ನಟ ಅಲ್ಲು ಅರ್ಜುನ್​ ವರದಕ್ಷಿಣೆ ತೆಗೆದುಕೊಂಡಿದ್ದಾರಾ? ಅಚ್ಚರಿಯ ಹೇಳಿಕೆ ನೀಡಿದ ಪತ್ನಿ ಸ್ನೇಹಾ ರೆಡ್ಡಿ ತಂದೆ

Allu Arjun
Published on

ಹೈದರಾಬಾದ್​: ಟಾಲಿವುಡ್​ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜು ಸದ್ಯ ಪುಷ್ಪ ಚಿತ್ರದ ಯಶಸ್ಸಿ ಗುಂಗಿನಲ್ಲಿದ್ದಾರೆ. ಇದರ ಜತೆಗೆ ಪುಷ್ಪ ಎರಡನೇ ಭಾಗಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರಂಗಸ್ಥಳಂ ಸಿನಿಮಾ ಖ್ಯಾತಿಯ ಸುಕುಮಾರ್​ ಎರಡನೇ ಭಾಗದ ಸ್ಕ್ರಿಪ್ಟ್​ ಕೆಲಸದಲ್ಲಿ ತೊಡಗಿಕೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಶೂಟಿಂಗ್​ ಆರಂಭವಾಗಲಿದೆ.

ಸದ್ಯ ಅಲ್ಲು ಅರ್ಜುನ್​ ತಮ್ಮ ಕುಟುಂಬದ ಜತೆಗೆ ಸಮಯ ಕಳೆಯುತ್ತಿದ್ದಾರೆ. ಪತ್ನಿ ಸ್ನೇಹಾ ರೆಡ್ಡಿ ಮತ್ತು ಮಗಳ ಜತೆಗೆ ಉತ್ತಮ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನು ಅಲ್ಲು ಅರ್ಜುನ್​ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಪತ್ನಿ ಸ್ನೇಹಾ ರೆಡ್ಡಿ, ಕಂಚರಾಲ ಚಂದ್ರಶೇಖರ್​ ರೆಡ್ಡಿ ಅವರ ಮಗಳು. ಇತ್ತೀಚೆಗೆ ಚಂದ್ರಶೇಖರ್​ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಈ ವೇಳೆ ಅಲ್ಲು ಅರ್ಜುನ್​ ಮದುವೆ ವರದಕ್ಷಿಣೆಯ ಬಗ್ಗೆ ತಿಳಿಸಿದ್ದಾರೆ.

ಮಾವನಾಗಿ ನನ್ನ ಅಳಿಯ ಅಲ್ಲು ಅರ್ಜುನ್​ಗೆ ನೂರಕ್ಕೆ ನೂರು ಅಂಕಗಳನ್ನು ಕೊಡುತ್ತೇನೆ. ಕೇವಲ ತೆಲುಗು ರಾಜ್ಯದಲ್ಲಿ ಮಾತ್ರ ಅಭಿಮಾನಿಗಳನ್ನು ಹೊಂದಿಲ್ಲ, ಬೇರೆ ಬೇರೆ ರಾಜ್ಯಗಳಲ್ಲೂ ಆತನಿಗೆ ಅಭಿಮಾನಿಗಳಿದ್ದಾರೆ. ಬನ್ನಿ ಹಾಡುಗಳನ್ನೂ ಜಮ್ಮು ಮತ್ತು ಕಾಶ್ಮೀರದಲ್ಲೂ ಕೇಳುತ್ತಾರೆ. ಕಠಿಣ ಪರಿಶ್ರಮದಿಂದ ಮಾತ್ರ ಇದು ಸಾಧ್ಯ ಎಂದರು.

ಇದೇ ವೇಳೆ ಬನ್ನಿ ಮದುವೆ ವೇಳೆ ವರದಕ್ಷಿಣೆ ತೆಗೆದುಕೊಂಡ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಚಂದ್ರಶೇಖರ್​, ಯಾವುದೇ ವರದಕ್ಷಿಣೆ ತೆಗೆದುಕೊಂಡಿಲ್ಲ. ಅಲ್ಲು ಕುಟುಂಬ ವರದಕ್ಷಿಣೆಗೆ ವಿರುದ್ಧವಾಗಿದೆ. ಅಲ್ಲು ಅರ್ಜುನ್​ ಬಳಿಯೇ ಸಾಕಷ್ಟಿದೆ. ನಾವು ಅವನಿಗೆ ಕೊಡುವುದು ದೊಡ್ಡ ವಿಷಯ ಎಂದು ನಾನು ಭಾವಿಸುವುದಿಲ್ಲ ಎಂದರು.

ಒಂದು ದಶಕಕ್ಕೂ ಹೆಚ್ಚು ಹಿಂದೆ ಅಲ್ಲು ಅರ್ಜುನ್​ ಅವರು ಸ್ನೇಹಿತನ ಮದುವೆಗೆಂದು ಅಮೆರಿಕಗೆ ಹೋಗಿದ್ದರು. ಈ ವೇಳೆ ಅಲ್ಲು ಅರ್ಜುನ್​ ತಮ್ಮ ಜೀವನದ ಸಂಗಾತಿ ಸ್ನೇಹಾ ರೆಡ್ಡಿ ಅವರನ್ನು ಮೊದಲ ಬಾರಿಗೆ ಭೇಟಿಯಾದರು. ಬನ್ನಿಯನ್ನು ಅವರ ಸ್ನೇಹಿತ ಸ್ನೇಹಾಗೆ ಪರಿಚಯಿಸಿದಾಗ, ಮೊದಲ ನೋಟದಲ್ಲೇ ಸ್ನೇಹಾ ಮೇಲೆ ಬನ್ನಿಗೆ ಲವ್​ ಆಯಿತಂತೆ. ಇದಾದ ಬಳಿಕ ಮನೆಯವರನ್ನು ಒಪ್ಪಿಸಿ 2011, ಮಾರ್ಚ್ 6 ರಂದು ವಿವಾಹವಾದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net