More

    ಗರುಡನ ಹಾರಾಟ ಮತ್ತು ಹೋರಾಟ: ಗರುಡ ಸಿನಿಮಾ ವಿಮರ್ಶೆ

    • ಚಿತ್ರ : ಗರುಡ
    • ನಿರ್ದೇಶನ : ಧನು ಕುಮಾರ್
    • ನಿರ್ಮಾಣ : ರಾಜಾ ರೆಡ್ಡಿ
    • ತಾರಾಗಣ : ಸಿದ್ಧಾರ್ಥ್ ಮಹೇಶ್, ಶ್ರೀನಗರ ಕಿಟ್ಟಿ, ರಂಗಾಯಣ ರಘು, ಐಂದ್ರಿತಾ ರೇ, ಆಶಿಕಾ ರಂಗನಾಥ್, ಕಾಮ್ನಾ ಜೇಠ್ಮಲಾನಿ ಮುಂತಾದವರು

    | ಹರ್ಷವರ್ಧನ್ ಬೆಂಗಳೂರು

    ಆತ ರಾಮ್ (ಸಿದ್ಧಾರ್ಥ್ ಮಹೇಶ್). ಗೋವಾದಲ್ಲಿ ಶಂಕರಣ್ಣ (ರಂಗಾಯಣ ರಘು) ಮತ್ತು ಅನು (ಐಂದ್ರಿತಾ) ಜತೆ ಹೋಟೆಲ್ ನಡೆಸುತ್ತಿರುತ್ತಾನೆ. ಅನುಗೆ ರಾಮ್ ಮೇಲೆ ಪ್ರೀತಿ. ಅದು ಗೊತ್ತಿದ್ದರೂ ರಾಮ್ ಮಾತ್ರ ಮುಂದುವರಿಯಲು ಹಿಂದೇಟು ಹಾಕುತ್ತಿರುತ್ತಾನೆ. ರಾಮ್ ಹಿನ್ನೆಲೆ ಬಗ್ಗೆ ಅನುಗೆ ಅನುಮಾನ ಮೂಡುತ್ತದೆ. ಅದೇ ಸಮಯದಲ್ಲಿ ಇಡೀ ಭಾರತದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಸಂಚು ನಡೆಯುತ್ತಿರುತ್ತದೆ. ಅದಕ್ಕೆ ಡಾನ್ ಕಾಳಿಂಗ (ಆದಿ ಲೋಕೇಶ್) ಗೋವಾ ಮೂಲಕವೇ ಶಸ್ತ್ರಗಳನ್ನು ಪೂರೈಸಲು ಐಡಿಯಾ ಮಾಡಿರುತ್ತಾನೆ. ಪೊಲೀಸ್ ಅಧಿಕಾರಿಗಳು ಅದರ ಜಾಡು ಹಿಡಿದು ಹೊರಡುತ್ತಾರೆ. ಅನು ಪ್ರೀತಿಗೆ ರಾಮ್ ಸೋಲುತ್ತಾನಾ? ಉಗ್ರರ ವಿರುದ್ಧದ ಹೋರಾಟದಲ್ಲಿ ಪೊಲೀಸರು ಗೆಲ್ಲುತ್ತಾರಾ? ಕುತೂಹಲ ಇರುವವರು ಸಿನಿಮಾ ನೋಡಿ…

    ಸೆಂಟಿಮೆಂಟ್, ರೊಮ್ಯಾನ್ಸ್, ಸಸ್ಪೆನ್ಸ್, ಡ್ರಾಮಾ ಜತೆಗೆ ಸ್ವಲ್ಪ ಹೆಚ್ಚೇ ಆಕ್ಷನ್ ಸೇರಿಸಿ ಪ್ರೇಕ್ಷಕರಿಗೆ ಫುಲ್ ಮೀಲ್ಸ್ ಉಣಬಡಿಸುವ ಪ್ರಯತ್ನ ನಿರ್ದೇಶಕರದು. ಮೊದಲಾರ್ಧದಲ್ಲಿ ಸರಾಗವಾಗಿ ಸಾಗುವ ಸ್ಟೋರಿ, ದ್ವಿತೀಯಾರ್ಧದಲ್ಲಿ ಕೊಂಚ ಸ್ಲೋ ಎನಿಸುತ್ತದೆ. ‘ಸಿಪಾಯಿ’ಗೆ ಹೋಲಿಸಿದರೆ ಸಿದ್ಧಾರ್ಥ್ ಮಹೇಶ್ ಸಾಕಷ್ಟು ಸುಧಾರಿಸಿದ್ದಾರೆ. ಐಂದ್ರಿತಾ ರೇ, ಆಶಿಕಾ ರಂಗನಾಥ್ ಇಬ್ಬರಿಗೂ ಸಮಾನ ಸ್ಕ್ರೀನ್ ಸ್ಪೇಸ್ ಇದೆ. ಖಡಕ್ ಪೊಲೀಸ್ ಅಧಿಕಾರಿ ಆಗಿ ಕಿಟ್ಟಿ ಗುಡುಗಿದ್ದಾರೆ. ಕಾಮ್ನಾ ಜೇಠ್ಮಲಾನಿ, ರಮೇಶ್ ಭಟ್, ರಾಜೇಶ್ ನಟರಂಗ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ನಿರ್ದೇಶಕ ಧನು ಕುಮಾರ್ ಕೆಲವೆಡೆ ಟ್ವಿಸ್ಟ್​ಗಳನ್ನು ಕೊಟ್ಟು ಪ್ರೇಕ್ಷಕರನ್ನು ಸೀಟಂಚಲ್ಲಿ ಕೂರಿಸಿದರೂ, ಅಲ್ಲಲ್ಲಿ ಕತ್ತರಿ ಪ್ರಯೋಗಿಸಿದ್ದರೆ ಚಿತ್ರಕ್ಕೆ ಮತ್ತಷ್ಟು ವೇಗ ಸಿಗುತ್ತಿತ್ತು. ಹಾಡುಗಳು ಕೇಳುವಂತಿವೆಯಾದರೂ ನೆನಪಿನಲ್ಲಿ ಉಳಿಯುವುದಿಲ್ಲ. ಹಿನ್ನಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ವಿಎಫ್​ಎಕ್ಸ್ ಇನ್ನಷ್ಟು ಪರಿಣಾಮಕಾರಿಯಾಗಿದ್ದರೆ ಸಿನಿಮಾ ನೋಡಲು ಮತ್ತಷ್ಟು ಅಂದವಾಗಿರುತ್ತಿತ್ತು.

    ಶಾಪಿಂಗ್ ಕಾಂಪ್ಲೆಕ್ಸ್​ನಿಂದ ಕೆಳಕ್ಕೆ ಬಿದ್ದ ಪ್ರೇಮಿಗಳು; ಯುವತಿ ಸಾವು, ಯುವಕ ಬಚಾವ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts