ಯುವತಿಯರು ಮಾತ್ರವಲ್ಲ ಯುವಕರ ಮೇಲೂ ಲೈಂಗಿಕ ದೌರ್ಜನ್ಯಗಳಾಗಿವೆ: ಯುವನಟಿಯ ಸ್ಫೋಟಕ ಹೇಳಿಕೆ

Malayalam Cinema
Published on

ತಿರುವನಂತಪುರಂ: ನಿರ್ಮಾಪಕ ಹಾಗೂ ನಟ ವಿಜಯ್​ ಬಾಬು​ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಯುವ ನಟಿ, ಮಲಯಾಳಂ ಸಿನಿ ರಂಗದಲ್ಲಿನ ಕರ್ಮಕಾಂಡವನ್ನು ಮಾಧ್ಯಮ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾಳೆ.

ಕೇವಲ ಯುವತಿಯರು ಮಾತ್ರವಲ್ಲ ಮಲಯಾಳಂ ಚಿತ್ರರಂಗದಲ್ಲಿ ಯುವಕರು ಕೂಡ ಲೈಂಗಿಕ ಶೋಷಣೆಗೆ ಒಳಗಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅನೇಕ ಯುವಕರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ತಮ್ಮ ಗೌರವ ಹಾಳಾಗುತ್ತದೆ ಎಂದು ಯಾರು ತಮ್ಮ ಮೇಲಿನ ಶೋಷಣೆಯನ್ನು ಬಹಿರಂಗಪಡಿಸುತ್ತಿಲ್ಲ ಎಂದು ಸಂತ್ರಸ್ತ ಯುವ ನಟಿ ಹೇಳಿದ್ದಾರೆ.

ಎಲ್ಲರು ಕೆಟ್ಟವರು ಅಂತ ನಾನು ಹೇಳುತ್ತಿಲ್ಲ. ಸಿನಿ ರಂಗದಲ್ಲಿ ಅನೇಕ ಒಳ್ಳೆಯ ಜನರು ಕೂಡ ಇದ್ದಾರೆ. ಆದರೆ, ಕೆಲವು ನೀಚ ಜನರು ಇಂಡಸ್ಟ್ರಿಗೆ ಕೆಟ್ಟ ಹೆಸರನ್ನು ತರುತ್ತಿದ್ದಾರೆ. ಅವರ ಮುಖವಾಡವನ್ನು ಕಳಚಲೇಬೇಕು ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net