

ನವದೆಹಲಿ: ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಕೊನೆಯವರೆಗೂ ಉಳಿಯುವ ಸುಂದರ ಕ್ಷಣಗಳು. ಹೀಗಾಗಿ ಮದುವೆ ಸಂದರ್ಭದಲ್ಲಿ ಸಾಧ್ಯವಾದಷ್ಟು ಆ ಕ್ಷಣವನ್ನು ವರ್ಣಮಯವಾಗಿಸಲು ವಧು-ವರರು ಬಯಸುತ್ತಾರೆ. ಹೀಗಾಗಿ ಪ್ರೀ ವೆಡ್ಡಿಂಗ್ ಫೋಟೋಶೂಟ್, ವಿಡಿಯೋ ರೆಕಾರ್ಡಿಂಗ್, ಅಲಂಕಾರ ಸೇರಿದಂತೆ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ.
ಮದುವೆ ಸಂದರ್ಭದಲ್ಲಿ ಅನೇಕ ಹಾಸ್ಯಮಯ ಘಟನೆಗಳು ಸಹ ಕ್ಯಾಮೆರಾದಲ್ಲಿ ಸರೆಯಾಗುತ್ತವೆ. ಅಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಣ್ಣು ಮಿಟುಕಿಸುವಷ್ಟರಲ್ಲಿ ವೈರಲ್ ಆಗಿಬಿಡುತ್ತವೆ. ಅಂಥದ್ದೇ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ 10 ಸೆಕೆಂಡಿನ ವಿಡಿಯೋದಲ್ಲಿ ಭರ್ಜರಿಯಾಗಿ ಅಲಂಕಾರ ಮಾಡಿಕೊಂಡಿರುವ ವಧು, ವರನ ಪಕ್ಕದಲ್ಲೇ ಚೇರಿನ ಮೇಲೆ ಕುಳಿತು ಗಾಢ ನಿದ್ರೆಗೆ ಜಾರಿರುವ ದೃಶ್ಯವಿದೆ. ಬಿಟ್ಟರೆ ಸಾಕು ಮನೆಗೆ ಹೋಗಿ ಬೆಡ್ ಮೇಲೆ ಆರಾಮಾಗಿ ಮಲಗಿ ಬಿಡುತ್ತೇನೆ ಅನ್ನುವಷ್ಟರ ಮಟ್ಟಿಗೆ ವಧು ನಿದ್ರೆ ಮಾಡುತ್ತಿದ್ದಾರೆ.
ಮದುವೆ ಮೆರವಣಿಗೆ ಮೂಲಕ ಕಲ್ಯಾಣ ಮಂಟಪಕ್ಕೆ ಆಗಮಿಸಿದ ವಧು, ವೇದಿಕೆ ಮೇಲೆ ಹಾಕಲಾಗಿದ್ದ ಚೇರಿನ ಮೇಲೇ ಆರಾಮಾಗಿ ಕುಳಿತು ವಿಶ್ರಾಂತಿ ಪಡೆಯುವಾಗ ನಿದ್ರೆಗೆ ಜಾರಿದ್ದಾರೆ ಎಂದು ತಿಳಿದುಬಂದಿದೆ. ನಂತರ ಮದುವೆ ಆಚರಣೆಯನ್ನು ಪೂರ್ಣಗೊಳಿಸಲು ವಧು ಮತ್ತು ವರರನ್ನು ಕರೆಯಲಾಯಿತು ಮತ್ತು ವರನು ತಕ್ಷಣವೇ ಎದ್ದು ನಿಂತನು ಆದರೆ, ವಧು ಮಾತ್ರ ಗಾಢ ನಿದ್ರೆಯಲ್ಲಿ ಮಲಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಈ ಎಲ್ಲ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದುವರೆಗೂ 60 ಸಾವಿರಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದ್ದಾರೆ. ವಿಡಿಯೋ ಎಲ್ಲಿಯದ್ದು ಎಂದು ತಿಳಿದುಬಂದಿಲ್ಲ. ಅನೇಕರು ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. (ಏಜೆನ್ಸೀಸ್)