ಕೊಚ್ಚಿ: ನಾನು ಹತ್ತು ಮಹಿಳೆಯರೊಂದಿಗೆ ದೈಹಿಕ ಸಂಬಂಧ ಹೊಂದಿದ್ದೇನೆ. ನನಗೆ ಬೇಕು ಅನಿಸಿದರೆ ಸಂಭೋಗಕ್ಕೆ ಕರೆಯುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಮಲಯಾಳಂನ ಖ್ಯಾತ ನಟ ವಿನಾಯಕನ್ ವಿರುದ್ಧ ಸಾಕಷ್ಟು ಸೆಲೆಬ್ರಿಟಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅದಕ್ಕೆ ತಲೆಕೆಡಿಸಿಕೊಳ್ಳದ ವಿನಾಯಕನ್ ಇದೀಗ ಫೋಟೋವೊಂದನ್ನು ಶೇರ್ ಮಾಡುವ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ನಟ ಹರೀಶ್ ಪೆರಾಡಿ, ನಟಿ ಪಾರ್ವತಿ ಥಿರುವೊತ್ ಮತ್ತು ಬರಹಗಾರ್ತಿ ಶಾರದಕುಟ್ಟು ಸೇರಿದಂತೆ ಅನೇಕ ಕಲಾವಿದರು ವಿನಾಯಕನ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ತಮ್ಮ ವಿರುದ್ಧ ಕೇಳಿಬಂದ ಯಾವುದೇ ಕಾಮೆಂಟ್ಗೂ ವಿನಾಯಕನ್ ಇದುವರೆಗೂ ಮಾತಿನ ಮೂಲಕ ಪ್ರತಿಕ್ರಿಯೆ ನೀಡಿಲ್ಲ.
ಒಂದು ಮಾತನಾಡದೇ ಯಾವುದೇ ಅಡಿಬರಹವನ್ನು ನೀಡದೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪಾಂಚಾಲಿ ಮತ್ತು ಪಂಚ ಪಾಂಡವರ ಫೋಟೋ ಶೇರ್ ಮಾಡುವ ಮೂಲಕ ತಮ್ಮ ವಿರುದ್ಧ ಮಾತನಾಡುವವರಿಗೆ ವಿನಾಯಕನ್ ತಿರುಗೇಟು ನೀಡಿದ್ದಾರೆ. ವಿನಾಯಕನ್ ಪೋಸ್ಟ್ಗೂ ಕೂಡ ಸಾಕಷ್ಟು ಮಂದಿ ಆಕ್ರೋಶ ಹೊರಹಾಕಿದ್ದು, ನಿಮ್ಮ ನಡೆ-ನುಡಿ ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಮಾಜಿ ಮಾಡೆಲ್ ಮತ್ತು ದಲಿತ ಕಾರ್ಯಕರ್ತೆಯೊಬ್ಬರು ಈ ಹಿಂದೆ ನಟ ವಿನಾಯಕನ್ ಅವರು ಫೋನ್ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಮೀಟೂ ಸಂಬಂಧ ವಿನಾಯಕನ್ ವಿವಾದಾತ್ಮಕ ಹೇಳಿಕೆ ನೀಡಿ, ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಘಟನೆ ಹಿನ್ನೆಲೆ ಏನು?
ನಟಿ ನವ್ಯಾ ನಾಯರ್ ಮತ್ತೆ ಮಲಯಾಳಂ ಚಿತ್ರಕ್ಕೆ ಕಂಬ್ಯಾಕ್ ಮಾಡಿರುವ ವಿ.ಕೆ. ಪ್ರಕಾಶ್ ನಿರ್ದೇಶನದ “ಒರುಥಿ” ಚಿತ್ರದ ಪ್ರಚಾರದ ವೇಳೆ ವಿನಾಯಕನ್ ವಿವಾದವನ್ನು ಸೃಷ್ಟಿ ಮಾಡಿದ್ದಾರೆ. ಮೀಟೂ ಚಳುವಳಿಯನ್ನು ನಾನು ಅರ್ಥಮಾಡಿಕೊಂಡಿಲ್ಲ, ಅದರ ಅರ್ಥ ಮಹಿಳೆಯರನ್ನು ದೈಹಿಕ ಸಂಬಂಧದ ಬಗ್ಗೆ ಕೇಳುವುದೇ ಎಂದು ಹೇಳುವ ಮೂಲಕ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಾನು 10 ಮಹಿಳೆಯರ ಜತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುತ್ತೀರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ. ಓಕೆ ಅಂದರೆ ಓಕೆ. ಒಂದು ವೇಳೆ ನಿರಾಕರಿಸಿದರೆ, ನಾನದನ್ನು ಅಲ್ಲಿಗೆ ಬಿಟ್ಟು ಬಿಡುತ್ತೇನೆ. ಬಲವಂತ ಮಾಡುವುದಿಲ್ಲ. ಮಹಿಳೆಗೆ ಲೈಂಗಿಕತೆ ಕೇಳುವುದು “ಮೀ ಟೂ” ಎಂದಾದರೆ, ನಾನದನ್ನು ಮುಂದುವರಿಸುತ್ತೇನೆ ಎಂದು ಹೇಳುವ ಮೂಲಕ ವಿವಾದದ ಅಲೆ ಎಬ್ಬಿಸಿದ್ದಾರೆ.
ವಿನಾಯಕನ್ ವಿವಾದಾತ್ಮಕ ಹೇಳಿಕೆಯನ್ನು ನೀಡುವಾಗ ನಟಿ ನವ್ಯಾ ನಾಯರ್ ಕೂಡ ಅದೇ ವೇದಿಕೆ ಮೇಲೆಯೇ ಇದ್ದರು. ಈ ವೇಳೆ ಅವರು ವಿನಾಯಕನ್ ಅವರ ಮಾತನ್ನು ಖಂಡಿಸದೇ ಮೌನ ವಹಿಸಿದ್ದಕ್ಕೆ ಟೀಕೆಗೂ ಗುರಿಯಾಗಿದ್ದಾರೆ. ಆ ಕ್ಷಣದಲ್ಲಿ ನಾನೇನು ಮಾಡಲು ಸಾಧ್ಯವಾಗಲಿಲ್ಲ ಎಂದು ಸಮರ್ಥಿಸಿಕೊಂಡರು ಆದರೆ, ನಂತರದಲ್ಲಿ ಹೇಳಿಕೆಯನ್ನು ಖಂಡಿಸಿದರೂ ಕೂಡ ನವ್ಯಾ ನಡೆದುಕೊಂಡ ರೀತಿ ಹಲವರಿಗೆ ಬೇಸರ ತರಿಸಿದೆ.
ಅಂದಹಾಗೆ ವಿನಾಯಕನ್ ತಮಿಳಿನಲ್ಲಿ ‘ತಿಮಿರು’, ‘ಸಿರುತೈ’, ‘ಮರಿಯಾನ್’ ಮುಂತಾದ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ತಮ್ಮ ತವರು ಕೇರಳದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಮತ್ತು ಐಶ್ವರ್ಯಾ ರಾಜೇಶ್, ಸಿಮ್ರಾನ್ ಮತ್ತು ರಿತು ವರ್ಮಾ ನಟಿಸಿರುವ ವಿಕ್ರಮ್ ಅವರ ಮುಂಬರುವ ಚಿತ್ರ ‘ಧ್ರುವ ನಚ್ಚತಿರಂ’ ನಲ್ಲಿ ವಿನಾಯಕನ್ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್)
ಭೂ ಕಬಳಿಕೆ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಿದ ಸಾಕ್ಷಾತ್ ಮಹಾಶಿವ!
ಠಾಣೆಯಲ್ಲಿದ್ದ 15 ಲಕ್ಷ ಹಣದೊಂದಿಗೆ ಸರ್ಕಲ್ ಇನ್ಸ್ಪೆಕ್ಟರ್ ಪರಾರಿ: ಬಯಲಾಯ್ತು ಸಿಐ ಕರಾಳ ಮುಖ
ಒಂದೇ ದಿನ ವಿದ್ಯಾರ್ಥಿ-ಶಿಕ್ಷಕಿ ನಾಪತ್ತೆ! ಮದ್ವೆ ಆಗಿ ಬಾಲಕನ ಜತೆ ಸಂಸಾರ ನಡೆಸುತ್ತಿದ್ದಾಕೆ ಸಿಕ್ಕಿಬಿದ್ದದ್ದೇ ರೋಚಕ