More

    ಹಾಟ್​ ವಿಡಿಯೋ ಹರಿಬಿಟ್ಟು ಅಭಿಮಾನಿ ಮನಸ್ಸಿಗೆ ನೋವುಂಟು ಮಾಡಿದ ಮಲಯಾಳಿ ಬ್ಯೂಟಿ ಮೀರಾ ಜಾಸ್ಮಿನ್!

    ಕೊಚ್ಚಿ: ಮಲಯಾಳಂ ಬ್ಯೂಟಿ ಮೀರಾ ಜಾಸ್ಮಿನ್​ ಯಾರಿಗೆ ತಾನೇ ಗೊತ್ತಿಲ್ಲ. ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಜಾಸ್ಮಿನ್​ ಕಾಲಾನಂತರದಲ್ಲಿ ಕಣ್ಮರೆಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿಯೂ ಅವರ ಉಪಸ್ಥಿತಿ ಇರಲಿಲ್ಲ. ಜಾಸ್ಮಿನ್​ ಎಲ್ಲಿ ಹೋದರು ಎಂದು ಬಹುತೇಕರು ಹುಡುಕಾಟ ನಡೆಸುತ್ತಿದ್ದರು. ಮದುವೆ ಬಳಿಕ ಚಿತ್ರರಂಗದಿಂದ ದೂರಾಗಿದ್ದ ಜಾಸ್ಮಿನ್​, ಕಳೆದ ಜನವರಿಯಲ್ಲಿ ಇನ್​ಸ್ಟಾಗ್ರಾಂಗೆ ಎಂಟ್ರಿ ನೀಡಿದ್ದರು.

    ಜ.20ರಂದು ಇನ್​ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದ ಮೀರಾ ಜಾಸ್ಮಿನ್​ ಇನ್ನು ಮುಂದೆ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಹೇಳಿಕೊಂಡಿದ್ದರು. ಅಭಿಮಾನಿಗಳಿಗೂ ಇದು ಖುಷಿಯಾಗಿತ್ತು. ಅಂದಿನಿಂದ ನಿರಂತರವಾಗಿ ಫೋಟೋ ಮತ್ತು ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

    ಇದೀಗ ಹಾಟ್​ ವಿಡಿಯೋವೊಂದನ್ನು ಮೀರಾ, ಇನ್​ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ. ಎದೆ ಸೀಳು ಕಾಣುವಂತಹ ಗೌನ್​​ ಧರಿಸಿ ತೂಗುಯ್ಯಾಲೆ ಮೇಲೆ ಕುಳಿತು ಕ್ಯಾಮೆರ ಎದುರು ಮಾದಕ ನೋಟವನ್ನು ಬೀರಿದ್ದಾರೆ. ಮೀರಾ ಅವರ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಈಗಾಗಲೇ 19 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿದ ಅನೇಕರು ಮೀರಾ ಅವರ ಹಾಟ್​ ಅವತಾರಕ್ಕೆ ಬೋಲ್ಡ್​ ಆಗಿ ಕಾಮೆಂಟ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಹಿಂದಿನಿಂದಲೂ ಮೀರಾ ಅವರನ್ನು ಸಾಂಪ್ರದಾಯಕ ಹುಡುಗಿ ಪಾತ್ರದಲ್ಲಿ ನೋಡಿದವರು ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

    ಹಾಟ್​ ವಿಡಿಯೋ ಹರಿಬಿಟ್ಟು ಅಭಿಮಾನಿ ಮನಸ್ಸಿಗೆ ನೋವುಂಟು ಮಾಡಿದ ಮಲಯಾಳಿ ಬ್ಯೂಟಿ ಮೀರಾ ಜಾಸ್ಮಿನ್!

    ಈ ಹಿಂದೊಮ್ಮೆ ಮೀರಾ​ ಅವರು ಶಾಪಿಂಗ್​ ಮಾಡುವ ವೇಳೆ ದಿಢೀರ್​ ಪ್ರತ್ಯಕ್ಷರಾಗಿದ್ದರು. ಆ ವೇಳೆ ಅವರು ತುಂಬಾ ದಪ್ಪವಾಗಿದ್ದರು. ಇದೀಗ ಸ್ಲಿಮ್​ ಆಗಿ ಕಾಣುತ್ತಿರುವ ಮೀರಾ​​ ಮತ್ತೆ ತಮ್ಮ ಮಾದಕ ನೋಟವನ್ನು ಬೀರಿದ್ದಾರೆ. ಮೀರಾ ಅವರು 2014ರಲ್ಲಿ ಅನಿಲ್​ ಜಾನ್​ ಟಿಟನ್​ ಎಂಬುವರನ್ನು ಮದುವೆಯಾಗಿದ್ದಾರೆ. ಅವರ ಪತಿ ದುಬೈನಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದಾರೆ. 2016ರಲ್ಲೇ ಸಿನಿಮಾ ಕ್ಷೇತ್ರದಿಂದ ಅಂತರ ಕಾಯ್ದುಕೊಂಡರು. ಮದುವೆಯಾಗಿದ್ದರೂ ಮಾನಸಿಕ ಸಮಸ್ಯೆಯಿಂದ ಮೀರಾ​​ ತಮ್ಮ ಪತಿಯಿಂದ ಬೇರೆಯಾಗಿದ್ದಾರೆ. ಮತ್ತೆ ಸಿನಿಮಾ ಕಡೆ ಒಲವು ತೋರಿಸಿರುವ ಮೀರಾ​, ಸಿಕ್ಕಾಪಟ್ಟೆ ಬೋಲ್ಡ್​ ಫೋಟೋಗಳನ್ನು ಹರಿಬಿಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಮಲಯಾಳಂ ಸಿನಿಮಾವೊಂದನ್ನು ಘೋಷಣೆ ಮಾಡಿದ್ದಾರೆ. ಆಫರ್​ಗಳು ಬಂದರೆ ಎಲ್ಲ ಭಾಷೆಯಲ್ಲೂ ನಟಿಸುವುದಾಗಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಪರಿವರ್ತನೆಗೆ ಈ ವಿಡಿಯೋ ನೋಡಿ ಎಂದು ಒಳ ಉಡುಪುಗಳನ್ನು ಪ್ರದರ್ಶಿಸಿದ ನಟಿ ಯಶಿಕಾ! ವಿಡಿಯೋ ವೈರಲ್​​

    ಟೈಲರಿಂಗ್​ ಕಲಿಯಲು ಬಂದ ಬಾಲಕಿಯ ಪ್ರಜ್ಞೆ ತಪ್ಪಿಸಿ ಮಾಡಬಾರದ್ದು ಮಾಡಿ ಕಾಮುಕರಿಂದ ಹಣ ಪೀಕುತಿದ್ದ ಮಹಿಳೆ

    ಸಹಾಯ ಕೇಳಿದ ನಶೆಯಲ್ಲಿದ್ದ ಯುವತಿಗೆ ಕ್ಯಾಬ್​​ ಚಾಲಕ ಹೀಗಾ ಮಾಡೋದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts