More

    ನವರಾತ್ರಿ ವೈಭವ ಆರಂಭ: ಇಂದು ಮೈಸೂರು ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಗಳು ಪಟ್ಟಿ ಹೀಗಿದೆ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ನವರಾತ್ರಿ ವೈಭವ ಆರಂಭವಾಗಿದೆ. 411ನೇ ದಸರಾಗೆ ಇಂದು ಚಾಲನೆ ದೊರೆಯಲಿದ್ದು, ಅರಮನೆಯಲ್ಲಿ ಇಂದಿನಿಂದ ಸಂಪ್ರದಾಯಿಕ ದಸರಾ ಆಚರಣೆ ನಡೆಯಲಿದೆ.

    ನವರಾತ್ರಿ ಮೊದಲ ದಿನ ಅರಮಣೆಯಲ್ಲಿ ನಡೆಯುವ ಕಾರ್ಯಕ್ರಮಗಳು ಹೀಗಿವೆ… ಇಂದು ಮುಂಜಾನೆ 4.30 ರಿಂದಲೇ ಪೂಜಾ-ಕೈಂಕರ್ಯಗಳು ಆರಂಭವಾಗಿದೆ. ಬೆಳಗ್ಗೆ 6 ರಿಂದ 6.11ರ ವರೆಗೆ ದರ್ಬಾರ್ ಹಾಲ್‌ನ ಸಿಂಹಾಸನಕ್ಕೆ ಸಿಂಹದ ತಲೆ ಜೋಡಣೆ ಮಾಡಲಾಗಿದೆ. 6.30ರಿಂದ 7.30ರ ವರೆಗೆ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ಕಳಶ ತರಲಾಗುವುದು. 7.45ರಿಂದ 8.55ರ ವೇಳೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್‌ಗೆ ಕಂಕಣ ಧಾರಣೆ ಮಾಡಲಾಗುತ್ತದೆ.

    9 ರಿಂದ 9.30 ರವರೆಗೆ ಪಟ್ಟದ ಆನೆ, ಹಸು, ಒಂಟೆ, ಕುದುರೆಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. 11.45ರಿಂದ 12.15ರ ನಡುವೆ ಸಿಂಹಾಸನಾರೋಹಣ ಮಾಡಿ ಯದುವೀರ್​ ಖಾಸಗಿ ದರ್ಬಾರ್ ಮಾಡಲಿದ್ದಾರೆ. ಕೋವಿಡ್ ಕಾರಣದಿಂದ ಈ ಬಾರಿ ಸರಳವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ಧಾರ್ಮಿಕ ಪೂಜೆಗೂ ಕೆಲವರಿಗಷ್ಟೆ ಅವಕಾಶ ನೀಡಲಾಗಿದೆ. ಮಾಧ್ಯಮಗಳಿಗು ನಿರ್ಬಂಧ ಹೇರಲಾಗಿದೆ. (ದಿಗ್ವಿಜಯ ನ್ಯೂಸ್​)

    ನಾಡಿನೆಲ್ಲೆಡೆ ನವರಾತ್ರಿ; ಗತ ವೈಭವದ ಪ್ರತೀಕ ಮೈಸೂರು ದಸರಾ

    ಸ್ತ್ರೀಗೌರವದ ಶರನ್ನವರಾತ್ರಿ: ವಿಜಯವಾಣಿ ಕ್ಲಬ್‌ನಲ್ಲಿ ದೈವಜ್ಞ ಕೆ.ಎನ್. ಸೋಮಯಾಜಿ..

    ಬೆಲೆ ಜಿಗಿತ ಬದುಕು ಭಾರ | ತೈಲ, ಎಲ್ಪಿಜಿ, ಆಹಾರ, ಕಟ್ಟಡ ಸಾಮಗ್ರಿ, ಬಟ್ಟೆ ಎಲ್ಲವೂ ತುಟ್ಟಿ

    ದಕ್ಷಿಣದತ್ತ ಜಾಕ್​ಲೀನ್ ಫರ್ನಾಂಡೀಸ್; ಎರಡು ತೆಲುಗು ಚಿತ್ರಗಳಲ್ಲಿ ನಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts