More

    ಸ್ಯಾಂಡಲ್​ವುಡ್​ನಲ್ಲಿ ಹೊಸ ಇತಿಹಾಸ ಬರೆದ ಜೇಮ್ಸ್​: ಮೊದಲ ದಿನವೇ ದಾಖಲೆ ಗಳಿಕೆ, KGF​ ರೆಕಾರ್ಡ್​ ಬ್ರೇಕ್​

    ಬೆಂಗಳೂರು: ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅವರ ಕೊನೆಯ ಚಿತ್ರ ‘ಜೇಮ್ಸ್​’ ರಾಜ್ಯಾದ್ಯಂತ ಮಾರ್ಚ್​ 17ರಂದು ಅವರ ಹುಟ್ಟುಹಬ್ಬದಂದೇ ಬಿಡುಗಡೆಯಾಗಿ ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ. ಅಪ್ಪು ಅವರ ಕೊನೆಯ ಚಿತ್ರ ಆಗಿರುವುದರಿಂದ ಅಭಿಮಾನಿಗಳು ‘ಜೇಮ್ಸ್​ ಜಾತ್ರೆ’ ಮಾಡುತ್ತಿದ್ದು, ಚಿತ್ರಮಂದಿರಗಳ ಹೌಸ್​ಫುಲ್​ ಪ್ರದರ್ಶನ ಎರಡನೇ ದಿನಕ್ಕೂ ಮುಂದುವರಿದಿದೆ.

    ಜೇಮ್ಸ್ ಚಿತ್ರದ​ ಭರ್ಜರಿ ಪ್ರದರ್ಶನದ ನಡುವೆ ಅದರ ಮೊದಲ ದಿನದ ಬಾಕ್ಸ್​ ಆಫೀಸ್​ ಕಲೆಕ್ಷನ್ ಎಷ್ಟಿರಬಹುದು ಎಂಬ ಪ್ರಶ್ನೆಗಳು ಕೇಳಿಬರುತ್ತಿದೆ. ಸಿನಿಮಾ ತಂಡದ ಮೂಲಗಳ ಪ್ರಕಾರ ಜೇಮ್ಸ್​ ಸಿನಿಮಾ ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಬರೆದಿದೆ. ಜೇಮ್ಸ್ ಅಬ್ಬರಕ್ಕೆ ದಾಖಲೆಗಳೆಲ್ಲಾ ಧೂಳೀಪಟವಾಗಿದೆ.

    ಮೊದಲ ದಿನವೇ 35 ಕೋಟಿ ರೂಪಾಯಿ ಸಂಗ್ರಹ ಮಾಡುವ ಮೂಲಕ ಸ್ಯಾಂಡಲ್​ವುಡ್​ನಲ್ಲೇ ಜೇಮ್ಸ್​ ಸಿನಿಮಾ‌ ಹೊಸ ಇತಿಹಾಸ ಬರೆದಿದೆ. ಜೇಮ್ಸ್​ ಸಿನಿಮಾ ಕೆಜಿಎಫ್ ದಾಖಲೆಯನ್ನು ಹಿಂದಿಕ್ಕಿದೆ. ಕೆಜಿಎಫ್ ಮೊದಲ ದಿನ‌ 25 ಕೋಟಿ ರೂ. ಗಳಿಸಿತ್ತು. ಇದೀಗ ಆ ದಾಖಲೆಯನ್ನು ಜೇಮ್ಸ್​ ಮುರಿದಿದೆ. ಜೇಮ್ಸ್​ ಗಳಿಕೆ ನೋಡಿದರೆ, ಮೊದಲ ವಾರವೇ 100 ಕೋಟಿ ರೂ. ಕಲೆಕ್ಷನ್ ಮಾಡೋದು ಪಕ್ಕಾ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.

    ಅತೀ‌ ಹೆಚ್ಚು‌ ಸ್ಕ್ರೀನ್​​ಗಳಲ್ಲಿ ಜೇಮ್ಸ್​ ಬಿಡುಗಡೆಯಾಗಿದ್ದು‌ ಒಂದು‌ ದಾಖಲೆಯಾದರೆ, ಹೆಚ್ಚು ಗಳಿಕೆ ಮಾಡಿರುವುದು ಮತ್ತೊಂದು ದಾಖಲೆಯಾಗಿದೆ. ಇನ್ನೊಂದೆಡೆ ಡಿಜಿಟಲ್ ರೈಟ್ಸ್​ನಲ್ಲೂ ಜೇಮ್ಸ್​‌ ಚರಿತ್ರೆ ಬರೆದಿದೆ.

    ಚಿತ್ರವು ರಿಲೀಸ್ ಆದ ಮೊದಲ ದಿನ 25 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಇದು ಹೊಸ ದಾಖಲೆಯಾಗಿದೆ. ‘ಜೇಮ್ಸ್’ ಚಿತ್ರವು ಜಗತ್ತಿನಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ. ಈ ಪೈಕಿ ಕರ್ನಾಟಕದಲ್ಲೇ 500 ಪರದೆಗಳಲ್ಲಿ ಚಿತ್ರ ಬಿಡುಗಡೆಯಾಗಿದೆ.

    ಕೆಲವು ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿಯಿಂದಲೇ ಚಿತ್ರಪ್ರದರ್ಶನ ಪ್ರಾರಂಭವಾಗಿದ್ದು, ಒಟ್ಟಾರೆ ಆರೇಳು ಪ್ರದರ್ಶನಗಳಾಗಿವೆ. ‘ಒಟ್ಟಾರೆ, ಚಿತ್ರದ ಕಲೆಕ್ಷನ್ 22ರಿಂದ 25 ಕೋಟಿ ರೂ.ಗಳವರೆಗೂ ಆಗುತ್ತದೆ’ ಎನ್ನುತ್ತಾರೆ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್. ಇದು ಬರೀ ಕರ್ನಾಟಕದ ಸುದ್ದಿ ಮಾತ್ರ. ಮಿಕ್ಕಂತೆ ಚಿತ್ರವು ಬೇರೆ ರಾಜ್ಯಗಳು ಮತ್ತು ಹೊರದೇಶಗಳಲ್ಲೂ ಬಿಡುಗಡೆಯಾಗಿದೆ. ಕನ್ನಡವಲ್ಲದೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿದೆ. ಮಿಕ್ಕೆಲ್ಲ ಭಾಷೆಗಳಿಂದ 10 ಕೋಟಿ ರೂ.ಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೂ, ಒಟ್ಟಾರೆ ಮೊದಲ ದಿನ 35 ಕೋಟಿ ರೂ. ಕಲೆಕ್ಷನ್ ಆಗುತ್ತದೆ. ಕನ್ನಡ ಚಿತ್ರವೊಂದು ಮೊದಲ ದಿನ ಇಂಥ ದೊಡ್ಡ ಮಟ್ಟದ ಕಲೆಕ್ಷನ್ ನೋಡುತ್ತಿರುವುದು ಇದೇ ಮೊದಲು.

    ಜೇಮ್ಸ್ ಮಾಸ್ ಸಂತೋಷ, ಸಂದೇಶ!

    ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದ ‘ದಿ ಕಾಶ್ಮೀರ್ ಫೈಲ್ಸ್​’: ಏಳೇ ದಿನಗಳಲ್ಲಿ 100 ಕೋಟಿ ರೂ.ನತ್ತ ದಾಪುಗಾಲು

    ಜೇಮ್ಸ್ ಜಾತ್ರೆ: ಅಭಿಮಾನಿಗಳ ನಿದ್ದೆ ಕದ್ದ ಅಪ್ಪು, ಹೇಗಿತ್ತು ಮೊದಲ ದಿನದ ಭೋರ್ಗರೆತ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts