VIDEO| ಬಟ್ಟೆ ಜಾರಿ ಕೆಳಗೆ ಬೀಳ್ತಿದ್ರು ಗಮನಿಸದ ನಟಿ ಪಾಯಲ್: ಮತ್ತೊಮ್ಮೆ ಟ್ರೋಲ್​ ಆದ ಹಾಟ್​ ಬ್ಯೂಟಿ​

ಬಟ್ಟೆ ಜಾರಿ ಕೆಳಗೆ ಬೀಳ್ತಿದ್ರು ಗಮನಿಸದ ನಟಿ: ಮತ್ತೊಮ್ಮೆ ಟ್ರೋಲ್​ ಆದ ಹಾಟ್​ ಬ್ಯೂಟಿ​ #Actor #Paayal #Dress - youtube
Published on

ಹೈದರಾಬಾದ್​: ಟಾಲಿವುಡ್​ನ ಹಾಟ್​ ಬ್ಯೂಟಿ ಎಂದೇ ಖ್ಯಾತಿಯಾಗಿರುವ ನಟಿ ಪಾಯಲ್​ ರಜಪೂತ್ ಮತ್ತೊಮ್ಮೆ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬ್ರಾಲೆಸ್​ ಫೋಟೋಶೂಟ್​ ಮಾಡಿಸುವ ವೇಳೆ ಅವರ ಬಟ್ಟೆ ಜಾರಿ ಟ್ರೋಲ್​ ಆಗಿದ್ದರು. ಇದೀಗ ಮತ್ತೊಮ್ಮೆ ಅದೇ ಕಾರಣಕ್ಕೆ ಟ್ರೋಲಿಗರಿಗೆ ದಾಳವಾಗಿದ್ದಾರೆ. ಪಾಯಲ್​ ಮೈಮೇಲೆ ಬಟ್ಟೆ ನಿಲ್ಲುವುದಿಲ್ಲವೇ ಎಂದು ನೆಟ್ಟಿಗರು ಕಿಚಾಯಿಸುತ್ತಿದ್ದಾರೆ.

ಪಾಯಲ್​ ಇತ್ತೀಚೆಗೆ ಮತ್ತೊಂದು ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಒಂದು ಭಾಗದ ಬಟ್ಟೆ ಜಾರಿ ಕೆಳಗೆ ಬೀಳುತ್ತಿದ್ದರೂ ರೀಲ್ಸ್​ ಮಾಡುವುದರಲ್ಲಿ ಪಾಯಲ್​ ಮಗ್ನರಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನಿಮ್ಮ ಮೈಮೇಲೆ ಬಟ್ಟೆ ನಿಲ್ಲವುದಿಲ್ಲವೇ ಎಂದು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

ಈ ಹಿಂದಿನ ವಿಡಿಯೋ ವೈರಲ್​ ಆಗಿದ್ದ ಸಮಯದಲ್ಲಿ ಪಾಯಲ್​ ಟ್ರೋಲಿಗರ ವಿರುದ್ಧ ಕಿಡಿಕಾರಿದ್ದರು. ಟ್ರೋಲಿಗರು ಕಳಪೆ ಮನಸ್ಥಿತಿಯವರು ಎಂದು ಜರಿದಿದ್ದರು. ನನ್ನ ಮೇಲಾಗುತ್ತಿರುವ ಟ್ರೋಲ್​ಗಳ​ ಬಗ್ಗೆ ನನ್ನ ತಾಯಿಗೆ ಚಿಂತೆ ಕಾಡುತ್ತಿದೆ. ಸಿನಿಮಾ ರಂಗವನ್ನು ಬಿಡುವಂತೆ ಕೇಳುತ್ತಿದ್ದಾರೆ. ಆದರೆ, ಯಾರು ಏನೇ ಅಂದರು ನಾನು ಕುಗ್ಗುವುದಿಲ್ಲ. ನಾನು ದೃಢವಾಗಿ ನಿಂತು, ನನಗೆ ಯಾವುದು ಇಷ್ಟವೋ ಅದನ್ನೇ ಮಾಡುತ್ತೇನೆ ಎಂದು ಹೇಳಿದ್ದರು.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಪಾಯಲ್​ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ. ಆರ್​​ಎಕ್ಷ್​ 100 ಮತ್ತು ಆರ್​ಡಿಎಕ್ಸ್​ ಲವ್​ ಚಿತ್ರಗಳಲ್ಲಿನ ಬೋಲ್ಡ್​ ನಟನೆಯ ಮೂಲಕ ಪಾಯಲ್​ ಸಖತ್​ ಸುದ್ದಿ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೂ ಕಾಲಿಡುತ್ತಿರುವ ಪಾಯಲ್​, ಡಾಲಿ ಧನಂಜಯ ನಟನೆಯ ‘ಹೆಡ್ ಬುಷ್‌’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net