ವಿರಾಮದ ವೇಳೆ ಜವರಾಯನ ಅಟ್ಟಹಾಸ: ಮಂಗಳೂರು ಮೂಲದ ಮಲಯಾಳಿ ವೈದ್ಯೆ ಪುಣೆಯಲ್ಲಿ ದುರ್ಮರಣ

Malayali Doctor
Published on

ಪುಣೆ: ಮಂಗಳೂರು ಮೂಲದ ಮಲಯಾಳಿ ವೈದ್ಯೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪುಣೆ ಬಳಿಯಿರುವ ಪಿಂಪ್ರಿಯಲ್ಲಿ ಮಂಗಳವಾರ ನಡೆದಿದೆ.

ಮೃತ ವೈದ್ಯೆಯನ್ನು ಜೈಶಾ (27) ಎಂದು ಗುರುತಿಸಲಾಗಿದೆ. ಮಂಗಳೂರು ಮೂಲದ ಜಾನ್​ ಥಾಮಸ್​ ಮತ್ತು ಉಷಾ ಥಾಮಸ್​ ದಂಪತಿಯ ಪುತ್ರಿಯಾದ ಜೈಶಾ, ರಿಮಿನ್​ ಆರ್​ ಕುರಿಯಾಕೋಸ್ ಎಂಬುವರನ್ನು ಮದುವೆ ಆಗಿದ್ದರು.

ಜೈಶಾ ಅವರು ಮಂಗಳವಾರ ಮಧ್ಯಾಹ್ನದ ವಿರಾಮದ ಸಮಯದಲ್ಲಿ ಮನೆಗೆ ತೆರಳಿ, ಊಟ ಮುಗಿಸಿಕೊಂಡು ಕ್ಲಿನಿಕ್​ಗೆ ಹಿಂದಿರುಗುತ್ತಿದ್ದರು. ಈ ವೇಳೆ ಜೈಶಾ ಅವರ ಸ್ಕೂಟರ್​ಗೆ ಟ್ರಕ್​ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಸ್ಥಳದಲ್ಲೇ ಜೈಶಾ ಮೃತಪಟ್ಟಿದ್ದಾರೆ.

ಘಟನೆಯ ಬಳಿಕ ಮೃತದೇಹವನ್ನು ಪುಣೆಯಲ್ಲಿರುವ ಮನೆಗೆ ತೆಗೆದುಕೊಂಡು ಹೋಗಲಾಯಿತು. ಬಳಿಕ ಅಲ್ಲಿಂದ ಮಂಗಳೂರಿಗೆ ಸ್ಥಳಾಂತರ ಮಾಡಲಾಯಿತು. ಮಂಗಳೂರಿನ ಜೆಪ್ಪುವಿನ ಸೆಂಟ್ ಆಂಟೋನಿ ಜಾಕೋಬೈಟ್ ಸಿರಿಯನ್ ಕೆಥೆಡ್ರಲ್‌ನ ಸ್ಮಶಾನದಲ್ಲಿ ಬುಧವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಿತು. ಮಗಳನ್ನು ಕಳೆದುಕೊಂಡ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net