ಬೆಂಗಾವಲು ವಾಹನ ನಿಲ್ಲಿಸಿ ಆಂಬ್ಯುಲೆನ್ಸ್​ಗೆ ದಾರಿ ಮಾಡಿಕೊಟ್ಟ ಪ್ರಧಾನಿ ಮೋದಿ! ವಿಡಿಯೋ ವೈರಲ್​

PM Modi
Published on

ಅಹಮದಾಬಾದ್​: ತವರು ಭೂಮಿ ಗುಜರಾತಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದು, ಇದರ ನಡುವೆ ತಮ್ಮ ಮಾನವೀಯ ಗುಣದಿಂದ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಶುಕ್ರವಾರ ಪ್ರಧಾನಿ ಮೋದಿ ಅವರು ಅಹಮದಾಬಾದ್​ನಿಂದ ಗಾಂಧಿನಗರ ಕಡೆ ಹೊರಟಿದ್ದಾಗ ಮಾರ್ಗ ಮಧ್ಯೆ ತಮ್ಮ ಬೆಂಗಾವಲು ವಾಹವನ್ನು ನಿಲ್ಲಿಸಿ, ಆಂಬ್ಯುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟರು. ಈ ಮೂಲಕ ವಿವಿಐಪಿ ಸಂಸ್ಕೃತಿಯನ್ನು ಬದಿಗಿಟ್ಟು, ಮಾನವೀಯತೆಗಿಂತ ದೊಡ್ಡದು ಯಾವುದು ಇಲ್ಲ ಎಂಬ ಸಂದೇಶವನ್ನು ಸಾರಿದರು.

ಈ ಹಿಂದೆ 2017ರಲ್ಲಿ ಪ್ರಧಾನಿ ಮೋದಿ ಅವರು ವಿಐಪಿ ಬದಲಿಗೆ ಇಪಿಐ (ಎಲ್ಲರೂ ಮುಖ್ಯ) ಎಂದು ಹೇಳಿದ್ದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗಿದೆ. ಇಪಿಐ ಅಂದರೆ ಎವೆರಿ ಪರ್ಸನ್​ ಹ್ಯಾಸ್​ ವ್ಯಾಲ್ಯೂ ಆ್ಯಂಡ್​ ಇಂಪಾರ್ಟೆನ್ಸ್​ (ಪ್ರತಿಯೊಬ್ಬ ವ್ಯಕ್ತಿಗೂ ಮೌಲ್ಯ ಮತ್ತು ಪ್ರಾಮುಖ್ಯತೆ ಇರುತ್ತದೆ). ಪ್ರಧಾನಿ ಅವರು ಅಂದು ಹೇಳಿದ ಮಾತನ್ನು ಪಾಲಿಸುತ್ತಲೇ ಬರುತ್ತಿದ್ದು, ಇತರರಿಗೂ ಮಾದರಿಯಾಗಿದ್ದಾರೆ.

ವಿಐಪಿ ಸಂಸ್ಕೃತಿಯ ಸಂಕೇತವಾದ ವಾಹನಗಳ ಮೇಲಿನ ಕೆಂಪು ದೀಪಗಳ ಬಳಕೆಯನ್ನು ಸಹ ಪ್ರಧಾನಿ ಮೋದಿ ಕೊನೆಗೊಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net