VIDEO| ಬರಿಗೈಯಲ್ಲಿ ಬಾಲಕಿಯರ ಶಾಲೆಯ ಟಾಯ್ಲೆಟ್ ತೊಳೆದ ಬಿಜೆಪಿ ಸಂಸದ! ವಿಡಿಯೋ​ ವೈರಲ್​

BJP MP
Published on

ಭೋಪಾಲ್​: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿರುವ ಬಾಲಕಿಯರ ಶಾಲೆಯ ಟಾಯ್ಲೆಟ್​ ಅನ್ನು ಬಿಜೆಪಿ ಸಂಸದ ಜನಾರ್ದನ್​ ಮಿಶ್ರಾ ಅವರು ಬರಿಗೈಯಲ್ಲಿ ಶುಚಿಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸ್ವತಃ ಸಂಸದರೇ ವಿಡಿಯೋವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಯುವ ಮೊರ್ಚಾ ಸೇವಾ ಪಾಖವಾಡ ಅಭಿಯಾನದ ಭಾಗವಾಗಿ ಬಿಜೆಪಿ ಯುವ ಘಟಕವು ಖಟ್ಖಾರಿ ಬಾಲಕಿಯರ ಶಾಲೆಯಲ್ಲಿ ಟಾಯ್ಲೆಟ್​ಗಳನ್ನು ಶುಚಿಗೊಳಿಸಿತು ಎಂದು ಬರೆದುಕೊಂಡಿದ್ದಾರೆ.

ಬಿಜೆಪಿ ಸಂಸದರು ಬಿಜೆಪಿ ಯುವ ಘಟಕದ ಅಭಿಯಾನದಲ್ಲಿ ಭಾಗವಹಿಸಲು ಶಾಲೆಗಳಿಗೆ ಭೇಟಿ ನೀಡಿದಾಗ, ಕೊಳಕು ಟಾಯ್ಲೆಟ್​ ಅನ್ನು ಗಮನಿಸಿದ ಅವರು ತಮ್ಮ ಕೈಗಳನ್ನು ಬಳಸಿ ಅದನ್ನು ಸ್ವಚ್ಛಗೊಳಿಸಲು ನಿರ್ಧರಿಸಿದರು.

ಈ ಬಗ್ಗೆ ಮಾಧ್ಯಮದ ಜೊತೆ ಮಾಡಿರುವ ಅವರು, ನಾನು ಶಾಲೆಗೆ ಭೇಟಿ ನೀಡಿದಾಗ ಟಾಯ್ಲೆಟ್​ ಕೊಳಕಾಗಿರುವುದನ್ನು ನೋಡಿದೆ. ಹಾಗಾಗಿ, ನಾನು ಅದನ್ನು ಸ್ವಚ್ಛಗೊಳಿಸಿದೆ. ಇದು ದೊಡ್ಡ ವಿಷಯವಲ್ಲ ಎಂದು ಹೇಳಿದ್ದಾರೆ.

ಸದ್ಯ ಸಂಸದರು ಟಾಯ್ಲೆಟ್​ ಶುಚಿಗೊಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net