಡಿ ಎಂದಿದ್ದಾರೆ. ಐಶ್ವರ್ಯಾ ಕೂಡ ಹೇಳಿಕೆಯನ್ನು ನೀಡಿದ್ದು, ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ಪ್ರೀತಿ ಮಾತ್ರ ಅಗತ್ಯ ಎಂದು ಜನರಲ್ಲಿ ಕೋರಿದ್ದಾರೆ.

    ಐಶ್ವರ್ಯಾ ಮತ್ತು ಧನುಷ್​ 2004ರ ನವೆಂಬರ್​ 18ರಂದು ಮದುವೆಯಾದರು. ವಿವಾಹಕ್ಕೂ ಮುನ್ನ ದಂಪತಿ 6 ತಿಂಗಳು ಡೇಟಿಂಗ್​ ನಡೆಸಿದ್ದರು. ದಂಪತಿಗಳಿಗೆ ಯಾತ್ರ ಮತ್ತು ಲಿಂಗ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ. (ಏಜೆನ್ಸೀಸ್​)

    ನಟ ಧನುಷ್​ ತಂದೆಯ ಹೇಳಿಕೆಯಿಂದ ಸ್ಟಾರ್​ ದಂಪತಿಯ ಡಿವೋರ್ಸ್​ ಪ್ರಕರಣಕ್ಕೆ ಸ್ಫೋಟಕ ತಿರುವು!

    ಮಿಸ್​ ಕಾಲ್​ನಲ್ಲಿ ಶುರುವಾದ ಪ್ರೀತಿ: ಲವರ್ ಕುರುಡನೆಂದು ತಿಳಿದಾಗ ಯುವತಿ ಮಾಡಿದ್ದು ಕೇಳಿದ್ರೆ ಅಚ್ಚರಿ ಪಡ್ತೀರಾ!

    ಮದುವೆ ನಡುವೆ ವರನ ಮುಂದೆಯೇ ನಿದ್ರೆಗೆ ಜಾರಿದ ವಧು: ಮುಂದೇನಾಯ್ತು? ಇಲ್ಲಿದೆ ವೈರಲ್​ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts