ಹೊಸ ಲಕ್ಷುರಿ ಕಾರಿನ ಫ್ಯಾನ್ಸಿ ನಂಬರ್​ಗೆ Jr. NTR ಖರ್ಚು ಮಾಡಿದ ಹಣದ ಮೊತ್ತ ಕೇಳಿದ್ರೆ ದಂಗಾಗ್ತೀರಾ..!

NTR
Published on

ಹೈದರಾಬಾದ್​: ಟಾಲಿವುಡ್​ ಸೂಪರ್​ ಸ್ಟಾರ್​ ಜೂನಿಯರ್​ ಎನ್​ಟಿಆರ್ ಅವರು​ ಕೆಲ ವಾರಗಳ ಹಿಂದಷ್ಟೇ ಲ್ಯಾಂಬೋರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಹೆಸರಿನ ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ.

ಈ ಐಷಾರಾಮಿ ಕಾರನ್ನು ಖರೀದಿಸಿದ ಭಾರತದ ಮೊದಲ ಗ್ರಾಹಕರೆಂಬ ಖ್ಯಾತಿಗೆ ಎನ್​ಟಿಆರ್​ ಪಾತ್ರರಾಗಿರುವುದು ಬಹುತೇಕರಿಗೆ ತಿಳಿಯದ ಸಂಗತಿ. ಈಗಾಗಲೇ ಹಲವು ಐಷಾರಾಮಿ ಕಾರುಗಳ ಒಡೆಯರಾಗಿರುವ ಎನ್​ಟಿಆರ್​, ಇದೀಗ ಮತ್ತೊಂದು ದುಬಾರಿ ಕಾರನ್ನು ಖರೀದಿಸುವ ಮೂಲಕ ಹಲವರ ಹುಬ್ಬೇರಿಸಿದ್ದಾರೆ.

ಇದೀಗ ಎನ್​ಟಿಆರ್​ ಮಾಡಿರುವ ಮತ್ತೊಂದು ಕೆಲಸದ ಬಗ್ಗೆ ತಿಳಿದರೆ ಎಲ್ಲರಿಗೂ ಎಚ್ಚರಿಯಾಗುವುದು ಖಂಡಿತ. ಕಾರಿನ ನೋಂದಣಿಗೆ ಬರೋಬ್ಬರಿ 17 ಲಕ್ಷ ರೂಪಾಯಿಯನ್ನು ಎನ್​ಟಿಆರ್​ ಖರ್ಚು ಮಾಡಿದ್ದಾರೆ. ಕೇವಲ ವಾಹನ ನೋಂದಣಿಗೆ ಅಷ್ಟೊಂದು ದುಡ್ಡಾಯ್ತಾ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು, ಅದಕ್ಕೆ ಉತ್ತರ ಮುಂದಿದೆ ನೋಡಿ.

ಎನ್​ಟಿಆರ್​ ಅವರ ಎಲ್ಲಾ ವಾಹನಗಳು 9999 ಸಂಖ್ಯೆಯನ್ನು ಹೊಂದಿದ್ದು, ಈ ನಂಬರ್​ ಮೇಲೆ ಅವರಿಗೆ ವಿಶೇಷ ಸೆಂಟಿಮೆಂಟ್​ ಇದೆ. ಹೀಗಾಗಿ ಅದೇ ರೀತಿಯ ನಂಬರ್​ ಪಡೆಯಲು ಇಷ್ಟೊಂದು ಹಣವನ್ನು ಎನ್​ಟಿಆರ್​ ಖರ್ಚು ಮಾಡಿದ್ದಾರೆ. 17 ಲಕ್ಷ ರೂ. ಖರ್ಚು ಮಾಡುವ ಮೂಲಕ ತಮ್ಮ ಐಷಾರಾಮಿ ಕಾರಿಗೆ "TS09 FS 9999’ ನಂಬರ್​ ಅನ್ನು ಎನ್​ಟಿಆರ್​ ಪಡೆದುಕೊಂಡಿದ್ದಾರೆ.

ಇನ್ನು ತೆಲಂಗಾಣದ ಸಾರಿಗೆ ಇಲಾಖೆ ಫ್ಯಾನ್ಸಿ ನಂಬರ್ ಹರಾಜಿನ​ ಮೂಲಕವೇ ತಿಂಗಳಿಗೆ 45 ಲಕ್ಷ ರೂ. ಆದಾಯವನ್ನು ಹೊಂದಿದೆ. ಇದೀಗ ಎನ್​ಟಿಆರ್​ 17 ಲಕ್ಷ ರೂ. ಕೊಟ್ಟಿರುವುದು ಹಲವರ ಹುಬ್ಬೇರಿಸಿದೆ. ಹಾಗೇ ಜಾಲತಾಣದಲ್ಲಿ ಟೀಕೆಗೂ ಗುರಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net