ಕಬಡ್ಡಿ ಕಲಿಸೋ ನೆಪದಲ್ಲಿ ಬಾಲಕಿಯರನ್ನು ಜಮೀನಿಗೆ ಕರೆದೊಯ್ಯುತ್ತಿದ್ದ ತಂದೆ-ಮಗ: ಬೆಚ್ಚಿಬೀಳಿಸುತ್ತೆ ಇವರ ಕೃತ್ಯ!

Girl Land
Published on

ವಿಶಾಖಪಟ್ಟಣ: ಕಬಡ್ಡಿ ಹೇಳಿಕೊಡುವ ನೆಪದಲ್ಲಿ ತಂದೆ-ಮಗ ಇಬ್ಬರು ಸೇರಿಕೊಂಡು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿಗಳನ್ನು ತಂದೆ ಮೆರುಗು ಬಪಯ್ಯ ಹಾಗೂ ಮಗ ನಕರಾಜು ಎಂದು ಗುರುತಿಸಲಾಗಿದೆ. ತಂದೆ-ಮಗ ವಿಶಾಖಪಟ್ಟಣ ಜಿಲ್ಲೆಯ ಅಚುತಾಪುರಂ ವಲಯದ ಪುಡಿ ಮಡಕ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಡಪಲಂ ಗ್ರಾಮದ ನಿವಾಸಿಗಳಾಗಿದ್ದಾರೆ. ನಕರಾಜು ಅಪ್ರಾಪ್ತೆಯರನ್ನು ಹತ್ತಿರದ ಜಮೀನಿನ ಬಳಿ ಕರೆದೊಯ್ದು ಅತ್ಯಾಚಾರ ಎಸಗುತ್ತಿದ್ದ ಎಂದು ತಿಳಿದುಬಂದಿದೆ. ಊಟ ಮತ್ತು ಹಣ ನೀಡುವುದಾಗಿ ಹೇಳಿ ತಂದೆ ಬಪಯ್ಯ ಸಹ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ.

ತಂದೆ-ಮಗನ ನಡುವಳಿಕೆಯಿಂದ ಬೆದರಿದ್ದ ಅಪ್ರಾಪ್ತೆಯರು ನಡೆದ ಘಟನೆಯನ್ನು ಪಾಲಕರು ಬಳಿ ಹೇಳಿಕೊಂಡಿದ್ದರು. ಬಳಿಕ ಪಾಲಕರು ಅಚುತಾಪುರಂ ಠಾಣೆಗೆ ತೆರಳಿ ಸೋಮವಾರ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳಾದ ಬಪಯ್ಯ ಮತ್ತು ನಕರಾಜು ತಲೆಮರೆಸಿಕೊಂಡಿದ್ದಾರೆ.

ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತೆಯರನ್ನು ವೈದ್ಯಕೀಯ ತಪಾಸಣೆಗಾಗಿ ಅನಕಪಲ್ಲಿ ಏರಿಯಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಕ್ಸೊ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಲಾಗಿದ್ದು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net