

ಮಾಲ್ಡೀವ್ಸ್: ಮಾದಕ ನಟಿ ಸನ್ನಿ ಲಿಯೋನ್ ಅವರು ಸದ್ಯ ಬಿಡುವಿನ ವೇಳೆಯನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಭೂಲೋಕದ ಸ್ವರ್ಗ ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ಬೀಡುಬಿಟ್ಟಿರುವ ಸನ್ನಿ ಲಿಯೋನ್ ತಮ್ಮ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ.
ಸನ್ನಿ ಲಿಯೋನ್ ಯಾವುದೇ ಹೊಸ ಪೋಟೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ರೆ ಸಾಗು ಅದು ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ವೈರಲ್ ಆಗಿ ಬಿಡುತ್ತದೆ. ಸನ್ನಿ ಲಿಯೋನ್ ಅವರು ತಮ್ಮ ಪತಿ ಡೇನಿಯಲ್ ವೇಬರ್, ಮಕ್ಕಳಾದ ನಿಶಾ, ಏಶರ್ ಹಾಗೂ ನೋಹ್ ಜತೆ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ.
ರಜೆಯ ಮೋಜಿನಲ್ಲಿರುವ ಸನ್ನಿ ತಮ್ಮ ಅಭಿಮಾನಿಗಳನ್ನು ಮರೆತಿಲ್ಲ. ಅವರಿಗೊಂದು ಬಿಗ್ ಆಫರ್ ಕೂಡ ನೀಡಿದ್ದಾರೆ. ಏನಪ್ಪಾ ಅದು ಅಂದ್ರೆ, ಕಡಲ ತೀರದಲ್ಲಿರುವ ಉಯ್ಯಾಲೆ ಮೇಲೆ ನಿಂತಿರುವ ಚಿತ್ರವನ್ನು ಶೇರ್ ಮಾಡಿಕೊಂಡಿರುವ ಸನ್ನಿ, ನನ್ನ ಪಕ್ಕದಲ್ಲಿರುವ ಉಯ್ಯಾಲೆಯ ಸೀಟು ಖಾಲಿ ಇದೆ. ಯಾರು ನನ್ನೊಂದಿಗೆ ಉಯ್ಯಾಲೆ ಆಡಲು ಬರ್ತೀರಾ ಎನ್ನುವ ಮೂಲಕ ಪರೋಕ್ಷವಾಗಿ ಆಫರ್ ನೀಡಿದ್ದಾರೆ.
ಹಾಟ್ ಲುಕ್ನಲ್ಲಿರುವ ಸನ್ನಿ ಲಿಯೋನ್ ನೋಡಿದ ಅನೇಕ ನೋಡಿಗರು ಇಂತಹ ಅವಕಾಶವನ್ನು ಯಾರಾದರೂ ಮಿಸ್ ಮಾಡಿಕೊಳ್ತಾರಾ ನಾನು ಬರ್ತೀನಿ ಅಂತಾ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ. ಇನ್ನು ಕೆಲವರು ಸನ್ನಿ ಲಿಯೋನ್ ಮಾದಕ ಮೈಮಾಟಕ್ಕೆ ಮಾರುಹೋಗಿದ್ದಾರೆ. (ಏಜೆನ್ಸೀಸ್)