More

    1ಜಿ-5ಜಿ: ಟೆಲಿಕಾಂ ಜಿಗಿತದ ಜಾಡು ಹಿಡಿದು…

    ಪ್ರಧಾನಮಂತ್ರಿ ನರೇಂದ್ರ ಮೋದಿ ಮೇ 17ರಂದು ದೇಶದ ಮೊದಲ 5ಜಿ ಟೆಸ್ಟ್​ಬೆಡ್ ಅನ್ನು ಲೋಕಾರ್ಪಣೆ ಮಾಡಿದರು. ಈ ವರ್ಷಾಂತ್ಯದೊಳಗೆ 5ಜಿ ಸೇವೆ ಬಳಕೆದಾರರಿಗೆ ಸಿಗಲಿದೆ. ಇದೇ ರೀತಿ ಈ ದಶಕದ ಅಂತ್ಯದೊಳಗೆ 6ಜಿ ಸೇವೆಯನ್ನು ಬಳಕೆಗೆ ತರುವ ಗುರಿಯನ್ನು ಸರ್ಕಾರ ಇರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ, ದೂರಸಂಪರ್ಕ ವಲಯದಲ್ಲಿ ಕ್ರಾಂತಿಯೆಬ್ಬಿಸಿದ 1ಜಿಯಿಂದ 5ಜಿ ತನಕದ ಪರಿವರ್ತನೆಗಳ ಅವಲೋಕನ ಇಲ್ಲಿದೆ.

    ದೂರಸಂಪರ್ಕ ತಂತ್ರಜ್ಞಾನ 1ಜಿ (ಒಂದನೇ ಪೀಳಿಗೆ)ಯಿಂದ 5ಜಿ (ಐದನೇ ಪೀಳಿಗೆ) ತನಕ ಬೆಳೆದು ಬಂದ ರೀತಿಯೇ ವಿಶಿಷ್ಟ. ಮನುಷ್ಯರು ಪರಸ್ಪರ ಮತ್ತು ಸುತ್ತಲಿನ ಪ್ರಪಂಚದೊಡನೆ ಸಂವಹನ ನಡೆಸುವ ವಿಧಾನವನ್ನೇ ಬದಲಾಯಿಸಿದ ಮತ್ತು ಬದಲಾಯಿಸುತ್ತಿರುವ ತಂತ್ರಜ್ಞಾನ ಇದು. ಪ್ರತಿ ಪೀಳಿಗೆ (ಜಿ)ಯೊಂದಿಗೆ ಇದು ಬದಲಾಗುತ್ತ ಬಂದಿದೆ. ಮುಂದಿನ ಪೀಳಿಗೆಗಳಲ್ಲಿ ಇನ್ನಷ್ಟು ದೊಡ್ಡ ಪ್ರಮಾಣದ ಬದಲಾವಣೆಯನ್ನು ನಿರೀಕ್ಷಿಸಬಹುದು. ಟೆಲಿಕಾಂ ತಂತ್ರಜ್ಞಾನ 1ಜಿಯಿಂದ 2ಜಿಗೆ ಬದಲಾಗಲು ದೀರ್ಘ ಅವಧಿ ಅಂದರೆ ಸರಿ ಸುಮಾರು ಎರಡು ದಶಕ ತೆಗೆದುಕೊಂಡಿದೆ. 3ಜಿ ತಂತ್ರಜ್ಞಾನ ಬರಲು 10 ವರ್ಷ ಸಾಕಾಯಿತು. ನಂತರದಲ್ಲಿ, 4ಜಿ, 5ಜಿ, 6ಜಿ ತಂತ್ರಜ್ಞಾನಗಳು ಬಹುಬೇಗ ಅಭಿವೃದ್ಧಿಯಾಗುತ್ತ ಸಾಗಿವೆ.

    1ಜಿನಿಂದ 2ಜಿ ದೊಡ್ಡ ಹೆಜ್ಜೆ: ಜಪಾನ್​ನಲ್ಲಿ 1970 ರ ದಶಕದ ಅಂತ್ಯದಲ್ಲಿ 1ಜಿ ಪ್ರಾರಂಭವಾಯಿತು. 1ಜಿ ಮೊಬೈಲ್ ದೂರಸಂಪರ್ಕ ತಂತ್ರಜ್ಞಾನದ ಮೊದಲ ತಲೆಮಾರಿನ ಧ್ವನಿ ಕರೆಗಳನ್ನು ಮಾತ್ರ ಒದಗಿಸಿತು. ಇದರಲ್ಲಿ ಧ್ವನಿ ಗುಣಮಟ್ಟ ಅಷ್ಟು ಇರಲಿಲ್ಲ, ಕಡಿಮೆ ಕವರೇಜ್ ಇತ್ತು ಮತ್ತು ಯಾವುದೇ ರೋಮಿಂಗ್ ಬೆಂಬಲವಿರಲಿಲ್ಲ.

    ಇದಾಗಿ 21 ವರ್ಷಗಳ ನಂತರ, ಅಂದರೆ 1991 ರಲ್ಲಿ ಎರಡನೇ ಪೀಳಿಗೆಯ ಟೆಲಿಕಾಂ ತಂತ್ರಜ್ಞಾನ 2ಜಿ ಚಾಲ್ತಿಗೆ ಬಂತು. ಈ ಎರಡನೇ ಪೀಳಿಗೆಯಲ್ಲಿ 1ಜಿಯ ಅನಲಾಗ್ ಸಂಕೇತಗಳು ಸಂಪೂರ್ಣವಾಗಿ ಡಿಜಿಟಲ್ ಆಗಿ ಮಾರ್ಪಟ್ಟವು. ಸಿಡಿಎಂಎ ಮತ್ತು ಜಿಎಸ್​ಎಂ ಪರಿಕಲ್ಪನೆಗಳನ್ನು ಪರಿಚಯಿಸುವುದರ ಹೊರತಾಗಿ, ಇದು ಬಳಕೆದಾರರಿಗೆ ರೋಮಿಂಗ್ ಸೇವೆಯನ್ನೂ ಒದಗಿಸಿತು. ಇದರೊಂದಿಗೆ ಎಸ್​ಎಂಎಸ್ ಮತ್ತು ಎಂಎಂಎಸ್ ನಂತಹ ಸಣ್ಣ ಡೇಟಾ ಸೇವೆಗಳನ್ನು ಗರಿಷ್ಠ 50 ಕೆಬಿಪಿಎಸ್ ವೇಗದಲ್ಲಿ ನೀಡಿತು. ಕಾಲಾನುಕ್ರಮದಲ್ಲಿ ಧ್ವನಿ ಕರೆಗೆ ಡೇಟಾ ಸಪೋರ್ಟ್ ಅನ್ನು ಕೂಡ ಪರಿಚಯಿಸಲಾಗಿದೆ. ಪ್ರಪಂಚದ ಅನೇಕ ಭಾಗಗಳಲ್ಲಿ ಕ್ರಮೇಣವಾಗಿ 2ಜಿ ಅಪ್ರಸ್ತುತ ಆಗುತ್ತಿದ್ದರೂ ಭಾರತದಲ್ಲಿ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ. 2ಜಿ ಸೇವೆ ಬಳಸುತ್ತಿರುವ 300 ದಶಲಕ್ಷ ಚಂದಾದಾರರನ್ನು ಅದರಿಂದ 3ಜಿಗೆ ವರ್ಗಾಯಿಸಿ ‘2ಜಿ-ಮುಕ್ತ ಭಾರತ’ ನಿರ್ವಿುಸುವ ಗುರಿಯನ್ನು ದೇಶದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿ ಜಿಯೋ ಕಳೆದ ವರ್ಷ ಹಾಕಿಕೊಂಡಿತ್ತು.

    3ಜಿ ಕ್ರಾಂತಿ

    ಮೊಬೈಲ್ ತಂತ್ರಜ್ಞಾನವು 2001ರಲ್ಲಿ 3ಜಿ ಸೇವೆಗಳನ್ನು ಪರಿಚಯಿಸುವುದರೊಂದಿಗೆ ಸಂಚಲನವನ್ನೇ ಮೂಡಿಸಿತು. ಇದು ಮೊಬೈಲ್ ಇಂಟರ್​ನೆಟ್​ಗೆ ನಾಲ್ಕು ಪಟ್ಟು ವೇಗದಲ್ಲಿ ಡೇಟಾ ಪ್ರಸರಣದ ಭರವಸೆ ನೀಡಿತು. ಮೊಬೈಲ್ ಫೋನ್​ಗಳಿಗೆ ಇಮೇಲ್​ಗಳು, ನ್ಯಾವಿಗೇಷನಲ್ ನಕ್ಷೆಗಳು, ವೀಡಿಯೊ ಕರೆಗಳು, ವೆಬ್ ಬ್ರೌಸಿಂಗ್ ಮತ್ತು ಸಂಗೀತವನ್ನು ತಂದ ಪೀಳಿಗೆ ಇದು.

    ಈ 3ಜಿ ಪೀಳಿಗೆಯ ಸಮಯದಲ್ಲಿಯೇ ಬ್ಲಾ್ಯಕ್​ಬೆರ್ರಿ ಫೋನ್​ಗಳು ಜನಪ್ರಿಯವಾದವು. ಇದೇ ಅವಧಿಯಲ್ಲಿ 2008ರಲ್ಲಿ ಸ್ಟೀವ್ ಜಾಬ್ಸ್ ಅವರು 3ಜಿ ಐಫೋನ್ ಅನ್ನು ಗ್ರಾಹಕರಿಗೆ ಪರಿಚಯಿಸಿದರಲ್ಲದೆ, ‘ಆಪ್ ಸ್ಟೋರ್’ ಅನ್ನು ಜಗತ್ತನ್ನು ಪರಿಚಯಿಸಿದರು. ದಶಕಕ್ಕೂ ಹೆಚ್ಚು ಕಾಲ ಸೇವೆ ಒದಗಿಸಿರುವ ಆಪಲ್ 3ಜಿ ಮುಂದಿನ ಕೆಲ ವರ್ಷದಲ್ಲಿ ಮರೆಯಾಗಬಹುದು ಎಂಬ ಮಾತಿದೆ.

    4ಜಿ ಪ್ರಪಂಚ

    ಟೆಲಿಕಾಂ ವಲಯಕ್ಕೆ ಮತ್ತಷ್ಟು ವೇಗ ನೀಡಿದ 4ಜಿ ತಂತ್ರಜ್ಞಾನ 2010ರಲ್ಲಿ ಬಳಕೆಗೆ ಬಂತು. ಇದು ಹೆಚ್ಚಿನ ವೇಗ, ಉತ್ತಮ ಗುಣಮಟ್ಟ, ಹೆಚ್ಚಿನ ಸಾಮರ್ಥ್ಯದ ಧ್ವನಿ ಮತ್ತು ಡೇಟಾ ಸೇವೆಗಳನ್ನು ಒದಗಿಸಿತು. ಇಂದು ನಾವೆಲ್ಲ ಬಳಸುವ 4ಜಿ ಸೇವೆ 3ಜಿಗಿಂತ ಐದರಿಂದ ಏಳು ಪಟ್ಟು ವೇಗ ಹೊಂದಿದೆ. 3ಜಿ ಸೇವೆಗೆ ಹೋಲಿಸಿದರೆ 4ಜಿ ನೆಟ್​ವರ್ಕ್​ನಲ್ಲಿರುವ ಫೋನ್ ಹೆಚ್ಚು ವೇಗವಾಗಿ ಕೆಲಸ ಮಾಡುತ್ತಿದೆ. ನಮ್ಮ ಸ್ಮಾರ್ಟ್​ಫೋನ್​ಗಳು ಕೈಗಳಲ್ಲಿರುವ ಕಂಪ್ಯೂಟರ್ ಆಗಿ ಬದಲಾಗಿದ್ದು ಈ ಅವಧಿಯಲ್ಲಿ.

    ಬರುತ್ತಿದೆ 5ಜಿ…

    ಗ್ರಾಹಕ ವಲಯಕ್ಕೆ ಹೆಚ್ಚಿನ ವೇಗದಲ್ಲಿ ಸೇವೆ ಒದಗಿಸುವ ಭರವಸೆಯೊಂದಿಗೆ 5ಜಿ ತಂತ್ರಜ್ಞಾನ ಬಳಕೆಗೆ ಸಿದ್ಧವಾಗುತ್ತಿದೆ. 4ಜಿ ನೆಟ್​ವರ್ಕ್ 50 ಮಿಲಿಸೆಕೆಂಡ್​ಗಳಲ್ಲಿ ಸೇವೆ ಒದಗಿಸಿದರೆ, 5ಜಿ ನೆಟ್​ವರ್ಕ್ ಕೇವಲ ಒಂದು ಮಿಲಿಸೆಕೆಂಡ್​ನ ಕ್ಷಿಪ್ರತೆಯಲ್ಲಿ ಕೆಲಸ ಮಾಡಲಿದೆ. ಎಂಐಟಿ ಟೆಕ್ನಾಲಜಿ ರಿವ್ಯೂ ವರದಿ ಪ್ರಕಾರ, 5ಜಿ ಟೆಕ್ನಾಲಜಿ ಬಳಸುವ ಉಪಕರಣಗಳಿಗೆ ಕಡಿಮೆ ಬ್ಯಾಟರಿ ಸಾಕು. ಇದು ಬ್ಯಾಟರಿಯ ಬಾಳ್ವಿಕೆಯನ್ನು ಹೆಚ್ಚಿಸುತ್ತದೆ. ಆದರೆ 5ಜಿ ವೇಗವು ಡೌನ್​ಲೋಡ್ ವೇಗಕ್ಕಿಂತ ಹೆಚ್ಚಾಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಸೆಲ್ಯುಲಾರ್ ಬ್ಯಾಂಡ್​ವಿಡ್ತ್ ಹೆಚ್ಚಳ, ಪ್ರಜ್ವಲಿಸುವ ವೇಗ ಮತ್ತು ಕಡಿಮೆ ಸುಪ್ತತೆಯೊಂದಿಗೆ, ಹಲವಾರು ಸಾಧನಗಳನ್ನು ಪರಸ್ಪರ ಸಂರ್ಪಸಲು ಮತ್ತು ದೂರದಿಂದಲೇ ನಿಯಂತ್ರಿಸಲು ಸುಲಭವಾಗಿಸುವ ಮೂಲಕ ಅಂತರ್ಜಾಲದ ಸಾಧ್ಯತೆಯನ್ನು ಹೆಚ್ಚಿಸುವ ಭರವಸೆ ಇದರೊಂದಿಗೆ ಮೂಡಿದೆ.

    ಸ್ಮಾರ್ಟ್ ಸಿಟಿ ಮೂಲಸೌಕರ್ಯ, ಸ್ವಯಂ-ಚಾಲನಾ ಕಾರುಗಳು ಮತ್ತು ರೊಬೊಟಿಕ್ ಶಸ್ತ್ರಚಿಕಿತ್ಸೆಗಳ ನೈಜ-ಬಳಕೆಗೆ ಅನುಕೂಲವಾಗುವಂತೆ ಭವಿಷ್ಯದ 5ಜಿ ತಂತ್ರಜ್ಞಾನವಿರಲಿದೆ. ದಕ್ಷಿಣ ಕೊರಿಯಾ, ಅಮೆರಿಕ ಮತ್ತು ಕೆನಡಾ ಸೇರಿ ಹಲವು ದೇಶಗಳಲ್ಲಿ 5ಜಿ ಅನ್ನು ಬಳಕೆಗೆ ತರಲಾಗುತ್ತಿದೆ.

    ಭವಿಷ್ಯದ ‘ಜಿ’ಗಳು..

    5ಜಿ ತಂತ್ರಜ್ಞಾನಕ್ಕಿಂತ ಉತ್ತಮ ರೀತಿಯಲ್ಲಿ ಮತ್ತು ಹೆಚ್ಚು ಸಾಮರ್ಥ್ಯದೊಂದಿಗೆ 6ಜಿ ಕೆಲಸ ಮಾಡಬಲ್ಲದು. ಆದರೆ ನಂತರ, ‘ಭವಿಷ್ಯದ ‘ಜಿ’ ಕೇವಲ ನಿಮ್ಮ ಫೋನ್​ಗೆ ಸಂಬಂಧಿಸಿರುವುದಿಲ್ಲ. ಶೂನ್ಯ ಮಂದಗತಿಯೊಂದಿಗೆ ಸಂವಹನ ವೆಬ್ ಅನ್ನು ತಜ್ಞರು ಕಲ್ಪಿಸಲಿದ್ದಾರೆ. ಅಲ್ಲಿ ಸೂಕ್ಷ್ಮ ಶಸ್ತ್ರಚಿಕಿತ್ಸೆಯನ್ನು ಇಚ್ಛೆ ಪ್ರಕಾರ ಮಾಡಲು ಸಾಧ್ಯವಾಗುತ್ತದೆ ಮತ್ತು ಹೋಲೊಗ್ರಾಮ್ ತಂತ್ರಜ್ಞಾನವನ್ನು ಬಳಸಿಕೊಂಡು ಬೀಮ್ ಕ್ರೀಡಾ ಕಾರ್ಯಕ್ರಮ ಗಳನ್ನು ಸಹ ಲೈವ್ ಮಾಡುವುದು ಸಾಧ್ಯವಾಗಲಿದೆ. ಸ್ಯಾಮ್ಂಗ್ 2020ರಲ್ಲಿ ಪ್ರಕಟಿಸಿದ 6ಜಿ ಕುರಿತಾದ ಶ್ವೇತಪತ್ರದಲ್ಲಿ (‘ಎಲ್ಲರಿಗೂ ಮುಂದಿನ ಹೈಪರ್- ಕನೆಕ್ಟೆಡ್ ಅನುಭವ’), 6ಜಿ ತಂತ್ರಜ್ಞಾನದ ವಾಣಿಜ್ಯ ಬಳಕೆ 2028ರ ವೇಳೆಗೆ ಶುರುವಾಗಬಹುದು ಎಂದು ಹೇಳಲಾಗಿತ್ತು. ಆದರೆ, ಇದು 2030ರ ವೇಳೆಗೆ ಕಾರ್ಯ ಸಾಧುವಾದೀತು ಎಂದು ಪರಿಣತರು ಹೇಳಿದ್ದಾರೆ. 6ಜಿ ಸೇವೆ ಬಂದಾಗ ಮೊಬೈಲ್ ಹೋಲೊಗ್ರಾಮ್ ಮುಂತಾದ ಅನೇಕ ಸೇವೆಗಳು ಗ್ರಾಹಕರಿಗೆ ಸಿಗಲಿದೆ.

    ಶಾಪಿಂಗ್ ಕಾಂಪ್ಲೆಕ್ಸ್​ನಿಂದ ಕೆಳಕ್ಕೆ ಬಿದ್ದ ಪ್ರೇಮಿಗಳು; ಯುವತಿ ಸಾವು, ಯುವಕ ಬಚಾವ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts