

ಹೈದರಾಬಾದ್: ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಫೋಟೋಶೂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪಡ್ಡೆ ಹುಡುಗರ ಹೃದಯದ ಬಡಿತವನ್ನು ಹೆಚ್ಚಿಸಿದೆ. ಪ್ರಖ್ಯಾತ ಮ್ಯಾಗಜಿನ್ ಒಂದರ ಕವರ್ ಪೇಜ್ಗಾಗಿ ರಶ್ಮಿಕಾ ಹಾಟ್ ಆ್ಯಂಡ್ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದಾರೆ.
ಟ್ರಾವೆಲ್ ಆ್ಯಂಡ್ ಲೀಸರ್ ಇಂಡಿಯಾ, ಇನ್ಸ್ಟಾಗ್ರಾಂನಲ್ಲಿ ರಶ್ಮಿಕಾ ಫೋಟೋಗಳನ್ನು ಶೇರ್ ಮಾಡಿಕೊಂಡಿದೆ. ಚಿನ್ನದ ಹುಡುಗಿ ರಶ್ಮಿಕಾ ಮಂದಣ್ಣ ಅಕ್ಟೋಬರ್ನಲ್ಲಿ ಗುಡ್ಬೈ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಲು ತಯಾರಿ ನಡೆಸುತ್ತಿರುವಾಗ, ನಮ್ಮ 16ನೇ ವಾರ್ಷಿಕೋತ್ಸವದ ಕವರ್ ಶೂಟ್ಗಾಗಿ ಟ್ರಾವೆಲ್ ಆ್ಯಂಡ್ ಲೀಸರ್ ಇಂಡಿಯಾ ಮತ್ತು ಎಸ್ಎ ರಶ್ಮಿಕಾ ಅವರನ್ನು ಬಿಸಿಲ ನಾಡು ಅಬುಧಾಬಿಗೆ ಕರೆದೊಯ್ಯಿತು ಎಂದು ಫೋಟೋಗೆ ಶೀರ್ಷಿಕೆ ನೀಡಲಾಗಿದೆ. ಟ್ರಾವೆಲ್ ಆ್ಯಂಡ್ ಲೀಸರ್ ಇಂಡಿಯಾವು ರಶ್ಮಿಕಾರ ಸಾಕಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಜಾಲತಾಣದಲ್ಲಿ ವೈರಲ್ ಆಗಿವೆ.
ರಶ್ಮಿಕಾ ಅವರು ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದು, ಇದರ ಜೊತೆಗೆ ಅನೇಕ ಬ್ರ್ಯಾಂಡ್ಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಅದರಲ್ಲಿ ಟ್ರಾವೆಲ್ ಆ್ಯಂಡ್ ಲೀಸರ್ ಇಂಡಿಯಾ ಕೂಡ ಒಂದು. ಅಬುಧಾಬಿ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ರಶ್ಮಿಕಾರ ಈ ಫೋಟೋಶೂಟ್ ನಡೆಸಲಾಗಿದೆ. ವಿವಿಧ ಭಂಗಿಗಳಲ್ಲಿ, ವಿವಿಧ ಉಡುಗೆ ತೊಟ್ಟು ರಶ್ಮಿಕಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ರಶ್ಮಿಕಾ ಅವರು ಕೊನೆಯದಾಗಿ ಅಮಿತಾಭ್ ಬಚ್ಚನ್ ಅಭಿನಯದ ಗುಡ್ಬೈ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿತು. ಆದರೂ ರಶ್ಮಿಕಾ ಅವರು ಇನ್ನು ಅನೇಕ ಚಿತ್ರಕ್ಕೆ ಸಹಿ ಹಾಕಿದ್ದು, ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದ ಚಿತ್ರೀಕರಣ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. (ಏಜೆನ್ಸೀಸ್)