More

    ನಿನ್ನ ರೇಟ್​ ಎಷ್ಟು ಎಂದು ಕೇಳಿದ ವಿಜಯ್​ ದೇವರಕೊಂಡ ಫ್ಯಾನ್ಸ್​ಗೆ ಅನಸೂಯ ಕೊಟ್ಟ ತಿರುಗೇಟು ಹೀಗಿತ್ತು…

    ಹೈದರಾಬಾದ್​: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್​ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್​ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್​ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ತಮ್ಮ ವಿರುದ್ಧದ ಕಾಮೆಂಟ್​ಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ. ಅದೇ ರೀತಿ ಇದೀಗ ಟಾಲಿವುಡ್​ನ ಜನಪ್ರಿಯ ನಟಿ ಮತ್ತು ನಿರೂಪಕಿ ಅನುಸೂಯ ಭಾರದ್ವಾಜ್ ವಿಜಯ್​ ದೇವರಕೊಂಡ ಅಭಿಮಾನಿಗಳ ಕಾಮೆಂಟ್​ಗೆ ತಿರುಗೇಟು ನೀಡಿದ್ದಾರೆ.

    ವಿಜಯ್​ ದೇವರಕೊಂಡ ನಟನೆಯ ಬಹುನಿರೀಕ್ಷಿತ ಲೈಗರ್​ ಸಿನಿಮಾ ಆಗಸ್ಟ್​ 25ರಂದು ಬಿಡುಗಡೆಯಾಯಿತು. ಆದರೆ, ಸಿನಿಮಾ ಬಗ್ಗೆ ಎಲ್ಲೆಡೆ ಕಳಪೆ ಪ್ರತಿಕ್ರಿಯೆ ಬಂದಿತು. ಇದರ ಬೆನ್ನಲ್ಲೇ ನಟ ವಿಜಯ್​ ದೇವರಕೊಂಡ ವಿರುದ್ಧ ಅನಸೂಯಾ ಅವರು ಮಾರ್ಮಿಕವಾಗಿ ಟ್ವೀಟ್​ ಮಾಡಿದ್ದರು. ಅರ್ಜುನ್​ ರೆಡ್ಡಿ ಸಿನಿಮಾದಲ್ಲಿ ವಿಜಯ್,​ ಮಹಿಳೆಯನ್ನು ನಿಂದಿಸಿದ್ದರ ಕರ್ಮದ ಫಲವೇ ಲೈಗರ್​ ಸಿನಿಮಾ ಸೋಲು ಎನ್ನುವ ರೀತಿಯಲ್ಲಿ ಪರೋಕ್ಷವಾಗಿ ವಿಜಯ್​ಗೆ ಟಾಂಗ್​ ನೀಡಿದ್ದರು.

    ತಾಯಿಯ ನೋವು ಮಾಯವಾಗುವುದಿಲ್ಲ. ಕರ್ಮವು ಕೆಲವೊಮ್ಮೆ ಬರೋದು ಕಷ್ಟ. ಆದರೆ, ಖಂಡಿತ ಬಂದೇ ಬರುತ್ತದೆ. ಇನ್ನೊಬ್ಬರ ದುಃಖದಲ್ಲಿ ನನಗೆ ಸಂತೋಷವಾಗಿಲ್ಲ ಆದರೆ, ನಂಬಿಕೆ ಮರುಸ್ಥಾಪಿಸಲಾಗಿದೆ ಎಂದು ಅನುಸೂಯ ಟ್ವೀಟ್​ ಮಾಡಿದ್ದರು. ಇದರ ಬೆನ್ನಲ್ಲೇ ಅನಸೂಯ ವಿರುದ್ಧ ವಿಜಯ್​ ಅಭಿಮಾನಿಗಳು ಜಾಲತಾಣದಲ್ಲಿ ಕೆಂಡಕಾರಲು ಆರಂಭಿಸಿದರು ಮತ್ತು ಈವರೆಗೂ ಅನಸೂಯ ಅವರನ್ನು ಗುರಿಯಾಗಿಸಿ ನಿಂದಿಸುತ್ತಲೇ ಇದ್ದಾರೆ.

    ಅನುಸೂಯ ಅವರನ್ನು ಆಂಟಿ ಎಂದು ಕರೆಯುತ್ತಿದ್ದಾರೆ. ಅನುಸೂಯ ಅವರ ಕುಟುಂಬವನ್ನು ಎಳೆತಂದು ಕೆಟ್ಟ ಭಾಷೆಗಳಲ್ಲಿ ನಿಂದನೆ ಮಾಡುತ್ತಿದ್ದಾರೆ. ವಿಜಯ್​ ಅಭಿಮಾನಿಗಳು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಆದರೆ, ಯಾವುದಕ್ಕೂ ಹೆದರದ ಅನಸೂಯ ತಮ್ಮ ರೀತಿಯಲ್ಲಿ ತಿರುಗೇಟ ನೀಡುತ್ತಿದ್ದಾರೆ. ಅದರಲ್ಲೂ ನೆಟ್ಟಿಗನೊಬ್ಬ ನಿಮ್ಮ ರೇಟ್​ ಎಷ್ಟು ಎಂದು ಕಾಮೆಂಟ್​ ಮಾಡಿದ್ದಾನೆ. ಇದಕ್ಕೆ ತಿರುಗೇಟು ನೀಡಿರುವ ಅನಸೂಯ ನಿಮ್ಮ ಸಹೋದರಿಯನ್ನೋ ಅಥವಾ ನಿಮಗೆ ಮದುವೆ ಆಗಿದ್ದರೆ, ಅವರಿಗೆ ಒಂದು ದಿನಕ್ಕೆ ಎಷ್ಟು? ಎಂದು ಕೇಳಿದರೆ ಏನ್ ಹೇಳುತ್ತೀರಾ? ಎಂದಿದ್ದಾರೆ.

    ನಿನ್ನ ರೇಟ್​ ಎಷ್ಟು ಎಂದು ಕೇಳಿದ ವಿಜಯ್​ ದೇವರಕೊಂಡ ಫ್ಯಾನ್ಸ್​ಗೆ ಅನಸೂಯ ಕೊಟ್ಟ ತಿರುಗೇಟು ಹೀಗಿತ್ತು...

    ಏನಿದು ಅರ್ಜುನ್​ ರೆಡ್ಡಿ ವಿವಾದ?
    ಐದು ವರ್ಷಗಳ ಹಿಂದೆ ಬಿಡುಗಡೆಯಾದ ವಿಜಯ್​ ನಟನೆಯ ಅರ್ಜುನ್​ ರೆಡ್ಡಿ ಸಿನಿಮಾ ಸೂಪರ್​ ಹಿಟ್​​ ಆಗಿತ್ತು. ಆದರೆ, ಅದರಲ್ಲಿ ತಾಯಿಯ ಬಗೆಗಿನ ಕೆಟ್ಟ ಬೈಗುಳ ಭಾರೀ ವಿವಾದ ಹೆಬ್ಬಿಸಿತ್ತು. ಅನೇಕರು ಮಹಿಳೆಯರು ಬೈಗುಳದ ವಿರುದ್ಧ ಧ್ವನಿಯೇರಿಸಿದ್ದರು. ಅದರಲ್ಲಿ ಅನಸೂಯ ಭಾರಧ್ವಜ್​ ಕೂಡ ಒಬ್ಬರು. ಅರ್ಜುನ್​ ರೆಡ್ಡಿ ಸಿನಿಮಾ ಕಾರ್ಯಕ್ರಮದಲ್ಲಿಯೂ ವಿಜಯ್​ ಆ ಡೈಲಾಗ್​ ಅನ್ನು ಎಲ್ಲರ ಎದುರು ಹೇಳಿದಕ್ಕೆ ಅನಸೂಯ ಕೆಂಡಾಮಂಡಲವಾಗಿದ್ದರು. ನೇರವಾಗಿಯೇ ವಿಜಯ್​ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಟಿವಿ ಚರ್ಚಾ ಕಾರ್ಯಕ್ರಮಗಳಲ್ಲೂ ಅನಸೂಯಾ ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದರು. ಆದರೆ, ಯಾವುದಕ್ಕೂ ವಿಜಯ್​ ಮಾತ್ರ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಐದು ವರ್ಷಗಳ ಬಳಿಕ ಅನಸೂಯ ಮತ್ತೊಮ್ಮೆ ವಿಜಯ್​ ವಿರುದ್ಧ ಟ್ವೀಟ್​ ಮಾಡಿದ್ದಾರೆ. ಲೈಗರ್​ ಸಿನಿಮಾದ ಸೋಲನ್ನು ಕರ್ಮಕ್ಕೆ ಹೋಲಿಕೆ ಮಾಡಿ ಟ್ವೀಟ್​ ಮಾಡುವ ಮೂಲಕ ವಿಜಯ್​ಗೆ ತಿರುಗೇಟು ನೀಡಿದ್ದಾರೆ. (ಏಜೆನ್ಸೀಸ್​)

    ಲೈಗರ್​ ಸಿನಿಮಾ ಸೋಲು: ನಟಿ ಅನಸೂಯ ವಿರುದ್ಧ ಮುಗಿಬಿದ್ದ ವಿಜಯ್​ ದೇವರಕೊಂಡ ಫ್ಯಾನ್ಸ್!

    ಬಾಲಿವುಡ್​ ಸಾಂಗ್​ಗೆ ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸಿದ ಮಹಿಳೆಯರು! ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ

    ಬಿಜೆಪಿ ನಾಯಕಿ ಸೊನಾಲಿ ಸಾವು ಪ್ರರಕಣ: ಗೋವಾ ಪೊಲೀಸರಿಂದ ಮತ್ತೊಬ್ಬ ಡ್ರಗ್ಸ್​ ಪೆಡ್ಲರ್​ ಅರೆಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts