More

    ನಯನತಾರಾ-ವಿಘ್ನೇಶ್​ ಅದ್ಧೂರಿ ಮದ್ವೆಯ ಸಣ್ಣ ಝಲಕ್​ ಬಿಡುಗಡೆ ಮಾಡಿದ ನೆಟ್​ಫ್ಲಿಕ್ಸ್: ವೈರಲ್​ ಆಯ್ತು ವಿಡಿಯೋ

    ಚೆನ್ನೈ: ಲೇಡಿ ಸೂಪರ್​ಸ್ಟಾರ್​ ನಯನತಾರಾ ಮತ್ತು ಸ್ಟಾರ್​ ನಿರ್ದೇಶಕ ವಿಘ್ನೇಶ್​ ಶಿವನ್,​ ಕಳೆದ ಜೂನ್​ 9ರಂದು ಸಪ್ತಪದಿ ತುಳಿದರು. ಈ ವೇಳೆ ಒಪ್ಪಂದದಂತೆ ಅವರ ವಿವಾಹ ಸಮಾರಂಭದ ಸಂಪೂರ್ಣ ಚಿತ್ರಣವನ್ನು ಓಟಿಟಿ ಪ್ಲಾಟ್​ಫಾರ್ಮ್​ ನೆಟ್​ಫ್ಲಿಕ್ಸ್​ ಸೆರೆಹಿಡಿದಿತ್ತು. ಇದೀಗ ತಾರಾದಂಪತಿಯ ಅದ್ಧೂರಿ ವಿವಾಹವನ್ನು ತೆರೆಯ ಮೇಲೆ ತರಲು ಎಲ್ಲ ಸಿದ್ಧತೆ ಮಾಡಿಕೊಂಡಿರುವ ನೆಟ್​ಫ್ಲಿಕ್ಸ್​, ಸಣ್ಣ ಟೀಸರ್​ ಒಂದನ್ನು ಬಿಡುಗಡೆ ಮಾಡಿದೆ.

    ಟೀಸರ್​ ಬಿಡುಗಡೆ ಮಾಡಿರುವ ನೆಟ್​ಫ್ಲಿಕ್ಸ್​ ಅದಕ್ಕೆ “ನಯನತಾರಾ: ಕಾಲ್ಪನಿಕ ಕಥೆಯ ಆಚೆಗೆ” ಎಂಬ ಶೀರ್ಷೀಕೆಯನ್ನು ನೀಡಿದೆ. ಒಂದು ನಿಮಿಷದ ಟೀಸರ್​ನಲ್ಲಿ ಮದುವೆಯ ತಯಾರಿಯನ್ನು ತೋರಿಸಲಾಗಿದೆ. ಅಲ್ಲದೆ, ನಯನಾ ಮತ್ತು ವಿಘ್ನೇಶ್​ ಅವರ ಸಂದರ್ಶನದ ತುಣುಕು ಸಹ ಇದೆ. ಮದುವೆ ನಂತರ ಮಾಧ್ಯಮ ಸಂದರ್ಶನ, ಸಾಮಾಜಿಕ ಜಾಲತಾಣ ಹಾಗೂ ಸಿನಿಮಾ ಪ್ರಚಾರಗಳಿಂದ ಅಂತರ ಕಾಯ್ದುಕೊಂಡಿದ್ದ ನಯನಾ, ಇದೀಗ ನೆಟ್​ಫ್ಲಿಕ್ಸ್​ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದು, ಸಾಕಷ್ಟು ಕುತೂಹಲ ಮೂಡಿಸಿದ್ದಾರೆ.

    ಟೀಸರ್​ನಲ್ಲಿ ವಿಘ್ನೇಶ್ ಮತ್ತು ನಯನಾ ಕೈ ಕೈ ಹಿಡಿದು ನಡೆಯುವುದು, ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದು ಮತ್ತು ತಮ್ಮ ಮದುವೆಗೆ ತಯಾರಾಗುತ್ತಿರುವುದನ್ನು ತೋರಿಸುತ್ತದೆ.

    ಸದ್ಯ ಟೀಸರ್​ ವೈರಲ್​ ಆಗಿದ್ದು, ಯಾವಾಗ ಬಿಡುಗಡೆ ಆಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ, ನೆಟ್‌ಫ್ಲಿಕ್ಸ್ ಟೀಸರ್​​ ಅಷ್ಟೇ ಬಿಡುಗಡೆ ಮಾಡಿದ್ದು, ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿಲ್ಲ. ಬಹುಶಃ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಅಂದಹಾಗೆ ಜೂನ್​ 9ರಂದು ಮಹಾಬಲಿಪುರಂನ ರೆಸಾರ್ಟ್​ ಒಂದರಲ್ಲಿ ಶಾಸ್ತ್ರೋಕ್ತವಾಗಿ ನಡೆದ ಕಾರ್ಯಕ್ರಮದಲ್ಲಿ ನಯನಾ ಮತ್ತು ವಿಘ್ನೇಶ್​ ಹಸಮಣೆ ಏರಿದರು. ಇಡೀ ಮದುವೆಗೆ ನೆಟ್​ಫ್ಲಿಕ್ಸ್​ ಹಣ ಖರ್ಚು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಮದುವೆಗೆ ಬಂದ ಅತಿಥಿಗಳಿಗೆ ಕೊಠಡಿಗಳು, ಕಾರ್ಯಕ್ರಮದ ಅಲಂಕಾರ, ವಧು-ವರರ ಮೇಕಪ್​, ಭದ್ರತೆ ಸೇರಿದಂತೆ ಬಹುತೇಕ ವ್ಯವಸ್ಥೆಯನ್ನು ನೆಟ್​​ಫ್ಲಿಕ್ಸ್​ ಮಾಡಿತ್ತು. ಗಮನಾರ್ಹ ಸಂಗತಿಯೆಂದರೆ, ಪ್ರತಿ ಊಟಕ್ಕೆ 3500 ಸಾವಿರ ರೂಪಾಯಿಯಂತೆ ಮದುವೆ ಬಂದ ಅತಿಥಿಗಳಿಗೆಲ್ಲ ನೆಟ್​ಫ್ಲಿಕ್ಸ್​ ಊಟದ ವ್ಯವಸ್ಥೆಯನ್ನೂ ಮಾಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ. (ಏಜೆನ್ಸೀಸ್​)

    ಅದ್ಧೂರಿ ಮದ್ವೆಗೆ ಒಂದು ನಯಾಪೈಸೆ ಖರ್ಚು ಮಾಡದೆ ಕೋಟಿ ಕೋಟಿ ಸಂಪಾದಿಸಿದ ನಯನಾ-ವಿಘ್ನೇಶ್!​

    1 ಪೈಸೆ ಖರ್ಚು ಮಾಡದೇ ಅದ್ಧೂರಿ ಮದ್ವೆಯಾದ ನಯನತಾರಾ-ವಿಘ್ನೇಶ್​ಗೆ ತಿಂಗಳ ಬಳಿಕ ಬಿಗ್​ ಶಾಕ್​! ​

    ಬಿಜೆಪಿ ನಾಯಕನ ಪುತ್ರನಿಂದ ಯುವತಿ ಕೊಲೆ: ಮರಣೋತ್ತರ ವರದಿಯಲ್ಲಿ ಸ್ಫೋಟಕ ರಹಸ್ಯ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts