ನಿಮ್ಮ ಕಣ್ಣಿಗೊಂದು ಸವಾಲ್​: ಈ ಫೋಟೋದಲ್ಲಿರುವ ಬಾಲಕಿಯನ್ನು ಪತ್ತೆಹಚ್ಚಿದ್ರೆ ನಿಮಗೆ ಫುಲ್​ ಮಾರ್ಕ್ಸ್​!

Girl
Published on

ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು ಅಥವಾ ಮಾನವರನ್ನು ಗುರುತಿಸಬಹುದಾಗಿರಬಹುದು ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವೈರಲ್​ ಆಗಿರುವ ಫೋಟೋದಲ್ಲಿ ಕಲ್ಲು ಬಂಡೆಗಳ ನಡುವೆ ಪುಟ್ಟ ಬಾಲಕಿ ಒಬ್ಬಳು ಕ್ಯಾಮೆರಾ ಕಡೆಗೆ ಕೈ ಬೀಸುತ್ತಿದ್ದಾಳೆ. ಆ ಬಾಲಕಿ ಎಲ್ಲಿದ್ದಾಳೆ ಎಂದು ಪತ್ತೆಹಚ್ಚಿ ಎಂಬ ಬರಹದೊಂದಿಗೆ ಜಾಲತಾಣದಲ್ಲಿ ಫೋಟೋ ವೈರಲ್​ ಆಗಿದೆ.

ಅಂದಹಾಗೆ ಈ ಫೋಟೋವನ್ನು 2016 ರಲ್ಲಿ ಸಾಮಾಜಿಕ ಜಾಲತಾಣ ವೇದಿಕೆ ಇಮ್ಗುರ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಇದೀಗ ಈ ಚಿತ್ರ ಮತ್ತೆ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಚಿತ್ರದಲ್ಲಿ ಬಂಡೆಗಳಿಂದ ಆವೃತವಾದ ಭೂದೃಶ್ಯವಿದೆ. ಬಂಡೆಗಳ ನಡುವೆ ಕೆನ್ನೇರಳೆ ಬಣ್ಣದ ಬಟ್ಟೆಯನ್ನು ಧರಿಸಿರುವ ಬಾಲಕಿ ಕ್ಯಾಮೆರಾದತ್ತ ಕೈ ಬೀಸುತ್ತಿದ್ದಾಳೆ.

ಫೋಟೋದಲ್ಲಿರುವ ಪುಟ್ಟ ಬಾಲಕಿಯನ್ನು ಪತ್ತೆ ಹಚ್ಚುವಂತೆ ಜಾಲತಾಣದಲ್ಲಿ ಸವಾಲು ಹಾಕಿದ್ದಾರೆ. ಹೌದಾ, ತುಂಬಾ ಸುಲಭ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಇಲ್ಲಿ ಬಾಲಕಿಯನ್ನು ಹುಡುಕುವುದು ಅಷ್ಟು ಸುಲಭವಲ್ಲ. ಏಕೆಂದರೆ, ಕಲ್ಲಿನ ಬಂಡೆಗಳ ನೆರಳುಗಳು ಮತ್ತು ಬಿರುಕುಗಳು ಬಾಲಕಿಯನ್ನು ಪತ್ತೆಹಚ್ಚಲು ದಾರಿ ತಪ್ಪಿಸುತ್ತವೆ.

ನೀವು ಬಾಲಕಿಯನ್ನು ಹುಡುಕಬಹುದೇ? ತುಂಬಾ ಹತ್ತಿರದಿಂದ ನೋಡಿ ಎಂದು ಫೋಟೋಗೆ ಕೀಟಲೆಯ ಶೀರ್ಷಿಕೆ ನೀಡಲಾಗಿದೆ. ಅನೇಕರು ಹುಡುಕುವ ಪ್ರಯತ್ನ ಮಾಡಿದ್ದು, ಇದರಲ್ಲಿ ಕೆಲವರು ಸಫಲರಾಗಿದ್ದರೆ, ಇನ್ನು ಕೆಲವರು ತುಂಬಾ ಹುಡುಕಾಡಿ ವಿಫಲವಾಗಿದ್ದಾರೆ. ನೀವು ಒಮ್ಮೆ ಪ್ರಯತ್ನಿಸಿ, ಬಾಲಕಿಯನ್ನು ಪತ್ತೆ ಹಚ್ಚಲಾಗದೇ ಗೊಂದಲಕ್ಕೀಡಾಗಿದ್ದರೆ, ಈ ಕೆಳಗಿನ ಫೋಟೋದಲ್ಲಿ ಉತ್ತರ ಇದೆ ನೋಡಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net